ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿಯ ಎಸ್ ಆರ್ ವಿಶ್ವನಾಥ ( SR Vishwanath) (138565) ಮತ್ತೆ ಜಯ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ 2018ರಲ್ಲಿ ಎಸ್ ಆರ್ ವಿಶ್ವನಾಥ್ ಅವರು 120110 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ನ ಎಂ.ಎಂ ಹನುಮಂತೇಗೌಡ (77607) ಅವರಿಗಿಂತ 42,503 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು.
1962ರಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ಬದಲಿಗೆ ಯಶವಂತಪುರ, ಯಲಹಂಕ, ಉತ್ತರಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳು ರಚನೆಗೊಂಡವು. ಒಟ್ಟು 4 ಲಕ್ಷ ಮತದಾರರು ಇಲ್ಲಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಯಲಹಂಕ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಕೆಲವು ಪ್ರದೇಶಗಳನ್ನು ಕಳೆದುಕೊಂಡ ಯಲಹಂಕ ಬಿಬಿಎಂಪಿ ವ್ಯಾಪ್ತಿಯ ಚಾಮುಂಡೇಶ್ವರಿ, ಅಟ್ಟೂರು, ಯಲಹಂಕ, ಕೆಂಪೇಗೌಡ ವಾರ್ಡ್ಗಳನ್ನು ಒಳಗೊಂಡಿದೆ.
2008ರಲ್ಲಿ ಎಸ್ಆರ್ ವಿಶ್ವ ವಿಶ್ವನಾಥ್ ಅವರು ಕಾಂಗ್ರೆಸ್‌ನ ಬಿ ಚಂದ್ರಪ್ಪ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಇದು ಬಿಜೆಪಿಗೆ ಸಿಕ್ಕಿದ ಮೊದಲ ಗೆಲುವು. 2013ರಲ್ಲಿ ಚಂದ್ರಪ್ಪ ಜನತಾ ದಳದಿಂದ ಸ್ಪರ್ಧಿಸಿದರೂ ಎಸ್ ಆರ್ ವಿಶ್ವನಾಥ್ ಎದುರು ಸೋಲನುಭವಿಸಿದರು.