Site icon Vistara News

Drowned | ಕುಡಿತದ ಮತ್ತಿನಲ್ಲಿ ಕಲ್ಲು ಕೋರೆಯ ಆಳ ನೋಡಲು ಇಳಿದ ಯುವಕ ನಾಪತ್ತೆ, ಇನ್ನೂ ಹುಡುಕಾಟ

quary water

ಬೆಳಗಾವಿ: ಕುಡಿತದ ಮತ್ತಿನಲ್ಲಿ ಏನೇನೋ ಅನಾಹುತಗಳಾಗುತ್ತವೆ ಎಂದು ಗೊತ್ತಿದ್ದರೂ ಜನರು ದುಸ್ಸಾಹಸಕ್ಕೆ ಇಳಿಯುವುದು ನಿಂತಿಲ್ಲ. ಬೆಳಗಾವಿ ತಾಲೂಕಿನ ಅಲತಗಾ ಕಡಿ ಮಷಿನ್ ಬಳಿ ಇರುವ ಕಲ್ಲು ಕೋರೆಯ ಆಳ ನೋಡಿಕೊಂಡು ಬರುತ್ತೇನೆ ಎಂದು ಜಿಗಿದವನು ಮರಳಿ ಬಂದಿಲ್ಲ. ನಾಪತ್ತೆಯಾಗಿರುವ ಆತನಿಗಾಗಿ ಹುಡುಕಾಟ ನಡೆಯುತ್ತಿದೆ.

ಮೃತ ಸತೀಶ್‌

ಅನಗೋಳ ಗ್ರಾಮದ ಸತೀಶ್ ಹಣಮಣ್ಣವರ್(22) ನಾಪತ್ತೆಯಾದ ಯುವಕ. ಮಂಗಳವಾರ ಸತೀಶ್‌ ಮತ್ತು ಇತರ ಇಬ್ಬರು ಸ್ನೇಹಿತರು ಸೇರಿ ಪಾರ್ಟಿ ಮಾಡಲು ಕಲ್ಲು ಕ್ವಾರಿ ಬಳಿ ತೆರಳಿದ್ದರು. ಈ ನಡುವೆ ಕುಡಿದು ಮತ್ತೇರಿದಾಗ ತಾನು ನೀರಿನ ಆಳ ನೋಡುವುದಾಗಿ ಸತೀಶ್‌ ಚಾಲೆಂಜ್‌ ಹಾಕಿದ್ದಾನೆ. ಜತೆಗೆ ನೀರಿಗೆ ಹಾರಿಯೇ ಬಿಟ್ಟಿದ್ದಾನೆ. ಆದರೆ, ತುಂಬಾ ಹೊತ್ತಾದರೂ ಮೇಲೆ ಬಾರದೆ ಇದ್ದಾಗ ಸ್ನೇಹಿತರು ಗಾಬರಿಗೊಂಡಿದ್ದಾರೆ.

ಅಷ್ಟು ಹೊತ್ತಿಗೆ ಎಲ್ಲರ ಮತ್ತೂ ಇಳಿದಿತ್ತು. ಗಾಬರಿಯಾದ ಅವರು ಕೂಡಲೇ ಸಂಬಂಧಿಕರಿಗೆ ಮತ್ತು ಕಾಕತಿ ಪೊಲೀಸರಿಗೆ ವಿಷಯ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಕಾಕತಿ ಠಾಣೆ ಪೊಲೀಸರು ತಪಾಸಣೆ ನಡೆಸಿದರು. ತಡರಾತ್ರಿಯವರೆಗೂ ಎಸ್‌ಡಿಆರ್‌ಎಫ್ ತಂಡದಿಂದ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದು, ಸಿಕ್ಕಿರಲಿಲ್ಲ. ಇದೀಗ ಬುಧವಾರ ಬೆಳಗ್ಗೆಯೂ ಶೋಧ ಕಾರ್ಯ ನಡೆಯಲಿದೆ.

ಇದನ್ನೂ ಓದಿ | Drowned | ಕ್ವಾರೆ ಗುಂಡಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಬಾಲಕರ ಸಾವು, ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ಮೃತ್ಯು

Exit mobile version