Site icon Vistara News

Youth drowned: ಈಜಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ; ಮುಗಿಲುಮುಟ್ಟಿದ ಪಾಲಕರ ಆಕ್ರಂದನ

#image_title

ಹುಬ್ಬಳ್ಳಿ: ಕೆರೆಯಲ್ಲಿ ಈಜಲು ಹೋದ ಬಾಲಕ (Youth drowned) ನೀರುಪಾಲಾದ ಘಟನೆ ಉಣಕಲ್‌ ಕೆರೆ ಬಳಿ ನಡೆದಿದೆ. ಇಂದಿರಾ ನಗರದ ವೆಂಕಟೇಶ್ ವಾಲ್ಮೀಕಿ (14) ಕೆರೆಯಲ್ಲಿ ಮುಳುಗಿರುವ ಬಾಲಕ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿದ್ಯಾನಗರ ಠಾಣಾ ಪೊಲೀಸರು ಆಗಮಿಸಿದ್ದು, ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕೆರೆ ಬದಿಯಲ್ಲಿ ಹೆಚ್ಚಿನ ಗಿಡಗಂಟಿಗಳು ಬೆಳೆದಿದ್ದು ಎಲ್ಲವನ್ನು ತೆರವು ಮಾಡುತ್ತಿದ್ದಾರೆ.

ಇತ್ತ ಬಾಲಕ ಕೆರೆಯಲ್ಲಿ ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಉಣಕಲ್‌ ಕೆರೆ ಸಮೀಪ ನೂರಾರು ಜನರು ಜಮಾಯಿಸಿದ್ದಾರೆ.

ಇದನ್ನೂ ಓದಿ: Shiralakoppa Bandh: ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಶಿರಾಳಕೊಪ್ಪ ಬಂದ್‌

Exit mobile version