ಚಾಮರಾಜನಗರ: ಯುವಕರಿಬ್ಬರು ಕೆರೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ (Youths Drowned) ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ತೆರಕಣಾಂಬಿ ಗ್ರಾಮದವರಾದ ಕೀರ್ತಿ ( 30) ವಿನೋದ್ (26) ಮೃತ ಯುವಕರು
ಪೊಲೀಸ್ ಠಾಣೆಯ ಅನತಿ ದೂರದಲ್ಲಿ ವಸ್ತಿ ನೀರಿನಿಂದ ತುಂಬಿದ ಕೊಳಕ್ಕೆ ಬಿದ್ದು ಸಾವು ಸಂಭವಿಸಿದೆ. ಚಿಕ್ಕ ಕೆರೆ ಎಂಬ ಹೆಸರಿನ ಕೆರೆಗೆ ಬಿದ್ದು ಈ ದುರಂತ ಸಂಭವಿಸಿದೆ. ಯುವಕರು ಕುಡಿದ ಅಮಲಿನಲ್ಲಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ತಡರಾತ್ರಿ ನಡೆದಿರುವ ಘಟನೆ ಇದಾಗಿದ್ದು, ಅಗ್ನಿಶಾಮಕ ದಳದಿಂದ ಮೃತದೇಹ ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಡಬದಲ್ಲಿ ಕಾಡಾನೆ ದಾಳಿಗೆ ಇಬ್ಬರು ದುರ್ಮರಣ
ಮಂಗಳೂರು: ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮೀನಾಡಿ ಎಂಬಲ್ಲಿ ಘಟನೆ ನಡೆದಿದೆ.
ರಂಜಿತಾ ಹಾಗೂ ರಮೇಶ್ ರೈ ಎಂಬವರು ಆನೆ ದಾಳಿಯಿಂದ ದುರ್ಮರಣಕ್ಕೀಡಾದವರು. ಸ್ಥಳೀಯ ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿರುವ ರಂಜಿತಾ, ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬವರ ಮೇಲೂ ದಾಳಿ ಮಾಡಿದೆ. ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕಡಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : Youth drowned : ಯೋಧನಾಗುವ ಆಸೆ ಹೊತ್ತಿದ್ದ ಯುವಕ ದುರ್ಮರಣ: ಗೆಳೆಯರ ಜತೆ ಈಜಲು ಹೋಗಿ ನೀರುಪಾಲು