ಬೆಂಗಳೂರು: ಖ್ಯಾತ ವಾಣಿಜ್ಯೋದ್ಯಮಿ ಕಿರಣ್ ಮಜುಂದಾರ್ ಶಾ ಅವರ ತಾಯಿ ಯಾಮಿನಿ ಮಜುಂದಾರ್ (90) ಶುಕ್ರವಾರ ನಿಧನ ಹೊಂದಿದ್ದಾರೆ. ʼನನ್ನ ಜೀವನದ ದೊಡ್ಡ ಪ್ರಕಾಶಮಾನವಾದ ಬೆಳಕು ಹೊರಟು ಹೋಗಿದೆ. ನನ್ನ ಪ್ರೀತಿಯ ತಾಯಿ ಯಾಮಿನಿ ನಿಧನರಾದರು. ಓಂ ಶಾಂತಿʼ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಕಿರಣ್ ಮಜುಂದಾರ್ ಶಾ ಬರೆದುಕೊಂಡಿದ್ದಾರೆ.
ʼನನ್ನ ತಾಯಿ ಸಾಮಾನ್ಯ ತಾಯಿಯಲ್ಲ. ಎಲ್ಲಾ ಇತರ ಅಮ್ಮಂದಿರಂತೆ, ನಿಸ್ವಾರ್ಥ ಮತ್ತು ಕಾಳಜಿಯುಳ್ಳ ಮತ್ತು ನಿಜವಾಗಿಯೂ ಸಾಕಷ್ಟು ಧೈರ್ಯಶಾಲಿ. ನನ್ನ ತಾಯಿ ಯಾಮಿನಿ ಮಜುಂದಾರ್ ಅವರು 89ನೇ ವಯಸ್ಸಿನಲ್ಲೂ ತಮ್ಮದೇ ಆದ ಲಾಭದಾಯಕ ಡ್ರೈ-ಕ್ಲೀನಿಂಗ್ ಮತ್ತು ಲಾಂಡ್ರಿ ವ್ಯಾಪಾರವನ್ನು ನಡೆಸುತ್ತಿದ್ದರು. ಅವರು ಮತ್ತು ಅವರ ಐದು ಸದಸ್ಯರ ತಂಡವು ನಿತ್ಯ 12 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತುʼ ಎಂದು ಶಾ ನೆನಪಿಸಿಕೊಂಡಿದ್ದಾರೆ.
ʼಸ್ವಾವಲಂಬನೆಯ ಮನೋಭಾವದಿಂದ ಪ್ರೇರಿತರಾಗಿದ್ದ ಅವರು ಸ್ವಂತ ಉದ್ಯಮ ನಡೆಸಲು ತಮ್ಮ ಮನೆಯನ್ನು ಅಡವಿಟ್ಟಿದ್ದರು. 1990ರ ದಶಕದಲ್ಲಿ ಪ್ರಾರಂಭಿಕ ಹಂತದ ಉದ್ಯಮಕ್ಕಾಗಿ ಹಣ ಸಂಗ್ರಹಿಸಲು ತಮ್ಮ ಪತಿಯ ಷೇರುಗಳನ್ನೂ ಮಾರಾಟ ಮಾಡಿದ್ದರು. ಅವರು 30 ಜನರ ತಂಡದೊಂದಿಗೆ ತಮ್ಮ ಉದ್ಯಮವನ್ನು ಮುನ್ನಡೆಸಿದರು. 18 ಮಹಿಳೆಯರು ಮತ್ತು 12 ಪುರುಷರು ಆ ತಂಡದಲ್ಲಿದ್ದರು. ಅವರು ತಮ್ಮ ಸ್ವಂತ ಕುಟುಂಬದವರಂತೆ ಅವರನ್ನು ನೋಡಿಕೊಳ್ಳುತ್ತಿದ್ದರುʼ ಎಂದು ಕಿರಣ್ ಶಾ ಹೇಳಿದ್ದಾರೆ.
ಇದನ್ನೂ ಓದಿ| ಬೇಲೂರು ಚೆನ್ನಕೇಶವ ದೇವಾಲಯದ ಅರ್ಚಕರು ನಿಧನ