ಬೆಳಗಾವಿ: ಕಮಲ ಕೆಸರಿನಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಇದೊಂದು ಐತಿಹಾಸಿಕ ಕಾರ್ಯಕ್ರಮ. ಈ ಭೂಮಿಯಿಂದಲೇ ನಾವು ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೆವು. ಮಹಾತ್ಮಾ ಗಾಂಧೀಜಿ ಸಹಿತ ಬ್ರಿಟಿಷರನ್ನ ಓಡಿಸಲು ಇದೆ ಪುಣ್ಯ ಭೂಮಿಯಿಂದ ಹೋರಾಟ ಆರಂಭಿಸಿದ್ದರು. ಬಿಜೆಪಿಯನ್ನ ಓಡಿಸೋಕೆ ನಾವೀಗ ಇಲ್ಲಿಂದ ಯಾತ್ರೆ ಆರಂಭಿಸಿದ್ದೇವೆ. ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ.
ರಾಜೀವ್ ಗಾಂಧಿಯವರಿಗೆ ಯುವಕರ ಮೇಲೆ ಅಪಾರ ಅಭಿಮಾನ. 18 ವರ್ಷಕ್ಕೆ ಮತದಾನ ಹಕ್ಕನ್ನು ಅವರು ನೀಡಿದ್ರು. ಭಾರತ ದೇಶದಲ್ಲಿ ಯುವಕರದ್ದೇ ಶಕ್ತಿ ಅಂತ ಹೇಳಿದ್ರು. ಉದ್ಯೋಗ ಶೀಲ ರಾಷ್ಟ್ರ ಆಗಬೇಕು ಅನ್ನೋದು ನಮ್ಮ ವಿಚಾರ. ಯುವಕರಿಗಾಗಿಯೇ ಪ್ರತ್ಯೇಕ ಸ್ಕೀಮ್ ಮಾಡುವ ವಿಚಾರ ಮಾಡಿದ್ದೇವೆ. ಉದ್ಯೋಗ ಇಲ್ಲದೆ ಯುವಕರು ನರಳುತ್ತಿದ್ದಾರೆ. ಬೆಲೆ ಏರಿಕೆ ಗಗನಕ್ಕೆ ಹೋಗಿದೆ. 3 ಗ್ಯಾರಂಟಿಗಳನ್ನ ನಾವು ಈಗಾಗಲೇ ನೀಡಿದ್ದೇವೆ. ನಾವೆಲ್ಲ ಒಗ್ಗಟಾಗಿ 140 ಸೀಟ್ ಗಳನ್ನ ಗೆಲ್ಲಿಸುತ್ತೇವೆ. ಭಾರತ್ ಜೋಡೋ ಬಳಿಕ ಮೊದಲನೇ ಸಭೆಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಿದ್ದಾರೆ ಎಂದರು.
ಇದನ್ನೂ ಓದಿ: Rahul Gandhi: ಇಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ; ಬೆಳಗಾವಿಯಲ್ಲಿ ಚುನಾವಣೆ ರಣಕಹಳೆ