Site icon Vistara News

Yoga Day 2022 | ಮೋದಿಗೆ ಬೆಳ್ಳಿ ತಟ್ಟೆಯಲ್ಲಿ ಅರಮನೆ ಉಪಾಹಾರ

silver itirenary palace mysuru

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈಸೂರು ರಾಜಮನೆತನದ ಉಪಾಹಾರವನ್ನು ಮಂಗಳವಾರ ಬೆಳಗ್ಗೆ ಏರ್ಪಡಿಸಲಾಯಿತು. ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರ ಆಹ್ವಾನದ ಮೇರೆಗೆ, ಯೋಗ ದಿನದ ಕಾರ್ಯಕ್ರಮದ ನಂತರ ಮೋದಿ ಉಪಾಹಾರ ಸ್ವೀಕರಿಸಲಿದ್ದಾರೆ.

ಯೋಗ ಕಾರ್ಯಕ್ರಮದ ನಂತರ ಮಾನಾಡಿದ ಪ್ರಮೋದಾ ದೇವಿ ಒಡೆಯರ್‌, ಯೋಗಕ್ಕೆ ಮೈಸೂರು ಆದಿ ಎನ್ನಬಹುದು. ಅಂತಹ ಮೈಸೂರಿನಲ್ಲಿ, ದೇಶದ ೭೫ನೇ ಸ್ವಾತಂತ್ರ್ಯ ಆಚರಿಸುತ್ತಿರುವಾಗ ಯೋಗ ದಿನದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು ಅತ್ಯಂತ ಸಂತಸ ತಂದಿದೆ. ಮೋದಿಯವರಿಗೆ ಉಪಾಹಾರದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸಿನ ಜತೆಗೆ ಮೋದಿ ಅವರ ಇಷ್ಟದ ಉತ್ತರ ಭಾರತದ ತಿನಿಸುಗಳನ್ನೂ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Yoga Day 2022 | ಪ್ರಧಾನಿ ಮೋದಿ ಪ್ರದರ್ಶಿಸಿದ ಆಸನಗಳು ಯಾವುವು? ಇವುಗಳ ಮಹತ್ವವೇನು?

ಎರಡು ದಿನದ ಪ್ರವಾಸದ ಮೊದಲ ದಿನ ಮೋದಿ ಹೆಚ್ಚು ಸಮಯ ಬೆಂಗಳೂರಿನಲ್ಲಿದ್ದರು. ಸೋಮವಾರ ಬೆಂಗಳೂರಿಗೆ ಬಂದಿಳಿದ ಮೋದಿ ಅವರಿಗೆ ವಿಶೇಷವಾದ ಊಟ ಉಪಚಾರದ ಮೆನು ಸಿದ್ಧಪಡಿಸಲಾಗಿತ್ತು. ಆಹಾರದಲ್ಲಿ ಸಕ್ಕರೆ ಮತ್ತು ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸದಂತೆ ಮೋದಿಯವರ ತಂಡ ಸೂಚನೆ ನೀಡಿತ್ತು. ಸೋಮವಾರ ಬೆಳಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್‌, ಬ್ರೆಡ್‌, ಬಟರ್‌, ಮಿಕ್ಸ್‌ ಫ್ರೂಟ್‌ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನ ಊಟಕ್ಕೆ ವೆಜಿಟೆಬಲ್‌ ಸೂಪ್‌, ಮಸಾಲಾ ಮಜ್ಜಿಗೆ, ರೋಟಿ, ಜೀರಾ ರೈಸ್‌, ದಾಲ್‌ ಹಾಗೂ ಮಿಕ್ಸ್ಡ್ ಫ್ರೂಟ್‌ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯ ಊಟಕ್ಕೆ ಕಿಚಡಿ,‌ ಗುಜುರಾತಿ ಕರಿ, ರೋಟಿ, ದಾಲ್‌, ರೈಸ್‌, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ಡ್ ಫ್ರೂಟ್‌ ಒಳಗೊಂಡ ಮೆನು ಸಿದ್ಧಪಡಿಸಲಾಗಿತ್ತು. ಆದರೆ ಮೈಸೂರಿನಲ್ಲಿ ರಾಜಮನೆತನದ ಉಪಾಹಾರದಲ್ಲಿ ಹೆಚ್ಚಿನ ವಿಶೇಷತೆ ಇತ್ತು.

ಮೈಸೂರು ಪಾಕ್‌ (ಪ್ರಾತಿನಿಧಿಕ ಚಿತ್ರ)

ಅರಮನೆ ನಿವಾಸದಲ್ಲಿ ಪ್ರಮೋದಾದೇವಿ ಒಡೆಯರ್‌ ಅವರು ಸ್ವಾಗತಿಸಿದರು. ಇಲ್ಲಿನ ಉಪಾಹಾರದ ವಿಶೇಷವೆಂದರೆ, ಉಪಾಹಾರದ ಜತೆಗೆ ಮೈಸೂರಿನ ಜತೆಗೇ ಕೇಳಿಬರುವ ಮೈಸೂರು ಪಾಕ್‌ ಅನ್ನು ಮೋದಿ ಸವಿದರು. ಅರಮನೆಯಲ್ಲಿಯೇ ಸಾಂಪ್ರದಾಯಿಕ ಶೈಲಿಯಲ್ಲಿ ಬಾಣಸಿಗ ಕಾಕಾಸುರ ಮಾದಪ್ಪ ತಯಾರಿಸಿದ್ದಾರೆ.

ಇಷ್ಟೆಲ್ಲ ವಿಶೇಷ ಆಹಾರದ ಜತೆಗೆ ಅರಮನೆಯ ಆತ್ಮೀಯತೆ ಹಾಗೂ ಅದೆಲ್ಲದಕ್ಕೂ ಕಲಶವಿಟ್ಟಂತೆ ಬೆಳ್ಳಿ ತಟ್ಟೆಯಲ್ಲಿ ಮೋದಿ ಉಪಾಹಾರ ಸೇವಿಸಲಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಶೈಲಿಯ ಉಪಾಹಾರ ಸೇವಿಸಿ ೮ನೇ ಅಂತಾರಾಷ್ಟರೀಯ ಯೋಗ ದಿನದ ಕಾರ್ಯಕ್ರಮಗಳನ್ನು ಮೋದಿ ಸಮಾಪನಗೊಳಿಸಲಿದ್ದಾರೆ.

ಇದನ್ನೂ ಓದಿ | Yoga Day 2022 | ಮೋದಿ ಹೇಳಿದ ʼಗಾರ್ಡಿಯನ್‌ ರಿಂಗ್‌ ಆಫ್‌ ಯೋಗʼ ಎಂದರೇನು?

Exit mobile version