Site icon Vistara News

Businessman kidnapped : ಹಾಸನದ ಉದ್ಯಮಿ ಯುವಕ 4 ದಿನದಿಂದ ನಾಪತ್ತೆ, ಹಣಕಾಸು ವಿವಾದದಲ್ಲಿ ಕಿಡ್ನಾಪ್?

Hasana youth kidnapped

#image_title

ಹಾಸನ:‌ ನಗರದಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ಯುವ ಉದ್ಯಮಿಯೊಬ್ಬರು ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು (Businessman kidnapped), ಅವರನ್ನು ಹಣಕಾಸು ವಿವಾದಕ್ಕೆ ಸಂಬಂಧಿಸಿ ಕಿಡ್ನಾಪ್‌ ಮಾಡಿದ್ದಾರೆ ಎಂದು ಹೇಳಲಾಗಿದೆ.

ಲಿಖಿತ್‌ಗೌಡ (26) ಅಲಿಯಾಸ್ ಬಂಗಾರಿ ಕಾಣೆಯಾಗಿರುವ ಯುವಕ. ಕಳೆದ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಲಿಖಿತ್‌ ಗೌಡ ಅವರು ಸರ್ವಿಸ್‌ ಸ್ಟೇಷನ್‌ ಒಂದನ್ನು ನಡೆಸುತ್ತಿದ್ದಾರೆ. ಅವರನ್ನು ಹಾಸನದ ಹೊಯ್ಸಳ ನಗರ ಬಡಾವಣೆಯಿಂದ ಕಿಡ್ನಾಪ್‌ ಮಾಡಲಾಗಿದೆ ಎಂದು ಹೇಳಲಾಗಿದೆ.

ಶವ ಪತ್ತೆಯಾದ ಜಾಗದಲ್ಲಿ ಸೇರಿದ ಜನರು

ಸಾಗರ್‌ ಜತೆಗಿನ ಹಣಕಾಸು ವ್ಯವಹಾರ
ಲಿಖಿತ್‌ ಅವರ ಸರ್ವಿಸ್ ಸ್ಟೇಷನ್‌ಗೆ ಟ್ಯಾಂಕರ್ ಸರ್ವಿಸ್‌ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗರ್ ಎಂಬಾತ ಬರುತ್ತಿದ್ದ. ಲಿಖಿತ್‌ ಮತ್ತು ಸಾಗರ್‌ ನಡುವೆ ಸ್ನೇಹ ಬೆಳೆದು ಸಾಗರ್‌ ೨.೫ ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ.

ಹೀಗೆ ಪಡೆದ ಸಾಲವನ್ನು ವಾಪಸ್ ನೀಡದೇ ಸಾಗರ್‌ ಸತಾಯಿಸುತ್ತಿದ್ದು, ಈ ಸಂಬಂಧವಾಗಿ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಲಿಖಿತ್‌ ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಸಾಗರ್‌ನ ಬೈಕನ್ನು ಎತ್ತಿಕೊಂಡು ಬಂದಿದ್ದ ಎನ್ನಲಾಗಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಪುನಃ ಜಗಳ ನಡೆದಿತ್ತು.

ಕಾರಿನಲ್ಲಿ ಕರೆದೊಯ್ದ ಸ್ನೇಹಿತರು

ಫೆ. 5ರಂದು ಸಂಜೆ 6.30ರ ಸುಮಾರಿಗೆ ಸಾಗರ್‌ ಮತ್ತು ಸ್ನೇಹಿತರು ಹಣ ಕೊಡುವುದಾಗಿ ಲಿಖಿತ್‌ ಗೌಡನನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೆಎ-41-ಎಂಎ-9231 ನಂಬರ್‌ನ ಓಮಿನಿ ಕಾರಿನಲ್ಲಿ ಲಿಖಿತ್‌ ಗೌಡನನ್ನು ಕರೆದೊಯ್ಯಲಾಗಿದ್ದು, ಬಳಿಕ ಅವರು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗುವ ವೇಳೆ ನೇರಳೆ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಲಿಖಿತ್‌ ಗೌಡ ಅವರ ಫೋನ್‌ ಆವತ್ತಿನಿಂದಲೇ ಸ್ವಿಚ್‌ ಆಫ್‌ ಆಗಿದೆ. ಈ ನಡುವೆ ಸಾಗರ್‌ ಮತ್ತು ಟೀಮ್‌ ಬಿ.ಎಂ. ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ಮದ್ಯ ಖರೀದಿಸಿ ತೆರಳಿದೆ ಎನ್ನಲಾಗಿದೆ.

ಈ ಘಟನೆಗಳಿಂದ ಆತಂಕಗೊಂಡಿರುವ ಲಿಖಿತ್‌ ಗೌಡ ಅವರ ಪತ್ನಿ ಹಾಗೂ ಪೋಷಕರು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದಾರೆ. ಬಡಾವಣೆ ಠಾಣೆ ಪೊಲೀಸರು ಪ್ರಕರಣದ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : Pangala murder: ಶರತ್‌ ಶೆಟ್ಟಿ ಕೊಲೆ ಪ್ರಕರಣದ ಮಹತ್ವದ ಸುಳಿವು ಲಭ್ಯ

Exit mobile version