Site icon Vistara News

Murder Case: ಬೆಂಗಳೂರಲ್ಲಿ ಹಳೆ ದ್ವೇಷಕ್ಕೆ ಯುವಕನ ಭೀಕರ ಹತ್ಯೆ

Cutting Shop

ಬೆಂಗಳೂರು: ಹಳೆ ದ್ವೇಷಕ್ಕೆ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಮಮೂರ್ತಿನಗರದ ಮುಕುಟಮ್ಮ ದೇವಸ್ಥಾನ ಬಳಿ ಬುಧವಾರ ನಡೆದಿದೆ. ನಾಲ್ಕೈದು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿದ್ದಾರೆ.

ಮದನ್ ಮೃತ ಯುವಕ. ರಾಮಮೂರ್ತಿನಗರದ ಮುಖ್ಯ ರಸ್ತೆಯಲ್ಲಿರುವ ಕಟ್ಟಿಂಗ್ ಶಾಫ್‌ನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಹಲವು ದಿನಗಳ ಹಿಂದೆ ಹೃತ್ವಿಕ್ ಎಂಬಾತನ ಮೇಲೆ ಮದನ್ ಹಲ್ಲೆ ಮಾಡಿದ್ದ. ಚೆನೈನಲ್ಲಿದ್ದ ವಾಸವಾಗಿದ್ದ ಮದನ್ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ. ಮದನ್ ಬರುವಿಕೆಗಾಗಿ ಕಾದು ಕುಳಿತಿದ್ದ ಹಂತಕರು, ಲಾಂಗ್ ಹಿಡಿದು ದಾಳಿ ನಡೆಸಿ ಕೈ ಕತ್ತರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ‌ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ | National Flag : ತ್ರಿವರ್ಣ ಧ್ವಜದಲ್ಲಿ ಮುಸ್ಲಿಂ ಸಂಕೇತಗಳನ್ನು ಹಾಕಿ ಅಪಮಾನ ಆರೋಪ

ಕೇಸರಿ ಧ್ವಜಗಳನ್ನು ಕಟ್ಟುವಾಗ ಕ್ರೇನ್ ಹರಿದು ಯುವಕ ಸಾವು

ದಾವಣಗೆರೆ: ಹಿಂದು ಮಹಾಗಣಪತಿ ಶೋಭಾಯಾತ್ರೆ ಸಿದ್ಧತೆ ವೇಳೆ ತಲೆ ಮೇಲೆ ಕ್ರೇನ್ ಹರಿದು ಯುವಕ ಮೃತಪಟ್ಟಿರುವುದು ನಗರದ ಪಿಬಿ ರಸ್ತೆಯ ರೇಣುಕಾ ಮಂದಿರದ ಬಳಿ ನಡೆದಿದೆ. ಬಸವರಾಜಪೇಟೆಯ ಪೃಥ್ವಿರಾಜ್ (26) ಮೃತ. ಕೇಸರಿ ಧ್ವಜಗಳನ್ನು ಕಟ್ಟುವಾಗ ಆಯತಪ್ಪಿ ಕೆಳಗೆ ಬಿದ್ದಾಗ ಯುವಕನ ಮೇಲೆ ಕ್ರೇನ್‌ ಹರಿದಿದೆ. ಇದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅತ್ತಿಬೆಲೆ ಪಟಾಕಿ ದುರಂತ; ಮತ್ತೊಬ್ಬ ಕಾರ್ಮಿಕ ಮೃತ, ಸಾವಿನ ಸಂಖ್ಯೆ 15ಕ್ಕೇರಿಕೆ

ಆನೇಕಲ್: ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ (Attibele Fire Accident) ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದರಿಂದ ಪ್ರಕರಣದಲ್ಲಿ ಒಟ್ಟು ಸಾವಿನ ಸಂಖ್ಯೆ 15ಕ್ಕೇರಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದ ದಿನೇಶ್ ಎಂಬಾತ ಮೃತಪಟ್ಟಿದ್ದಾನೆ. ಅಗ್ನಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ಯುವಕ ಕೊನೆಯುಸಿರೆಳೆದಿದ್ದಾನೆ. ಅ.7ರಂದು ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿ 14 ಮಂದಿ ಸಜೀವ ದಹನವಾಗಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ.

ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿತ್ತು.

ಇದನ್ನೂ ಓದಿ | Ballari News: ಇಬ್ಬರು ಕಳ್ಳರ ಬಂಧನ; ಆಟೊ, ಬ್ಯಾಟರಿ, 60 ಗ್ಯಾಸ್‌ ಸಿಲಿಂಡರ್‌ ವಶ

ನಾಲ್ವರು ಅಧಿಕಾರಿಗಳ ಅಮಾನತು

ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ನೀಡಿದ್ದಾರೆ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಸುರಕ್ಷಾ ಕ್ರಮಗಳನ್ನು ಪರಿಶೀಲಿಸದೆ ಲೇಸೆನ್ಸ್‌ ನೀಡಿದ್ದರಿಂದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಹೀಗಾಗಿ ತಹಸೀಲ್ದಾರ್‌ ಸೇರಿ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆನೇಕಲ್‌ ತಾಲೂಕಿನ ಈ ಹಿಂದಿನ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್, ಉಪ ತಹಶೀಲ್ದಾರ್ ಶ್ರೀಧರ್, ರಾಜಸ್ವ ನಿರೀಕ್ಷಕ ಅತ್ತಿಬೆಲೆ, ಗ್ರಾಮ ಆಡಳಿತಾಧಿಕಾರಿಯನ್ನು ಸಸ್ಪೆಂಟ್‌ ಮಾಡಲಾಗಿದೆ.

Exit mobile version