ದೊಡ್ಡಬಳ್ಳಾಪುರ: ಪೋಟೊ ಶೂಟ್ ವಿಚಾರಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ನಡೆದಿದೆ. ಯುವಕರ ನಡುವೆ ಪೋಟೊ ತೆಗೆಯುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಸೂರ್ಯ (22) ಮೃತ ಯುವಕ. ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ಸ್ನೇಹಿತರ ಜತೆ ಸೂರ್ಯ ಫೋಟೋ ತೆಗೆಯುತ್ತಿದ್ದ. ಈ ವೇಳೆ ನಮ್ಮದೂ ಫೋಟೊ ತೆಗೆಯಿರಿ ಎಂದು ಕೆಲವರು ಗಲಭೆ ಮಾಡಿದ್ದಾರೆ. ಆಗ ಒಂದು ಫೊಟೊ ತೆಗೆದರೂ ಮತ್ತೆ ಗಲಾಟೆ ಮುಂದುವರಿದಿದೆ. ಮಾತಿಗೆ ಮಾತು ಬೆಳೆದು ಸೂರ್ಯ ಎದೆ ಭಾಗಕ್ಕೆ ಯುವಕನೊಬ್ಬ ಚಾಕು ಇರಿದಿದ್ದರಿಂದ, ತೀವ್ರ ರಕ್ತಸ್ರಾವವಾಗಿತ್ತು.
ಇದನ್ನೂ ಓದಿ | Murder Case : ಕೇವಲ 15 ನಿಮಿಷದಲ್ಲಿ ನಾಲ್ವರನ್ನು ಬಲಿ ಪಡೆದ ಕೊಲೆಗಡುಕ
ಗಾಯಾಳು ಯುವಕನನ್ನು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಅತಿಯಾದ ರಕ್ತ ಸ್ರಾವದಿಂದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಕ್ರಮ ಸಂಬಂಧ ಆರೋಪ; ವ್ಯಕ್ತಿಯ ಬರ್ಬರ ಹತ್ಯೆ
ಬೆಂಗಳೂರು: ಅಕ್ರಮ ಸಂಬಂಧ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ ನಡೆದಿದೆ. ವ್ಯಕ್ತಿಯನ್ನು ಹತ್ಯೆಗೈದು ಸುಟ್ಟು ಹಾಕಲಾಗಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸಿಗಂದೂರು ಸೇತುವೆ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಸಾವು
ಶಿವಮೊಗ್ಗ: ಸಿಗಂದೂರು ಸೇತುವೆ ಕಾಮಗಾರಿ ವೇಳೆ ಕೆಳಗೆ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಜಿಲ್ಲೆಯ ತುಮರಿ ಸಮೀಪ ನಡೆದಿದೆ. ಕಾಮಗಾರಿ ವೇಳೆ ಮೂರ್ಛೆ ಬಂದಿದ್ದರಿಂದ ಕಾರ್ಮಿಕ ಕೆಳಗೆ ಬಿದ್ದು ಗಾಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ದಿಲೀಪ್ ಬಿಲ್ಡ್ ಕಂಪನಿಯ ಕಾರ್ಮಿಕ, ಪಶ್ಚಿಮ ಬಂಗಾಳದ ರಬಿ ಉಲ್ ಇಸ್ಮಾಯಿಲ್ (42) ಮೃತ ವ್ಯಕ್ತಿ. ಸೇತುವೆ ಕಾಮಗಾರಿ ವೇಳೆ ಮೂರ್ಛೆ ಬಂದು ಕೆಳಗೆ ಬಿದ್ದ ಕಾರ್ಮಿಕನನ್ನು ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ | Exam Scam: ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವರ ಬಗ್ಗೆ ತುಟಿ ಬಿಚ್ಚದ ಆರ್.ಡಿ. ಪಾಟೀಲ್
ಮೃತ ಕಾರ್ಮಿಕನ ಸಹೋದರ ತಾಜಿನ್ ಅಲಿ, ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ