Site icon Vistara News

Moral Policing: ಬ್ಯಾಡಗಿಯಲ್ಲಿ ಅನ್ಯಕೋಮಿನ ಯುವಕ-ಯುವತಿ ಮೇಲೆ ಹಲ್ಲೆ; 7 ಮಂದಿ ಬಂಧನ

byadagi police station

ಹಾವೇರಿ: ಹಾನಗಲ್‌ನಲ್ಲಿ ನೈತಿಕ ಪೊಲೀಸ್‌ ಗಿರಿ ಮತ್ತು ಗ್ಯಾಂಗ್ ರೇಪ್‌ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ (Moral Policing) ನಡೆದಿದೆ. ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಅನ್ಯಕೋಮಿನ ಯುವಕ-ಯುವತಿ ಮೇಲೆ ಹಲ್ಲೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರುಕ್ಸಾನ ಮತ್ತು ಜಗದೀಶ್ ಹಲ್ಲೆಗೊಳಗಾದ ಯುವಕ, ಯುವತಿ. ಅಬ್ದುಲ್ ಖಾದರ್, ಮನ್ಸೂರ್, ಮೆಹಬೂಬ್ ಖಾನ್, ರಿಯಾಜ್, ಅಲ್ಪಾಜ್, ಅಬ್ದುಲ್, ಖಾದರ್, ಸಲೀಂಸಾಬ್, ಮೆಹಬೂಬ್ ಅಲಿ ಬಂಧಿತ ಆರೋಪಿಗಳು.

ಪುರಸಭೆಯ ಹತ್ತಿರವಿರುವ ಈಶ್ವರ ದೇಗುಲದ ಬಳಿ ಹಿಂದು ಯುವಕನ ಜೊತೆ ಬೈಕ್‌ನಲ್ಲಿ ಬಂದು ಮುಸ್ಲಿಂ ಯುವತಿ ಮಾತನಾಡುತ್ತಿದ್ದಾಗ, ಹಿಂದು ಹುಡುಗನ‌ ಜೊತೆ ಯಾಕೆ ಮಾತನಾಡುತ್ತಿದ್ದೀಯಾ ಎಂದು ಇಬ್ಬರನ್ನೂ ಪುಂಡರು ಥಳಿಸಿದ್ದಾರೆ.

ಇದನ್ನೂ ಓದಿ | Family Problems : ಧರ್ಮಸ್ಥಳ ಲಾಡ್ಜ್‌ನಲ್ಲಿ ವೃದ್ಧ ಆತ್ಮಹತ್ಯೆ; 5 ಮಕ್ಕಳಿದ್ದರೂ ಶವ ಅನಾಥ

ಯುವತಿ ನೀಡಿದ ದೂರಿನ ಮೇರೆಗೆ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಸ್‌ನಲ್ಲಿ ಮುಂದುವರಿದ ಹೊಡಿಬಡಿ; ಕಂಡಕ್ಟರ್‌ಗೆ ಥಳಿಸಿದ ಪ್ರಯಾಣಿಕ

KSRTC conductor assaulted by passenger

ಕೋಲಾರ: ಬಸ್‌ ಕಂಡಕ್ಟರ್‌ ಹಾಗೂ ಪ್ರಯಾಣಿಕರ ನಡುವೆ ಹೊಡಿಬಡಿ ಮುಂದುವರಿದಿದೆ. ಕ್ಷುಲ್ಲಕ ವಿಚಾರಕ್ಕೆ ತಾಳ್ಮೆ ಕಳೆದುಕೊಂಡು ಸಾರ್ವಜನಿಕ ಸ್ಥಳದಲ್ಲೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಯಾಣಿಕನೊಬ್ಬ (assaulted by passenger) ಕೆಎಸ್‌ಆರ್‌ಟಿಸಿ ಬಸ್‌ನ ಕಂಡಕ್ಟರ್‌ಗೆ (KSRTC conductor) ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಮುಜಾಸಿರ್ ಪಾಷಾ ಎಂಬಾತ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ತಿಮ್ಮರಾಜು ಎಂಬುವವರು ಹಲ್ಲೆ ಮಾಡಿದ್ದಾನೆ. ಕೋಲಾರ ಬಸ್‌ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ. ಕೋಲಾರದಿಂದ ಬೆಂಗಳೂರು ಕಡೆಗೆ ಹೋಗುವ ಬಸ್‌ಗಾಗಿ ನೂರಾರು ಪ್ರಯಾಣಿಕರು ಕಾದುಕುಳಿತಿದ್ದರು.ಬಸ್‌ ಬಂದೊಡನೇ ನಾ ಮುಂದು ತಾ ಮುಂದು ಎಂದು ಪ್ರಯಾಣಿಕರು ಬಸ್‌ ಏರಿದ್ದರು.

ಈ ಮಧ್ಯೆ ಚಾಲಕ ಬಸ್‌ ರಿವರ್ಸ್‌ ತೆಗೆಯಲು ಮುಂದಾಗಿದ್ದರು, ಹೀಗಾಗಿ ಕಂಡಕ್ಟರ್‌ ತಿಮ್ಮರಾಜು ಮುಂಜಾಗ್ರತಾ ಕ್ರಮವಾಗಿ ಡೋರ್‌ ಲಾಕ್‌ ಮಾಡಿದ್ದರು. ರಿವರ್ಸ್‌ ತೆಗೆಯುವಾಗಲೇ ಓಡಿ ಬಂದ ಮುಜಾಸಿರ್‌ ಪಾಷಾ ಬಸ್‌ ನಿಲ್ಲಿಸುವಂತೆ ಕೂಗಿದ್ದಾನೆ. ಬಸ್‌ನಲ್ಲಿ ರಶ್‌ ಇದ್ದ ಕಾರಣಕ್ಕೆ ನಿಲ್ಲಿಸುವವರೆಗೂ ಇರು ಎಂದು ಕಂಡಕ್ಟರ್‌ ತಿಮ್ಮರಾಜು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ಮುಜಾಸಿರ್‌ ಪಾಷಾ ಕಂಡಕ್ಟರ್ ತಿಮ್ಮರಾಜು ಮೇಲೆ ಎಗರಿ ಹಲ್ಲೆ ಮಾಡಿದ್ದಾನೆ.

ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ತಿಮ್ಮರಾಜು ಅವರ ಸಮವಸ್ತ್ರನ್ನು ಹರಿದು ಹಾಕಿ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಇತರೆ ಸಿಬ್ಬಂದಿ ಹಾಗೂ ಸ್ಥಳೀಯರು ಸಹಾಯಕ್ಕೆ ಬಂದು ಗಲಾಟೆಯನ್ನು ಬಿಡಿಸಿದ್ದಾರೆ. ಗಾಯಗೊಂಡಿದ್ದ ತಿಮ್ಮರಾಜು ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ: Peenya Flyover : ಲೋಡ್‌ ಟೆಸ್ಟಿಂಗ್‌ ಕಂಪ್ಲೀಟ್‌; ಪೀಣ್ಯ ಫ್ಲೈಓವರ್‌ ಸಂಚಾರಕ್ಕೆ ಮುಕ್ತ

ಸದ್ಯ ಮುಜಾಸಿರ್ ಪಾಷಾ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version