Site icon Vistara News

Road Accident: ಟ್ಯಾಂಕರ್ ಹರಿದು ಯುವಕ ದಾರುಣ ಸಾವು

Bike Accident

ಉಡುಪಿ: ಟ್ಯಾಂಕರ್ ಹರಿದು ಯುವಕ ದಾರುಣವಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರ ಕಂಚಿನಡ್ಕ ಗ್ರಾಮದ ಬಳಿ ನಡೆದಿದೆ. ಬಸ್‌ಗೆ ಡಿಕ್ಕಿ ಹೊಡೆದು ಬೈಕ್‌ನಿಂದ ಯುವಕ ಕೆಳಗೆ ಬಿದ್ದಾಗ ಟ್ಯಾಂಕರ್‌ ಹರಿದು ದುರ್ಘಟನೆ (Road Accident) ನಡೆದಿದೆ.

ಕಂಚಿನಡ್ಕ‌ ನಿವಾಸಿ ಪ್ರಜ್ವಲ್ ಮೃತ ದುರ್ದೈವಿ. ಮಂಗಳೂರು ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಂತಿದ್ದ ಬಸ್‌ಗೆ ಹಿಂಬದಿಯಿಂದ ಪ್ರಜ್ವಲ್ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ರಸ್ತೆಗೆ ಬಿದ್ದಾಗ, ತಲೆಯ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident : ಡಿಕ್ಕಿ ಹೊಡೆದ ಬುಲೆರೋ; ಬೈಕ್‌ನಿಂದ ಎಗರಿ ಬಿದ್ದ ಸವಾರರು ಮೃತ್ಯು, ಕಾಲ್ಕಿತ್ತ ಚಾಲಕ!

ಕುಡುಕ ಗಂಡನಿಗೆ ಚಟ್ಟ ಕಟ್ಟಿದ್ದಳು; ಸಹಜ ಸಾವಿನ ಕತೆ ಕಟ್ಟಿ ಬಂಧಿಯಾದಳು!

ಬೆಳಗಾವಿ: ಪತ್ನಿಯೇ ಪತಿಯನ್ನು ಕತ್ತು ಹಿಸುಕಿ ಕೊಂದು (Murder Case) ಬಳಿಕ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿ ಜೈಲುಪಾಲಾಗಿರುವ ಘಟನೆ ನಡೆದಿದೆ. ಬಾಬು ಕಲ್ಲಪ್ಪ ಕರ್ಕಿ (48) ಮೃತ ದುರ್ದೈವಿ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಮಹಾದೇವಿ ಎಂಬಾಕೆ ಪತಿ ಬಾಬು ಕಲ್ಲಪ್ಪ ಕರ್ಕಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿದ್ದಾಳೆ. ಆತ ನಿದ್ರೆಗೆ ಜಾರುತ್ತಿದ್ದಂತೆ ಪತಿಯ ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ಸಹಜ ಸಾವು ಎಂದು ಕಥೆ ಕಟ್ಟಿದ್ದಾಳೆ.

ಆದರೆ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಮೃತನ ಕತ್ತಿನ ಮೇಲೆ ಗಾಯವಿರುವುದು ಕಂಡಿದೆ. ಈ ಬಗ್ಗೆ ಮಹಾದೇವಿಯನ್ನು ವಿಚಾರಣೆ ನಡೆಸಿದಾಗ ಪೊಲೀಸರ ಮುಂದೆ ಎರಡೆರಡು ರೀತಿ ಕಥೆ ಕಟ್ಟಿದ್ದಾಳೆ.

ಇದನ್ನೂ ಓದಿ: ಮೈ ಮೇಲೆ ಬಿಸಿ ಸಾಂಬಾರ್‌ ಬಿದ್ದು ಬಾಲಕ ಸಾವು; ಕುಳಿತಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ!

ಇದರಿಂದ ಇನ್ನಷ್ಟು ಅನುಮಾನಗೊಂಡು ವಿಚಾರಣೆಯನ್ನು ತೀವ್ರಗೊಳಿಸಿದಾಗ ಕೊಲೆ ವಿಷಯ ಹೊರಬಂದಿದೆ. ಪತಿ ಬಾಬು ಕಲ್ಲಪ್ಪ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ಮನೆಗೆ ಆಧಾರವಾಗಿದ್ದ ಜಮೀನು ಮಾರಾಟಕ್ಕೂ ಮುಂದಾಗಿದ್ದ. ಈತನ ನಿರಂತರ ಕಾಟಕ್ಕೆ ಬೇಸತ್ತು ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ನಂದಘಡ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version