Site icon Vistara News

Video Viral: ರಸ್ತೆ ಮಧ್ಯೆಯೇ ಯುವತಿಯರ ಕಾಳಗ; ಜುಟ್ಟು ಹಿಡಿದು ಬಡಿದಾಡಿಕೊಂಡ ವಿಡಿಯೊ ವೈರಲ್‌

Young girls fight in the middle of the road Video Viral

ಧಾರವಾಡ: ಧಾರವಾಡದ ಓಲ್ಡ್ ಡಿಎಸ್‌ಪಿ ಸರ್ಕಲ್ ಬಳಿಯ ರಸ್ತೆ ಪಕ್ಕದಲ್ಲಿ ಕಾರೊಂದರಲ್ಲಿ ಇಬ್ಬರು ಯುವತಿಯರು ತೀವ್ರವಾಗಿ ಬಡಿದಾಡಿಕೊಂಡಿದ್ದು, ಕೊನೆಗೆ ರಸ್ತೆಗೆ ಬಂದು ಬೀದಿ ರಂಪಾಟ ಮಾಡಿಕೊಂಡಿದ್ದಾರೆ. ಜುಟ್ಟುಗಳನ್ನು ಹಿಡಿದು ಹೊಡೆದಾಡಿದ್ದಾರೆ. ಇದನ್ನು ಇನ್ನೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿದ್ದು, ಸಖತ್‌ ವೈರಲ್‌ (Video Viral) ಆಗಿದೆ.

ಈ ಯುವತಿಯರು ಯಾರು? ಎಲ್ಲಿಯವರು? ಯಾವ ಕಡೆ ಹೊರಟಿದ್ದರು? ಕಾಲೇಜು ವಿದ್ಯಾರ್ಥಿಗಳಾ? ಅಥವಾ ಕೆಲಸ ಮಾಡುತ್ತಿದ್ದವರಾ ಎಂಬ ಯಾವುದೇ ವಿವರ ಇದುವರೆಗೂ ಲಭ್ಯವಾಗಿಲ್ಲ. ಆದರೆ, ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಕುಳಿತಿದ್ದ ಇಬ್ಬರು ಕಾರಿನೊಳಗೇ ಮೊದಲು ಹೊಡೆದಾಡಿಕೊಂಡಿದ್ದಾರೆ. ಆ ದೃಶ್ಯ ಸಹ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‌PM Modi: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ರದ್ದು; ಇದು ಮೋದಿ ಭೇಟಿ ಎಫೆಕ್ಟ್

ಬಳಿಕ ಕಾರಿನಿಂದ ಇಳಿದು ಬಂದ ಇವರು ರಸ್ತೆ ಪಕ್ಕದಲ್ಲಿಯೇ ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬರು ಬಿಡಿಸಲು ಹೋದರೂ ಕ್ಯಾರೆ ಎನ್ನದೆ ಒಬ್ಬರಿಗೊಬ್ಬರು ಬಡಿದಾಡಿದ್ದಾರೆ. ಮೊಬೈಲ್‌ ಸೇರಿದಂತೆ ಕೆಲವು ವಸ್ತುಗಳು ನೆಲಕ್ಕೆ ಬಿದ್ದರೂ ಯೋಚಿಸದೆ ಎಳೆದಾಡಿದ್ದಾರೆ. ಸದ್ಯ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

Exit mobile version