Site icon Vistara News

Yatnal Vs Moulvi: ಮೌಲ್ವಿ ಜತೆ ಬ್ಯುಸಿನೆಸ್‌; ಹೀಗಂದವರ ಮೇಲೆ ಮಾನನಷ್ಟ ಮೊಕದ್ದಮೆ: ಯತ್ನಾಳ್

Basanagowda Patil Yatnal

ಬೆಳಗಾವಿ: ವಿಜಯಪುರದ ಧರ್ಮಗುರು, ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಷ್ಮಿ (Tanveer Peera) ಮತ್ತು ಅವರ ವಠಾರದಲ್ಲೇ ವಾಸವಾಗಿರುವ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal) ನಡುವಿನ ʻಐಸಿಸ್‌ ಯುದ್ಧʼ ಇನ್ನಷ್ಟು (Yatnal Vs Moulvi) ಜೋರಾಗಿದೆ. ಈ ನಡುವೆ ಯತ್ನಾಳ್‌ ಮತ್ತೊಮ್ಮೆ ಗುಡುಗಿದ್ದು, ಮೌಲ್ವಿ ಕುಟುಂಬದ ಜತೆಗೆ ನನಗೆ ವ್ಯವಹಾರ ಪಾಲುದಾರಿಕೆ ಇಲ್ಲ. ಮೌಲ್ವಿಗೂ ಆ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಅವರ ಜತೆ ಪಾರ್ಟನರ್‌ಶಿಪ್ ಬ್ಯುಸಿನೆಸ್ (Partnership Business) ಮಾಡುತ್ತಿದ್ದೇನೆ ಎನ್ನುವವರ ವಿರುದ್ಧ ಮಾನನಷ್ಟ (defamation case) ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಷ್ಮಿ ಒಬ್ಬ ಭಯೋತ್ಪಾದಕ. ನಾನು ಅದರಲ್ಲಿ ಪಾಲುದಾರನಲ್ಲ. 50-60 ವರ್ಷದ ಹಿಂದಿನ ಲೀಸ್ ಪ್ರಾಪರ್ಟಿ ಅದು. ಮುನಿಸಿಪಲ್ ಆಸ್ತಿ, ನನ್ನ ಆಸ್ತಿ ಅಲ್ಲ. ಅದರ ಮೂಲಕ ಮಾಲೀಕರಾಗಿದ್ದವರು ನಮ್ಮ ತಂದೆ. 55 ವರ್ಷಗಳ ಹಿಂದೆ ನಮ್ಮ ತಂದೆ ಜತೆಗೆ ನಾಲ್ಕೈದು ಜನ ಇದ್ದರು. ಅದರಲ್ಲಿ ಇಬ್ಬರು ಮುಸ್ಲಿಂ, ಇಬ್ಬರು ಹಿಂದುಗಳಿದ್ದರು. ಒಬ್ಬ ಮುಸ್ಲಿಂ ಮಾರಿ ಹೋದ. ಲೀಸ್‌ ಹೋಲ್ಡರ್‌ಗೂ ಈ ಭಯೋತ್ಪಾದಕನಿಗೂ ಯಾವುದೇ ಸಂಬಂಧವಿಲ್ಲ. ಈ ಎಲ್ಲವೂ ತನಿಖೆ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಡಿ.12ರಂದು ಬೆಳಗಾವಿಯಲ್ಲಿ ಸುವರ್ಣ ಸಂಭ್ರಮ; ಶಾಸಕರ ಭವನ ನಿರ್ಮಾಣಕ್ಕೆ ಸಿಎಂಗೆ ಮನವಿ: ಯು.ಟಿ. ಖಾದರ್

ಸಿದ್ದರಾಮಯ್ಯ ಅವರದ್ದು ವಿಡಿಯೊ ಬಿಟ್ಟಿದ್ದೇನೆ. ಪೊಲೀಸ್ ಇಲಾಖೆಯವರು ಮೌಲ್ವಿ ಮನೆಗೆ ಹೋಗಬಾರದು ಎಂದು ಸ್ಪಷ್ಟನೆ ಹೇಳಿದ್ದಾರೆ. ಗಂಭೀರ ಆರೋಪವಿದೆ. ಹಾಗಾಗಿ ಅವರ ಮನೆಗೆ ಹೋಗಬಾರದು ಎಂದು ಹೇಳಿದ್ದಾರೆ. ಮುಸ್ಲಿಂರ ಮತಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದಾರೆ. ಪೊಲೀಸ್ ಅಧಿಕಾರಿಗಳು ಹೇಳಿದರೂ ನಿಮ್ಮ ಮನೆಗೆ ಬಂದಿದ್ದೇನೆ ಎಂದು ಉದ್ದಟತನದಲ್ಲಿ ಹೇಳಿದ್ದಾರೆ. ಎಂ.ಬಿ. ಪಾಟೀಲ್ ಅವರು ಒತ್ತಡ ಹಾಕಿ ಕರೆದುಕೊಂಡು ಹೋಗಿದ್ದಾರೆ. ನಾನು ಅವರ ಜತೆ ಪಾರ್ಟನರ್‌ಶಿಪ್ ಬ್ಯುಸಿನೆಸ್ ಮಾಡುತ್ತಿದ್ದೇನೆ ಎನ್ನುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಯತ್ನಾಳ್ ಹೇಳಿದರು.

ಎನ್‌ಐಎಗೆ ಮಾಹಿತಿ ಕೊಡುತ್ತಿದ್ದೇನೆ

ಎನ್ಐಎ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಿದ್ದೇನೆ. ನಿನ್ನೆ ಕೆಲ ಮಾಹಿತಿ ಕೊಡುತ್ತಿದ್ದೇನೆ. ಇನ್ನಷ್ಟು ಮಾಹಿತಿ ಸಿಗುತ್ತಿದೆ‌. ಮುಸ್ಲಿಂರ ಜತೆಗೆ ಯಾವುದೇ ರೀತಿ‌ ವ್ಯವಹಾರವಿಲ್ಲ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಪಷ್ಟಪಡಿಸಿದರು.

ಬಸನಗೌಡ ಪಾಟೀಲ್‌ ಯತ್ನಾಳ ಹುಚ್ಚ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಹುಚ್ಚರು ಆಗಿದ್ದಾರೆ? ಯಾರ ಎದೆ ಬಡಿತ ಜಾಸ್ತಿ ಆಗಿದೆ? ಯಾರು ಮುಂದೆ ನಾರಾಯಣ ಹೃದಯಾಲಯಕ್ಕೆ ಸೇರುವವರು ಇದ್ದಾರೆ? ಸಿದ್ದರಾಮಯ್ಯ ಅವರು ಯಾವ ಆಸ್ಪತ್ರೆಗೆ ಸೇರುತ್ತಾರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದಲ್ಲಿ ಭೀತಿ ಇರುವುದರಿಂದ ಹತಾಶೆ ಆಗಿದ್ದಾರೆ. ಮೌಲ್ವಿಗಳ, ದೇಶದ್ರೋಹಿಗಳ ಸಭೆಗೆ ಹೋಗುತ್ತಿದ್ದಾರೆ. ನನಗೆ ಮುಸ್ಲಿಂರ ಬೆಂಬಲ ಇದೆ ಎಂದು ಹೈಕಮಾಂಡ್‌ಗೆ ಭಯಪಡಿಸಲು ಹೊರಟಿದ್ದಾರೆ ಎಂದು ಹೇಳಿದರು.

ಕೊಲೆ ಆರೋಪಿ ಮೌಲ್ವಿ ದೇಶ ಬಿಟ್ಟು ಪಲಾಯನ ಸಾಧ್ಯತೆ; ಯತ್ನಾಳ್‌ ಬಾಂಬ್‌

ತನ್ವೀರ್‌ ಪೀರಾ ಅವರಿಗೆ ಐಸಿಎಸ್‌ ಸಂಪರ್ಕವಿದೆ ಎಂದು ಆರೋಪ ಮಾಡಿದ್ದ ಯತ್ನಾಳ್‌, ಅದರ ಜತೆಗೇ ಆತನ ಕೊಲೆ ಪ್ರಕರಣವೊಂದರ ಆರೋಪಿ ಎಂದೂ ಹೇಳಿದ್ದರು. ಈಗ ಕೊಲೆ ಆರೋಪಿ ಎಂಬುದಕ್ಕೆ ಪೂರಕವಾಗಿ ಕೊಲೆಯಾದವನ ಪತ್ನಿ ನೀಡಿದ ದೂರನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ. ಅದರ ಜತೆಗೆ ತನ್ವೀರ್‌ ಪೀರ್‌ ದೇಶ ಬಿಟ್ಟು ಓಡಿ ಹೋಗುವ ಅಪಾಯವೂ ಇದೆ ಎಂದು ಎಚ್ಚರಿಸಿದ್ದಾರೆ.

ಯತ್ನಾಳ್‌ ಸರಣಿ ಟ್ವೀಟ್‌ ನಲ್ಲಿ ಹೇಳಿರುವುದೇನು?

1.ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ.

2.ಕೊಲೆ ಕೇಸಿನಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ನಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್ ನಿಂದ ತೆಗಿಸಲಾಯಿತು..

3.ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜ್‌ಶೀಟ್‌ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ

4.ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿ/ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು..

5.ಈತನ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರಧಲ್ಲಿ ಹಂಚಿಕೊಳ್ಳಲಿದ್ದೇನೆ. ಈತ ದೇಶದಿಂದ ಪೇರಿಕೀಳುವ ಸಾಧ್ಯತೆಗಳಿದ್ದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಪೀರ್‌ ಮೇಲೆ ನಿಗಾ ವಹಿಸಬೇಕು.

ಇದನ್ನೂ ಓದಿ: ಉಗ್ರರ ಪರವೆಂದು ಸಾಬೀತಾದ್ರೆ ದೇಶ ತೊರೆಯುವೆ; ಯತ್ನಾಳ್‌ಗೆ ಮುಸ್ಲಿಂ ಧರ್ಮಗುರು ಸವಾಲ್‌

ಕೊಲೆಯಾದವನ ಹೆಂಡತಿ ಬರೆದ ಪತ್ರದಲ್ಲಿ ಏನಿದೆ?

ವಿಜಯಪುರ ಮಹಾನಗರಪಾಲಿಕೆ ಸದಸ್ಯೆಯಾಗಿದ್ದ ನಿಶಾತ ಹೈದರ್‌ ಅವರ ಪತಿ ಹೈದರ್‌ ಅಲಿ ನದಾಫ್‌ ಅವರನ್ನು 2023ರ ಮೇ 6ರಂದು ಕೊಲೆ ಮಾಡಲಾಗಿತ್ತು. ತನ್ನ ಗಂಡನ ಹಂತಕರು ಜೈಲಿನಿಂದ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ. ಪ್ರಕರಣದ ಆರೋಪಿಗಳಾದ ಅಸೀಮುಲ್ಲಾ ಖಾದ್ರಿ, ತನ್ವೀರ್‌ ಪೀರಾ ಪಿರಜಾದೆ ಮತ್ತು ರಾಜೀವ್‌ ಪೀರಾ ಪಿರಜಾದೆ ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. ಪೀರಜಾದೆಯ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖವಿದೆ.

Exit mobile version