ಚಿಕ್ಕಬಳ್ಳಾಪುರ: ನಾಡಿನ ಕಣ್ಮಣಿ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯೊಬ್ಬನಿಗೆ ಅಪ್ಪು ಅಭಿಮಾನಿಗಳು ಹಿಗ್ಗಾಮುಗ್ಗ ಥಳಿಸಿ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಗಡಿಗ್ರಾಮ ಬೀಚಗೊಂಡಹಳ್ಳಿಯಲ್ಲಿ ಘಟನೆ ನಡೆದಿದೆ. ಇಲ್ಲಿನ ಹರೀಶ್ ಎಂಬಾತ ತನ್ನ ಹೋಟೆಲ್ನಲ್ಲಿ ಮಾತನಾಡುವಾಗ ಅಪ್ಪು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ. ಇದರ ವಿಡಿಯೊ ವೈರಲ್ ಆಗಿತ್ತು. ಇದರಿಂದ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದರು.
ಅಪ್ಪು ಅಭಿಮಾನಿಗಳು ಹರೀಶನನ್ನು ಬೀಚಗೊಂಡನಹಳ್ಳಿಯಿಂದ ಶಿಡ್ಲಘಟ್ಟ ತಾಲೂಕಿನ ಎಚ್. ಕ್ರಾಸ್ಗೆ ಎಳೆದುತಂದು ಅಲ್ಲಿ ಹಲ್ಲೆ ಮಾಡಿದ್ದಾರೆ ಮಾತ್ರವಲ್ಲ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ. ಇಲ್ಲಿನ ಸೆಂಟರ್ ಸರ್ಕಲ್ನಲ್ಲಿ ಅವನನ್ನು ಕರೆತಂದು ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿಸಿದ್ದಾರೆ. ಜತೆಗೆ ಪೂಜೆ ಕೂಡಾ ಮಾಡಿಸಿದ್ದಾರೆ.
ನಡು ರಸ್ತೆಯಲ್ಲೇ ನಿಂತು ಕ್ಷಮೆಯಾಚನೆ ಮಾಡಿದ ಯುವಕ ಹರೀಶ್ .