Site icon Vistara News

Yadgir Election Results: ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚೆನ್ನಾರೆಡ್ಡಿ ಪಾಟೀಲ ಗೆಲುವು

yadgir assembly winner congress chennareddy patil thunnur

ಯಾದಗಿರಿ: ಯಾದಗಿರಿ ಜಿಲ್ಲೆಯ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರು 53,802 ಮತ ಪಡೆದು, ಗೆಲುವು ಸಾಧಿಸಿದ್ದಾರೆ.

ಈ ಸಲ ಚುನಾವಣೆ ಕಣದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಕಾಂಗ್ರೆಸ್‌ನಿಂದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಜೆಡಿಎಸ್‌ನಿಂದ ಎ.ಬಿ. ಮಾಲಕರಡ್ಡಿ, ಪಕ್ಷೇತರರಾಗಿ ಹಣಮೇಗೌಡ ಬೀರನಕಲ್ ಕಣದಲ್ಲಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿಯ ವೆಂಕಟ ರೆಡ್ಡಿ ಮುದ್ನಾಳ್ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಡಾ.ಎ. ಬಿ ಮಾಲಕರೆಡ್ಡಿ 12,881 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಇಲ್ಲಿ ಇರುವ ಒಟ್ಟು ಮತಗಳು 231,116. ಪುರುಷರು 114,900 ಹಾಗೂ ಸ್ತ್ರೀಯರು 116,192.

ಇದನ್ನೂ ಓದಿ: Heggadadevankote Election Results : ಎಚ್​​ಡಿ ಕೋಟೆಯಲ್ಲಿ ಕಾಂಗ್ರೆಸ್​ನ ಅನಿಲ್​ ಚಿಕ್ಕಮಾದುಗೆ ಗೆಲುವು

Exit mobile version