Site icon Vistara News

Kodagu News: ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಯುವಕ ನೀರುಪಾಲು

Sharath

ಕೊಡಗು: ಇತ್ತೀಚೆಗೆ ಮೂವರು ಯುವಕರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವಕ ನೀರುಪಾಲಾಗಿರುವುದು ಕಂಡುಬಂದಿದೆ. ಸ್ನಾನಕ್ಕೆಂದು ಕಾವೇರಿ ನದಿಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ (Kodagu News) ಕುಶಾಲನಗರ ಸಮೀಪದ ನಂಜರಾಯಪಟ್ಟಣದಲ್ಲಿ ನಡೆದಿದ್ದು, ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ದುರ್ಘಟನೆ ನಡೆದಿದೆ.

ಚೆಟ್ಟಳ್ಳಿ ಸಮೀಪದ ಕಂಡಕೆರೆ ನಿವಾಸಿ ಶಂಭು ಎಂಬುವರ ಪುತ್ರ ಶರತ್ (24) ಮೃತ ದುರ್ದೈವಿ. ಸ್ಥಳಕ್ಕೆ ಅಗ್ನಿಶಾಮದಳ ಹಾಗೂ ದುಬಾರೆ ರಾಫ್ಟಿಂಗ್ ತಂಡದಿಂದ ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಕಾವೇರಿ ನದಿಯಲ್ಲಿ ಮುಳುಗಿ ಮೂವರು ಯುವಕರು ದುರ್ಮರಣ

Drowned in Cauvery kodagu

ಕೊಡಗು: ಕೊಡಗಿನಲ್ಲಿ ಭೀಕರ ಜಲ ದುರಂತವೊಂದು (Water Tragedy) ಸಂಭವಿಸಿದೆ. ಕಾವೇರಿ ನದಿಯಲ್ಲಿ (Drowned in River Cauvery) ಮುಳುಗಿ ಮೂವರು ಯುವಕರು ಮೃತಪಟ್ಟಿದ್ದಾರೆ (Three youngsters dead). ಕೊಡಗು ಜಿಲ್ಲೆ (Kodagu News) ಕುಶಾಲ ನಗರ ಸಮೀಪದ ಕೂಡಿಗೆಯಲ್ಲಿ ಈ ದುರಂತ ಸಂಭವಿಸಿದೆ.

ಕುಶಾಲ ನಗರದ ಕೂಡಿಗೆಯಲ್ಲಿ ಕಾವೇರಿ ನದಿಗೆ ಈಜಲು ತೆರಳಿದ್ದ ಮೂವರು ಯುವಕರಾದ ವಿನೋದ್, ಸಚಿನ್, ಶ್ರೀನಿವಾಸ್ ಎಂಬ ಯುವಕರು ಮೃತಪಟ್ಟಿದ್ದಾರೆ. ಈ ಮೂವರು ಯುವಕರು ಮುಳ್ಳುಸೋಗೆ, ಚಿಕ್ಕತ್ತೂರು, ಹೆಬ್ಬಾಲೆ ಮೂಲದದವರು ಎಂದು ತಿಳಿದುಬಂದಿದೆ. ಜತೆಯಾಗಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿರುವ ಶಂಕೆ ಇದೆ.

ಇದನ್ನೂ ಓದಿ | Blast in Bengaluru : ರಾಮೇಶ್ವರಂ ಕೆಫೆ ಬಾಂಬರ್‌ನ ಸ್ಪಷ್ಟ‌ ಚಿತ್ರ ಬಿಡುಗಡೆ, ಈಗ್ಲಾದರೂ ಹುಡುಕಿ ಕೊಡಿ!

ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಬಾರೆಯ ರ‍್ಯಾಫ್ಟಿಂಗ್‌ ಸಿಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಯುವಕರು ಒಂದೇ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಕಾರು ನದಿಯ ಬದಿಯಲ್ಲಿ ನಿಂತಿದೆ.

ನದಿಗೆ ಜಿಗಿದು ಯುವಕ ಆತ್ಮಹತ್ಯೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ರಾಮನಗರ: ಅರ್ಕಾವತಿ ನದಿಗೆ ಜಿಗಿದು ಯುವಕನೊರ್ವ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ರಾಮನಗರದ (Ramanagara News) ಕನಕಪುರ ನಗರದ ಮರಳೇಬೇಕುಪ್ಪೆ ವೃತ್ತ ಬಳಿ ನಡೆದಿದೆ. ಮುತ್ತು (28) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವನು.

ಮೂಲತಃ ಮಳವಳ್ಳಿ ತಾಲೂಕಿನ ನಿಂಗನಾಪುರದೊಡ್ಡಿ ನಿವಾಸಿಯಾದ ಮುತ್ತು ಕನಕಪುರದ ಸಾಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಾಮೈದನ ಜತೆಗೆ ಅರ್ಕಾವತಿ ನದಿ ಬಳಿ ಹೋಗಿದ್ದ. ಈ ವೇಳೆ ಬಾಮೈದನಿಗೆ ಕ್ಷಮೆಕೋರಿ ಏಕಾಏಕಿ ನದಿಗೆ ಹಾರಿದ್ದಾನೆ.

ಇದನ್ನೂ ಓದಿ | ರೀಲ್‌ ಅಲ್ಲ ರಿಯಲ್‌ನಲ್ಲಿ 2,000 ಕೋಟಿ ರೂ. ಮೌಲ್ಯದ ಡ್ರಗ್ಸ್‌ ದಂಧೆ ನಡೆಸಿದ ಚಿತ್ರ ನಿರ್ಮಾಪಕ ಅರೆಸ್ಟ್‌

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ. ಕನಕಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version