Site icon Vistara News

ಪಿಎಸ್​ಐ ಕಾಟಕ್ಕೆ ರೋಸಿ ಹೋದ ಯುವಕ ಫೇಸ್​ಬುಕ್​ನಲ್ಲಿ ವಿಡಿಯೋ​ ಮಾಡಿ ಆತ್ಮಹತ್ಯೆ

vijayapura sucide

ವಿಜಯಪುರ: ಪಿಎಸ್​ಐ ಹಾಗೂ ಆತನ ಸಹೋದರನ ದೌರ್ಜನ್ಯಕ್ಕೆ ಅಮಾಯಕ ಯುವಕ ಬಲಿಯಾಗಿರುವ ಪ್ರಕರಣ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದಲ್ಲಿ ಶಿವಗಿರಿ ಟಯರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋಮನಾಥ ನಾಗಮೋತಿ ಎಂಬ ಯುವಕನಿಗೆ ಪಿಎಸ್​ಐ ಸೋಮೇಶ ಗೆಜ್ಜಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುವಕನ ಆರೋಪ ಏನು?

ತಮ್ಮ ಕಾರಿನಲ್ಲಿದ್ದ ಏಳೂವರೆ ಲಕ್ಷ ರೂಪಾಯಿಯಲ್ಲಿ 1 ಲಕ್ಷ ರೂಪಾಯಿಯನ್ನು ಕದ್ದಿರುವೆ ಎಂದು ಆರೋಪಿಸಿ ಪಿಎಸ್‌ಐ ಬೆದರಿಕೆ ಹಾಗೂ ಹಲ್ಲೆ ನಡೆಸಿದ್ದಾರೆ. ಆದರೆ, ಕಾರಿನಲ್ಲಿದ್ದ ಹಣವನ್ನು ಪಿಎಸ್​ಐ ಕಾರು ಡ್ರೈವರ್​ ತೆಗೆದುಕೊಂಡು ಹೋಗಿದ್ದಾನೆ ಎಂದು ಎಷ್ಟೇ ಹೇಳಿದರೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಕೇಸ್​ ಹಾಕಿ ನಿನ್ನ ಜೀವನ ಹಾಳು ಮಾಡುತ್ತೇನೆ ಎಂದೆಲ್ಲ ಬೆದರಿಕೆ ಹಾಕಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಯುವಕ ಸೋಮನಾಥ ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿದ್ದು, ನನ್ನ ಸಾವಿಗೆ ಪಿಎಸ್‌ಐ ಸೋಮೇಶ ಗೆಜ್ಜಿ, ಅವರ ಸಹೋದರ ಚೇತನ್ ಗೆಜ್ಜಿ, ರವಿ ದೇಗಿನಾಳ, ಸಂತೋಷ ದೇಗಿನಾಳ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ರೀತಿ ಡೆತ್ ನೋಟ್​ ಬರೆದು ನಾಪತ್ತೆಯಾಗಿದ್ದ ಯುವಕ ಮಂಗಳವಾರ (ಜು.12) ತಡರಾತ್ರಿ ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ಮಗನ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನನ್ನ ಮಗನ ಸಾವಿಗೆ ಪಿಎಸ್‌ಐ ಸೋಮೇಶ ಗೆಜ್ಜಿ ಕಾರಣ ಈ ಕೂಡಲೇ ಅವರನ್ನು ಅಮಾನತು ಮಾಡಬೇಕು. ಇನ್ನುಳಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನು ಓದಿ| ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವ ಉಳಿಸಿದ 112

Exit mobile version