Site icon Vistara News

Yoga Day 2023: ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇಂದು ಯೋಗ ಪ್ರದರ್ಶನ

yogasana in shimogga

ಮೈಸೂರು: ಇಂದು ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತವಾಗಿ ಮೈಸೂರಿನ ಸುತ್ತೂರು ಮಠದಲ್ಲಿ ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.

ಸುತ್ತೂರು ಮಠದಿಂದ ಆಯೋಜನೆಯಾಗಿರುವ ಈ ಯೋಗ ಪ್ರದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗ ಮಾಡಲಿದ್ದಾರೆ. ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿರುವ‌ ಶ್ರೀ ಶಿವರಾತ್ರೀಶ್ವರ ಗದ್ದುಗೆ ಎದುರು ಸಕಲ ಸಿದ್ಧತೆ ಮಾಡಲಾಗಿದೆ. ವಿಸ್ತಾರ ನ್ಯೂಸ್, ಸೈಕಲ್ ಪ್ಯೂರ್ ಅಗರಬತ್ತಿ, ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆ ಸಹಯೋಗ ನೀಡಿವೆ.

ಶಿವಮೊಗ್ಗ: ಶಿವಮೊಗ್ಗದ ಆದಿಚುಂಚನಗಿರಿ ಆಟದ ಮೈದಾನದಲ್ಲಿ ಯೋಗಾಭ್ಯಾಸ ನಡೆಯಲಿದ್ದು, ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಯೋಗ ಶಿಕ್ಷಣ ಸಮಿತಿಯಿಂದ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಸಂಸದ ಬಿ. ವೈ ರಾಘವೇಂದ್ರ ಭಾಗಿಯಾಗಲಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರಿಂದ ಯೋಗಾಭ್ಯಾಸ ನಡೆಯಲಿದೆ.

ಹಾಸನ: ಬೇಲೂರು ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದ್ದು, ಈ ಯೋಗ ಪ್ರದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗ ಮಾಡಲಿದ್ದಾರೆ. ತಾಲೂಕು ಆಡಳಿತ, ಗ್ರೀನರಿ ಟ್ರಸ್ಟ್, ವಿಸ್ತಾರ ನ್ಯೂಸ್ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಆಯೋಜನೆಯಾಗಿದೆ. ಯೋಗಾ ಪ್ರದರ್ಶನಕ್ಕೆ ಶಾಸಕ ಹೆಚ್.ಕೆ.ಸುರೇಶ್ ಚಾಲನೆ ನೀಡಲಿದ್ದಾರೆ.

ವಿಜಯನಗರ: ವಿಜಯನಗರ ಜಿಲ್ಲೆಯ ಹಂಪಿ ವಿವಿಯಲ್ಲಿ ಯೋಗ ಪ್ರದರ್ಶನ ನಡೆಯಲಿದ್ದು, ಆಯುಷ್ ಇಲಾಖೆಯಿಂದ ಪುನೀತ್ ಕ್ರೀಡಾಂಗಣದಲ್ಲಿ ಯೋಗ ನಡೆಯಲಿದೆ. ಹಂಪಿಯ ಪುನೀತ್ ಕ್ರೀಡಾಂಗಣದಲ್ಲಿ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ನಾಗರಿಕ ಹಿತರಕ್ಷಣಾ ಸೇವಾ ಸಂಘದಿಂದ ಯೋಗ ನಡೆಯಲಿದೆ. ಕೊಟ್ಟೂರು, ಕೂಡ್ಲಿಗಿ ತಾಲೂಕುಗಳಲ್ಲಿಯೂ ಯೋಗ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: Yoga Day 2023 : ಸಮತೆ- ಮಾನವೀಯತೆ ಕಲಿಸುವ ಯೋಗಾಯೋಗ

Exit mobile version