Site icon Vistara News

Yoga Day 2023: ಶಾಲೆಗಳಲ್ಲಿ ಯೋಗಾಭ್ಯಾಸಕ್ಕೆ ಸರ್ಕಾರದ ಸಂಪೂರ್ಣ ಸಹಕಾರ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

#image_title

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಆಯುಷ್ ಇಲಾಖೆಯ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಯೋಗ ದಿನದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಸಭಾಪತಿ ಬಸವರಾಜ ಹೊರಟ್ಟಿ, ಸಭಾಧ್ಯಕ್ಷ ಯು.ಟಿ‌.ಖಾದರ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಶ್ವಾಸಗುರು ಹಾಗೂ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಸಚಿವ ದಿನೇಶ್ ಗುಂಡೂರಾವ್, ಕ್ರೀಡಾಪಟುಗಳಾದ ವೆಂಕಟೇಶ ಪ್ರಸಾದ್‌, ಅಂಜು ಬಾಬಿ ಜಾರ್ಜ್‌, ವಿಧಾನ ಪರಿಷತ್ ಸದಸ್ಯ ಶರವಣ, ಶಾಸಕ ರಿಜ್ವಾನ್ ಹರ್ಷದ್ ಸೇರಿ ಅನೇಕರು ಯೋಗ ಅಭ್ಯಾಸ ಮಾಡಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಯೋಗ ನಮ್ಮ ದೇಶ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ. ಇದು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟು ಹೊಗಿದ್ದಾರೆ. ವಿಶ್ವಕ್ಕೆ ಯೋಗ ಕೊಡುಗೆಯನ್ನು ಕೊಟ್ಟಿದ್ದಾರೆ. ವಿಶ್ವದ ಎಲ್ಲ ಕಡೆ ಈ ದಿನಾಚರಣೆ ಮಾಡುತ್ತಾರೆ. ಯೋಗದಿಂದ ಸಾಕಷ್ಟು ಬದಲಾವಣೆ ಆಗುತ್ತದೆ. ಉತ್ಸಾಹ, ಚುರುಕು ದೈಹಿಕ ಬದಲಾವಣೆಗೆ ಯೋಗ ಸಹಕಾರಿ ಆಗುತ್ತದೆ. 30 ವರ್ಷಗಳ ಹಿಂದೆ ಕಾಲರಾ ಮಲೇರಿಯಾ ದಂತ ಕಾಯಿಲೆಗಳು ಬರುತ್ತಿದ್ದವು. ಈಗ ಹೃದಯಾಘಾತ, ಮನಸಿ ಒತ್ತಡ ಹೆಚ್ಚಾಗುತ್ತಿದೆ. ಯೋಗದಿಂದ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆ. ಯೋಗ ಅಭ್ಯಾಸಕ್ಕೆ ಸರ್ಕಾರ ಸಹಕಾರ ಕೊಡುತ್ತದೆ. ಶಾಲೆಗಳಲ್ಲೂ ಯೋಗ ಆಚರಣೆ ಮಾಡಲು ಸರ್ಕಾರ ಸಹಕಾರ ಕೊಡುತ್ತದೆ. ನಿಮ್ಮ ಬದುಕಿನ ಒಂದು ಭಾಗವಾಗಿ ಉಳಿದುಕೊಳ್ಳಲಿ ಎಂದರು.

ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಯೋಗ ದಿನಾಚರಣೆಯನ್ನ ಪ್ರತಿಯೊಂದು ಗ್ರಾಮದಲ್ಲು ಜಾಗೃತಿ ಮೂಡಿಸಬೇಕು. ಈ ದೇಶದ ಋಷಿಮುನಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ ಇದು. ಇದನ್ನ ಉಳಿಸಿಕೊಂಡು ಹೋಗಬೇಕು. ಇದು ನಮ್ಮ ಜವಾಬ್ದಾರಿ. ಮಾನಸಿಕ ಒತ್ತಡ ನಮಗೆಲ್ಲಾ ದೊಡ್ಡ ಸಮಸ್ಯೆ. ಮಾನಸಿಕ‌ ರೋಗಕ್ಕೆ ಮದ್ದಿಲ್ಲ. ಇದನ್ನ ದೂರಮಾಡಬೇಕಾದ್ರೆ ಯೋಗಾಭ್ಯಾಸ ಅಗತ್ಯವಾಗಿದೆ. ದ್ವೇಶ ಮುಕ್ತ ಸಮಾಜ ಮಾಡಬೇಕಾದ್ರೆ ಯೋಗದ ಪಾಠ ಕಲಿಸೋದು ಅವಶ್ಯಕ ಅಂತ ನಮ್ಮ ಶಾಸಕ ಸಚಿವರಿಗೆ ಮನವಿ ಮಾಡುತ್ತೇನೆ. ಯೋಗದ ಸಿಲಬಸ್ ಮಾಡಿ ಸರ್ಟಿಫಿಕೇಟ್ ಮಾಡಬೇಕು. ಯೋಗದ ರಾಯಭಾರಿಯಾಗಿ ರಾಜ್ಯಪಾಲರೇ ಆಗಬಹುದು ಎಂದರು.

ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ನಾನು ಇವತ್ತು ಮೊದಲ ಬಾರಿಗೆ ಯೋಗ ಮಾಡಿದ್ದೇನೆ. ಇನ್ಮುಂದೆ ಮುಂದುವರಿಸಬೇಕು ಅಂತ ಅನ್ನಿಸುತ್ತಿದೆ. ಸಾವಿರಾರು ವರ್ಷಗಳಿಂದ ಯೋಗಾ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ರಾಜಕಾರಣಿಗಳು, ಸರ್ಕಾರದಿಂದ ಯೋಗಕ್ಕೆ ಪಾಪ್ಯುಲಾರಿಟಿ ಬಂದಿಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನ ಯೋಗ ಹೊಂದಿದೆ ಎಂದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಯೋಗ ಪ್ರಾಚೀನ ಕಾಲದಲ್ಲೇ ಇತ್ತು. ಯೋಗ ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಅನುಕೂಲಕಾರಿಯಾಗಿದೆ. ಯೋಗ ಜನರನ್ನು ಒಂದು ಗೂಡಿಸುವ ಕೆಲಸ ಮಾಡುತ್ತಿದೆ. ನಾನು ಖುದ್ದು ಯೋಗ ಪ್ರಣಾಯಾಮ ಮಾಡಿ ಅದರ ಅನಕೂಲ ಪಡೆದುಕೊಂಡಿದ್ದೇನೆ. ನೀವು ಪ್ರಯತ್ನ ಮಾಡಿ ಎಂದು ಕರೆ ನೀಡಿದರು.

ಇದನ್ನೂ ಓದಿ: Yoga Day 2023: ಎಲ್ಲೆಲ್ಲೂ ಯೋಗ; ಮುಂಜಾನೆಯೇ ‘ಆಸನ’ ಹಾಕಿದ ರಾಷ್ಟ್ರಪತಿ, ರಾಜಕೀಯ ನಾಯಕರು

Exit mobile version