Site icon Vistara News

Youth attacked| ಶೌಚಾಲಯಕ್ಕೆ ಹೋಗುವ ಮಹಿಳೆಯರ ವಿಡಿಯೊ ಮಾಡಿದ ಕಾಮುಕನಿಗೆ ಧರ್ಮದೇಟು

toilet arrest

ಕೊಪ್ಪಳ: ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕಿರಿಯಾಗುವಂತೆ ನಡೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿದ ವಿದ್ಯಮಾನ ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಇಂದಿರಾ ನಗರದಲ್ಲಿ ನಡೆದಿದೆ.

ಪಟ್ಟಣದ ಶೌಚಾಲಯವೊಂದರ ಬಳಿ ಯುವಕನೊಬ್ಬ ಮರೆಯಲ್ಲಿ ನಿಂತು ಶೌಚಕ್ಕೆ ಹೋಗುವ ಮಹಿಳೆಯರ ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ವಿಚಾರಣೆ ನಡೆಸಿದರು. ಆತ ಮರದ ಮರೆಯಲ್ಲಿ ನಿಂತು ಮಾಡುತ್ತಿದ್ದ ಏನೋ ಮಾಡುತ್ತಿದ್ದಾನೆ ಎನ್ನುವುದು ಕೆಲವರ ಅರಿವಿಗೆ ಬಂದಿತ್ತು. ಆದರೆ, ಯಾರೂ ಸೀರಿಯಸ್‌ ಆಗಿ ಪರಿಗಣಿಸಿರಲಿಲ್ಲ.

ಆದರೆ, ಮಹಿಳೆಯೊಬ್ಬರು ಈ ರೀತಿ ವಿಡಿಯೊ ಮಾಡುತ್ತಿದ್ದಾನೆ ಎಂದು ಗಮನಿಸಿದ ಮಹಿಳೆಯೊಬ್ಬರು ಸ್ಥಳೀಯರಿಗೆ ಈ ವಿಚಾರ ತಿಳಿಸಿದರು. ಆಗ ಅವರೆಲ್ಲ ಸೇರಿ ಕಾಮುಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದರು.
ಈ ವ್ಯಕ್ತಿ ಯಾರು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆತ ವಿಳಾಸವನ್ನು ಸರಿಯಾಗಿ ಹೇಳುತ್ತಿಲ್ಲ. ಒಮ್ಮೊಮ್ಮೆ ಒಂದೊಂದು ಊರಿನ ಹೆಸರು ಹೇಳುತ್ತಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಕನಕಗಿರಿ ಪೊಲೀಸರು ಭೇಟಿ ನೀಡಿ ಕಾಮುಕನನ್ನು ವಶಕ್ಕೆ ಪಡೆದಿದ್ದಾರೆ.

Exit mobile version