Site icon Vistara News

ಮೈಸೂರು ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ

Yaduveer Krishnadatta Chamaraja Wadiyar

ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಜ್ಜಿ ಉಮಾ ಮದನ್ ಗೋಪಾಲರಾಜ್ ಅರಸ್ (83) ಅವರು ವಯೋಸಹಜ ಕಾಯಿಲೆಯಿಂದ ನಗರದ ಲಕ್ಷ್ಮಿಪುರಂನ ನಿವಾಸದಲ್ಲಿ ಬುಧವಾರ ನಿಧನರಾದರು. ಇವರು ಯದುವೀರ್ ತಂದೆ ಸ್ವರೂಪ್ ಗೋಪಾಲ್​ ರಾಜೇ ಅರಸ್​ ಅವರ ತಾಯಿಯಾಗಿದ್ದಾರೆ. ಗುರುವಾರ ಅಂತ್ಯಸಂಸ್ಕಾರ ನಡೆಯಲಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | KSOU Scam: ಕೆಎಸ್‌ಒಯು ಹಗರಣದ ತನಿಖೆಗೆ ಸಿಬಿಐ ಎಂಟ್ರಿ

Exit mobile version