Site icon Vistara News

Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

Zameer Ahmed Khan‌

ಬೆಳಗಾವಿ: ರೋಷಾವೇಶವಾಗಿ ಭಾಷಣ ಮಾಡುವ ವೇಳೆ ಸಚಿವ ಜಮೀರ್ ಅಹ್ಮದ್‌ ಅವರು ಕೈಯಿಂದ ಗುದ್ದಿ ಡಯಾಸ್‌ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಗೋಕಾಕ್ ನಗರದಲ್ಲಿ‌ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕೈ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಜಮೀರ್‌ ಅಹ್ಮದ್‌ (Zameer Ahmed Khan‌) ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಾ ಡಯಾಸ್‌ ಮೇಲೆ ಗುದ್ದಿದ್ದರಿಂದ ಗಾಜು ಪುಡಿಪುಡಿಯಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗೋಕಾಕ್‌ ಕೆಜಿಎನ್ ಹಾಲ್‌ ಶನಿವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಘಟನೆ ನಡೆದಿದೆ. ಭಾಷಣದ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಜಮೀರ್‌ ಅಹ್ಮದ್‌ ಅವರು, ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಎದೆಗೆ ಗುಂಡು ತಿಂದು ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಆದರೆ, ಬಿಜೆಪಿಯವರು ಕೋಮು ದ್ವೇಷ ಬಿತ್ತಲು ಮುಂದಾಗುತ್ತಾರೆ ಎಂದು ಆರೋಪಿಸಿದರು.

ಸಾರೇ ಜಹಾಂಸೇ ಅಚ್ಚಾ, ನಾವೆಲ್ಲ ಒಂದು, ದೇಶ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್‌ಗೆ ಅಳವಡಿಸಿದ ಗಾಜು ಒಡೆದು ಚೂರು ಚೂರಾಗಿದೆ. ಈ ವೇಳೆ ಅಲ್ಲೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದರು. ಗಾಜು ಒಡೆದರೂ ಸಚಿವರು ಮಾತ್ರ ತಮ್ಮ ಭಾಷಣ ಮುಂದುವರೆಸಿದ್ದು ಕಂಡುಬಂತು.

ಇವ್ರು ನಮ್ಮ ಪ್ರಧಾನಿ ಮೋದಿ ಅಲ್ಲ; ಪಾನಿಪುರಿ ಮಾರೋ ಈ ಮೋದಿ ಫುಲ್‌ ಫೇಮಸ್‌

ಗುಜರಾತ್‌: ದೇಶಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ. ಅಬ್ಬರದ ಪ್ರಚಾರ, ಪ್ರತಿಪಕ್ಷಗಳಿಗೆ ಟಾಂಗ್‌ ಕೊಡುತ್ತಾ ಒಂದೆಡೆ ಪ್ರಧಾನಿ ಮೋದಿ ಬ್ಯುಸಿ ಆಗಿದ್ದರೆ, ಮತ್ತೊಂದೆಡೆ ಗುಜರಾತ್‌ನಲ್ಲೊಬ್ಬ ಮೋದಿ ಪಾನಿಪುರಿ(Viral video) ಮಾರುತ್ತಾ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಒಂದು ಕ್ಷಣ ನೋಡೋರಿಗೆ ಪ್ರಧಾನಿ ಮೋದಿಯೇ ಪಾನಿಪುರಿ ಮಾರುತ್ತಿದ್ದಾರೋ ಅಂತ ಅನಿಸೋದು ಪಕ್ಕಾ! ಗುಜರಾತ್‌ನ ಆನಂದ್‌ನಲ್ಲಿ ಪಾನಿಪುರಿ ಅಂಗಡಿ(Pani puri seller) ನಡೆಸುತ್ತಿರುವ ಅನಿಲ್‌ ಭಾಯಿ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿ(Narendra Modi) ಯಂತೆ ಉಡುಪು ತೊಟ್ಟು, ಕನ್ನಡಕ ಧರಿಸಿ, ಹೇರ್‌ಸ್ಟೈಲ್‌ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಮೋದಿ ಎಂದೇ ಫುಲ್‌ ಫೇಮಸ್‌ ಆಗಿದ್ದಾರೆ.

ಬಿಳಿ ಗಡ್ಡ, ಕೇಶ ವಿನ್ಯಾಸ ಆತನ ಹಾವಭಾವ ಪ್ರಧಾನಿ ಮೋದಿಗೆ ಹೋಲುತ್ತಿರುವ ಠಕ್ಕರ್‌, ಮೂಲತಃ ಜುನಾಗಢ್‌ ನಿವಾಸಿ. ಅವರು ತಮ್ಮ 18ನೇ ವಯಸ್ಸಿನಿಂದಲೂ ತುಳಸಿ ಪಾನಿ ಪುರಿ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಅಂಗಡಿಯನ್ನು ಅವರ ತಾತ ಶುರು ಮಾಡಿದ್ದರು ಎಂಬುದು ವಿಶೇಷ. ಇನ್ನು ಮೋದಿಯಂತೆ ಕಾಣುತ್ತಿರುವ ಠಕ್ಕರ್‌ ಅವರ ವಿಶೇಷ ಲುಕ್‌ಗೆ ಮನಸೋತಿರುವ ಗ್ರಾಹಕರು ಅವರ ಬಳಿ ಬಂದು ಪಾನಿಪುರಿ ತಿಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.

ಸುಮಾರು 71 ವರ್ಷದ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿ. ಅವರ ಸ್ವಚ್ಛ ಭಾರತ ಅಭಿಯಾನದಿಂದ ಬಹಳಷ್ಟು ಸ್ಫೂರ್ತಿಗೊಂಡಿರುವ ಠಕ್ಕರ್‌ ತಮ್ಮ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ವಿಶೇಷ ಲುಕ್‌ ಬಗ್ಗೆ ಪ್ರತಿಕ್ರಿಯಿಸಿರುವ ಠಕ್ಕರ್‌, ನನ್ನ ಪ್ರಧಾನಿ ಮೋದಿಯ ಲುಕ್‌ ಬಗ್ಗೆ ಜನ ಅತ್ಯಂತ ಪ್ರೀತಿ ತೋರುತ್ತಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ನನ್ನ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಹೋಗುವುದು ಬಹಳ ಸಂತೋಷ ಕೊಡುತ್ತಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

ಇನ್ನು ಠಕ್ಕರ್‌ ಮಾತ್ರವಲ್ಲ ಮುಂಬೈನಲ್ಲೂ ಮತ್ತೋರ್ವ ವ್ಯಕ್ತಿಯೂ ಪ್ರಧಾನಿ ಮೋದಿಯಂತೆ ತನ್ನ ಸ್ಟೈಲ್‌ ಅನ್ನು ಬದಲಿಸಿಕೊಂಡು ಫುಲ್‌ ಫೇಮಸ್‌ ಆಗಿದ್ದಾನೆ. ಮುಂಬೈನ ವಿಕಾಸ್‌ ಮಹಂತೆ ಎಂಬಾತ ಗರ್ಬಾ ಡಾನ್ಸ್‌ ಮಾಡುತ್ತಿರುವ ವಿಡಿಯೋ ಫೇಮಸ್‌ ಆಗಿತ್ತು. ಇದು ಪ್ರಧಾನಿ ಮೋದಿಯ ಡೀಪ್‌ ಫೇಕ್‌ ವಿಡಿಯೋ ಎನ್ನಲಾಗಿತ್ತು. ಆದಾದ ಬಳಿಕ ಸ್ವತಃ ವಿಕಾಸ್‌ ಮಹಾಂತೆ ವಿಡಿಯೋದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ತಾವೊಬ್ಬ ಪ್ರಧಾನಿ ಮೋದಿಯ ಅಭಿಯಾನಿ. ಆ ವಿಡಿಯೋ ಸ್ವತಃ ತನ್ನದೇ ಎಂದು ಹೇಳಿದ್ದರು. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಆಗಾಗ ಜೂನಿಯರ್‌ ಮೋದಿಗಳು ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಪಾನಿಪುರಿ ಮಾರುತ್ತಿರುವ ಮೋದಿಯನ್ನು ಕಂಡು ಜನಕ್ಕೆ ಖುಷಿಯೋ ಖುಷಿ.





Exit mobile version