Site icon Vistara News

Yellapur Election Results: ವಿ.ಎಸ್.‌ ಪಾಟೀಲ್‌ ಯಲ್ಲಾ’ಪುರ’ ಪ್ರವೇಶಕ್ಕೆ ಅಡ್ಡಿಯಾದ ಹೆಬ್ಬಾರ

Yellapur Election results Shivaram Hebbar

ಶಿರಸಿ: ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ (Yellapur Election Results) ಪ್ರಬಲ ಪೈಪೋಟಿ ನಡುವೆ ಬಿಜೆಪಿ ಪಕ್ಷದ ಶಿವರಾಮ ಹೆಬ್ಬಾರ ಅವರು ಜಯಗಳಿಸಿದ್ದಾರೆ. ಕಾಂಗ್ರೆಸ್‍ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‍ಗೆ ಜಿಗಿದ ನಾಯಕರ ನಡುವೆ ನೇರಾನೇರ ಹಣಾಹಣಿ ನಡೆದಿದ್ದು, ಅಂತಿಮವಾಗಿ ಹೆಬ್ಬಾರ್‌ ಅವರಿಗೇ ಮತದಾರ ಜೈ ಅಂದಿದ್ದಾರೆ.

ಮತ್ತೆ ಗೆದ್ದ ಹೆಬ್ಬಾರ

ಯಲ್ಲಾಪುರ, ಮುಂಡಗೋಡ ತಾಲೂಕುಗಳ ಜತೆಗೆ ಶಿರಸಿ ತಾಲೂಕಿನ ಬನವಾಸಿ ಹೋಬಳಿಯನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಹಾಲಿ ಕಾರ್ಮಿಕ ಸಚಿವರಾಗಿರುವ ಶಿವರಾಮ ಹೆಬ್ಬಾರ ಅವರು ಪ್ರಬಲ ಪೈಪೋಟಿಗಳ ನಡುವೆ ಗೆಲುವು ಸಾಧಿಸಿದ್ದಾರೆ. 2013 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 2 ಬಾರಿ ಹಾಗೂ 2019ರಲ್ಲಿ ಆಪರೇಷನ್‌ ಕಮಲಕ್ಕೊಳಗಾಗಿ ಉಪ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲುವು ಸಾಧಿಸಿರುವ ಶಿವರಾಮ ಹೆಬ್ಬಾರ್‌ ಈ ಬಾರಿ ನಾಲ್ಕನೇ ಗೆಲುವನ್ನು ಸಾಧಿಸಿದ್ದಾರೆ.

ಪ್ರಬಲ ಪೈಪೋಟಿ ನೀಡಿದ ವಿ.ಎಸ್.‌ ಪಾಟೀಲ್‌

ಬಿಜೆಪಿಯಲ್ಲಿದ್ದು ಈ ಬಾರಿ ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರು ಪ್ರಬಲ ಪೈಪೋಟಿಯನ್ನೇ ನೀಡಿದ್ದಾರೆ. ಇವರು ಇಷ್ಟು ವರ್ಷಗಳ ಕಾಲ ಬಿಜೆಪಿಯಲ್ಲಿ ಇದ್ದಿದ್ದರಿಂದ ಆ ಪಕ್ಷದ ಕೆಲವು ಮತಗಳನ್ನು ಪಡೆದುಕೊಂಡಿದ್ದಾರಾದರೂ ಗೆಲ್ಲಲು ಇದು ಸಾಧ್ಯವಾಗಿಲ್ಲ.

ಇದನ್ನೂ ಓದಿ: Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಭಾರಿ ಸೋಲು

ಕಳೆದ ಬಾರಿಯ ಫಲಿತಾಂಶ ಏನು?
ಶಿವರಾಮ್ ಹೆಬ್ಬಾರ್(ಕಾಂಗ್ರೆಸ್): 66,290 | ವಿ.ಎಸ್. ಪಾಟೀಲ್(ಬಿಜೆಪಿ): 64,807| ಗೆಲುವಿನ ಅಂತರ: 1,483
2019ರ ಉಪ ಚುನಾವಣೆ : ಶಿವರಾಮ್ ಹೆಬ್ಬಾರ್(ಬಿಜೆಪಿ): 80,442 | ಭೀಮಣ್ಣ ನಾಯ್ಕ(ಕಾಂಗ್ರೆಸ್): 49,634 | ಗೆಲುವಿನ ಅಂತರ: 30,808

ಈ ಬಾರಿಯ ಚುನಾವಣಾ ಫಲಿತಾಂಶ
ಶಿವರಾಮ್ ಹೆಬ್ಬಾರ್(ಬಿಜೆಪಿ): 74,699 | ವಿ.ಎಸ್. ಪಾಟೀಲ್(ಕಾಂಗ್ರೆಸ್‌): 70,695 | ಗೆಲುವಿನ ಅಂತರ: 4,004

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version