ಕಲಬುರಗಿ: ನಗರದ ಪೂಜಾ ಕಾಲೊನಿಯಲ್ಲಿ ಭಾನುವಾರ ರಾತ್ರಿ 24 ವರ್ಷದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕಾರೊಂದರಲ್ಲಿ ಅಡ್ಡಾದಿಡ್ಡಿ ಇಂಡಿಕೇಟರ್ (Car indicator) ಹಾಕಿಕೊಂಡು, ಬೈಕ್ ಮುಂದೆ ಹೋಗಲೂಬಿಡದೆ ಇದ್ದುದನ್ನು ಪ್ರಶ್ನಿಸಿದ್ದಕ್ಕೆ ಈ ಕೊಲೆ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ನಿವಾಸಿ ಪ್ರಮೋದ್ (24) ಕೊಲೆಯಾದ ಯುವಕ. ಟ್ರಾನ್ಸ್‌ಪೋರ್ಟ್ ಉದ್ಯಮ ಮಾಡಿಕೊಂಡಿದ್ದ ಪ್ರಮೋದ್ ಕಲಬುರಗಿ ನಗರದ ಪೂಜಾ ಕಾಲೋನಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ.
ಭಾನುವಾರ ರಾತ್ರಿ ಪ್ರಮೋದ್ ಕೆಲಸ ಮುಗಿಸಿ ತನ್ನ ಮಾವ ಅವಿನಾಶ್ ಅವರ ಜತೆ ಬೈಕ್‌ನಲ್ಲಿ ಮಾವ ಅವಿನಾಶ್ ಅವರನ್ನು ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅವರ ಎದುರು ಭಾಗದಲ್ಲಿ ಬಾರ ಹಿಲ್ಸ್ ಬಳಿ ಮಹೀಂದ್ರಾ ಥಾರ್ ಜೀಪೊಂದು ಸಾಗುತ್ತಿತ್ತು. ಅದರಲ್ಲಿದ್ದ ಯುವಕರು ಲೆಫ್ಟ್ ರೈಟ್ ಎರಡೂ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರು. ಹಿಂಬದಿ ಬರುತ್ತಿದ್ದ ಬೈಕ್‌ಗೂ ಸೈಡ್ ಕೊಡದೆ ಸಾಗುತ್ತಿದ್ದರು. ಸುಮಾರು ಒಂದು ಕಿಲೋಮೀಟರ್ ವರೆಗೂ ಬೈಕ್‌ಗೆ ಸೈಡ್ ಕೊಡದೆ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರು. ಕೊನೆಗೆ ಒಂದು ಹಂತದಲ್ಲಿ ಕಾರಿಗಿಂತ ಮುಂದೆ ಹೋದ ಪ್ರಮೋದ್ ಮತ್ತು ಆತನ ಮಾವ ಅವಿನಾಶ್ ʻʻಇಂಡಿಕೇಟರ್ ಸರಿಯಾಗಿ ಹಾಕಿ…ನಮಗೆ ಕನ್ಫೂಸ್ ಆಗ್ತಿದೆʼʼ ಎಂದು ಹೇಳಿದರು.
ಆಗ ಜೀಪಿನಿಂದ ಇಳಿದ ಯುವಕರ ಗುಂಪು ಜಗಳಕ್ಕೆ ನಿಂತಿದ್ದಲ್ಲದೆ ಪ್ರಮೋದ್ ಅವರಿಗೆ ಮನಬಂದಂತೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ.
ಸುದ್ದಿ ತಿಳಿದ ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು ಮತ್ತು ಎಂಬಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಿಷನರ್ ಚೇತನ್, ಲೆಫ್ಟ್ ರೈಟ್ ಇಂಡಿಕೇಟರ್ ಹಾಕಿಕೊಂಡು ವಾಹನ ಚಾಲನೆ ಮಾಡುತ್ತಿದ್ದರು. ಅದನ್ನ ಪ್ರಶ್ನಿಸಿದ್ದಕ್ಕೆ ಪ್ರಮೋದ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.. ಆರೋಪಿಗಳ ಪತ್ತೆಗಾಗಿ ಎಂಬಿ ನಗರ ಠಾಣೆ ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.. ಶೀಘ್ರವೇ ಹಂತಕರನ್ನ ಬಂಧಿಸಲಾಗುವುದು ಎಂದಿದ್ದಾರೆ.
ಕಲಬುರಗಿ ನಗರದ ಸಿಟಿ ಬಸ್ಟ್ಯಾಂಡ್ ಬಳಿ ಹಾಡುಹಗಲೇ ಚಾಲಕನ ಹತ್ಯೆ ಮಾಸುವ ಮುನ್ನವೇ, ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದ್ದು, ಸಾರ್ವಜನಿಕರು ಅಕ್ಷರಶಃ ಬೆಚ್ಚಿಬಿಳುವಂತೆ ಮಾಡಿದೆ. ಇನ್ನೂ ಬಾಳಿ ಬದುಕಬೇಕಾದ ಯುವಕ ಪ್ರಮೋದ್‌ನನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದ್ದು, ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಜಾಮೀನು ಪಡೆದು ಜೈಲಿನಿಂದ ಹೊರಬಂದ ಬೆನ್ನಿಗೇ ರೌಡಿಶೀಟರ್ ಮರ್ಡರ್
ರಾಮನಗರ: ಜಿಲ್ಲೆಯ ರಾಮನಗರ ಜಿಲ್ಲೆ (Ramanagara News) ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ರೌಡಿ ಶೀಟರ್ (Rowdy sheeter) ಒಬ್ಬನನ್ನು ಬರ್ಬರವಾಗಿ ಕೊಂದು ಎಸೆಯಲಾಗಿದೆ.
ಬೆಂಗಳೂರಿನ ಯಲಹಂಕ ನಿವಾಸಿ ಸಂತೋಷ್ (35) ಎಂಬಾತನ ಶವವನ್ನು ಕೆರೆಯ ಬಳಿ ಎಸೆಯಲಾಗಿದೆ. ಆತನನ್ನು ಅಲ್ಲಿಯೇ ತಂದು ಕೊಲೆ ಮಾಡಲಾಯಿತೋ ಅಥವಾ ಕೊಂದು ತಂದು ಅಲ್ಲಿ ಎಸೆಯಲಾಯಿತೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಸಂತೋಷ್ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಹಿಂದಿನ ಕೊಲೆ ಪ್ರaಕರಣಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Drowned in Canal: ಕಾಲುವೆ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಹಿತ ಮೂವರ ಸಾವು