ವಿಜಯಪುರ: ತಾಳಿಕೋಟೆ ಪಟ್ಟಣದ ಮಿಣಜಗಿ ರಸ್ತೆಯಲ್ಲಿರುವ ಹೊಯ್ಸಳ ಧಾಬಾದ ಹಿಂದುಗಡೆ ಇರುವ ಕಲ್ಲಿನ ಪಡೆಯ ನೀರಿನಲ್ಲಿ ಸೈಕಲ್ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಮೃತಪಟ್ಟ ಬಾಲಕನನ್ನು ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಕಾರ್ತಿಕ ಗುರಣ್ಣ ಆಲ್ಯಾಳ(೧೪) ಎಂದು ಗುರುತಿಸಲಾಗಿದೆ.
ಕಾಲು ಜಾರಿ ಬಿದ್ದು ಮುಳುಗುವುದನ್ನು ನೋಡಿ ಸ್ನೇಹಿತನೊಬ್ಬ ಪಾಲಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಮುಳಗು ತಜ್ಙರು ಆಗಮಿಸಿ ನೋಡಲಾಗಿ ಬಾಲಕ ಮುಳುಗಿದ್ದು ಕಂಡು ಬಂದಿದೆ.
ಈಜು ತಜ್ಞರು ಆ ಕಲ್ಲಿನ ಪಡೆಯಲ್ಲಿನ ನೀರಲ್ಲಿ ಮುಳುಗಿ ಶವವನ್ನು ಹೊರಗೆ ತೆಗೆದಿದ್ದಾರೆ. ಅಷ್ಟರಲ್ಲಿ ಬಾಲಕ ಮೃತಪಟ್ಟಿದ್ದು, ಸ್ಥಳಕ್ಕೆ ಪೊಲೀಸರು ಬೇಟಿ ನೀಡಿದ್ದು, ಬಾಲಕನ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ರೆಯಲ್ಲಿ ಬಟ್ಟೆ ತೊಳೆಯಲು ಹೋದ ನಾಲ್ವರು ನೀರುಪಾಲು: ಇಬ್ಬರು ಮಹಿಳೆಯರು, ಅವರ ಇಬ್ಬರು ಮಕ್ಕಳು ಜಲ ಸಮಾಧಿ