Site icon Vistara News

Actress Nayanathara: ‘ಬಾಹುಬಲಿ’ ಸಿನಿಮಾ ದೃಶ್ಯದ ಮರುಸೃಷ್ಟಿಯಲ್ಲಿ ವಿಘ್ನೇಶ್ ಶಿವನ್ ಪುತ್ರರು!

Actress Nayanathara

ಬೆಂಗಳೂರು: ಕಾಲಿವುಡ್ ನಟಿ ನಯನತಾರಾ(Actress Nayanathara) ಹಾಗೂ ನಿರ್ಮಾಪಕ ವಿಘ್ನೇಶ್ ದಂಪತಿ ಉಯಿರ್ ಮತ್ತು ಉಲಗ್ ಎಂಬ ಅವಳಿ ಮಕ್ಕಳನ್ನು ಹೊಂದಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ದಂಪತಿ ಇತ್ತೀಚಿಗೆ ತಮ್ಮ ಮುದ್ದಿನ ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ಈ ದಂಪತಿ ಸೂಪರ್ ಹಿಟ್ ಸಿನಿಮಾವೊಂದರ ದೃಶ್ಯವನ್ನು ತಮ್ಮ ಮಕ್ಕಳ ಮೂಲಕ ಮರು ಸೃಷ್ಟಿ ಮಾಡಿದ್ದಾರೆ.

ದಕ್ಷಿಣ ಭಾರತದ ಹಿಟ್ ಚಲನಚಿತ್ರಗಳಲ್ಲಿ ಒಂದಾದ ಬಾಹುಬಲಿ ಚಿತ್ರ ಜನರ ಮೆಚ್ಚುಗೆಯನ್ನು ಪಡೆದ ಸೂಪರ್ ಹಿಟ್ ಚಿತ್ರವಾಗಿತ್ತು. ಅದರ ಒಂದೊಂದು ದೃಶ್ಯವು ಅಮೋಘವಾಗಿ ಮೂಡಿಬಂದಿತ್ತು. ಹಾಗಾಗಿ ಅದು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇಂತಹ ಸೂಪರ್ ಹಿಟ್ ಚಿತ್ರ ದೃಶ್ಯವೊಂದನ್ನು ನಯನತಾರಾ ಹಾಗೂ ವಿಘ್ನೇಶ್ ಪುತ್ರರು ಮರುಸೃಷ್ಟಿ ಮಾಡಿದ್ದಾರೆ.

ಈ ಚಿತ್ರದಲ್ಲಿ ರಮ್ಯಕೃಷ್ಣರವರು ಶಿವಗಾಮಿ ಪಾತ್ರದಲ್ಲಿ ನೀರಿನಲ್ಲಿ ಮುಳುಗುತ್ತಿರುವಾಗ ಬಾಹುಬಲಿಯನ್ನು ಕೈಯಲ್ಲಿ ಎತ್ತಿ ಹಿಡಿದಿರುವ ದೃಶ್ಯ ಇಂದಿಗೂ ಎಲ್ಲರ ಮನದಲ್ಲಿ ನೆಲೆಯೂರಿದೆ. ಅಂತಹ ದೃಶ್ಯವನ್ನು ಇದೀಗ ವಿಘ್ನೇಶ್‌ ಅವರು ಮರುಸೃಷ್ಟಿ ಮಾಡಿದ್ದಾರೆ. ತಮ್ಮ ಮಕ್ಕಳಿಗೆ ಬಾಹುಬಲಿ ಸಾಂಪ್ರದಾಯಿಕ ಉಡುಗೆಯನ್ನು ತೊಡಿಸಿ, ವಿಘ್ನೇಶ್ ಅವರು ನೀರಿನಲ್ಲಿ ಮುಳುಗಿಕೊಂಡು ತಮ್ಮ ಮಕ್ಕಳನ್ನು ಕೈಯಲ್ಲಿ ಎತ್ತಿ ಹಿಡಿದಿದ್ದಾರೆ. ಹಾಗೇ ಇದಕ್ಕೆ ಸಂಬಂಧಿಸಿದ ಫೋಟೊವನ್ನು ನಯನತಾರಾ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು “My dear Baahubali 1&2 cos of U 2. It’s a Happy Father’s Day. Life with U boys sooo sooo amazingly satisfying. Love you my uyir & ulag @nayanathara(sic)” ಎಂಬ ಶೀರ್ಷಿಕೆ ನೀಡಿದ್ದಾರೆ.

ನಯನತಾರಾ ಈ ಫೋಟೊವನ್ನು ಹಂಚಿಕೊಳ್ಳುವ ಮೂಲಕ ವಿಘ್ನೇಶ್ ಶಿವನ್ ಅವರಿಗೆ ತಂದೆಯ ದಿನದ ಶುಭಾಶಯ ತಿಳಿಸಿದ್ದಾರೆ. ಹಾಗೇ ಮಕ್ಕಳ ಆಗಮನದಿಂದ ಅವರ ಜೀವನ ಎಷ್ಟು ತೃಪ್ತಿಕರವಾಗಿದೆ ಎಂಬುದನ್ನು ವಿವರಿಸಿದ್ದಾರೆ.
ನಯನತಾರಾ ಹಾಗೂ ವಿಘ್ನೇಶ್ ತಮ್ಮ ಅವಳಿ ಗಂಡುಮಕ್ಕಳಾದ ಉಯಿರ್ ಮತ್ತು ಉಲಗ್ ಅವರನ್ನು ಅಕ್ಟೋಬರ್ 2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಅಂದಿನಿಂದ ಅವರು ತಮ್ಮ ಮುದ್ದಾದ ಮಕ್ಕಳೊಂದಿಗಿನ ಫೋಟೊಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅವರು ತಮ್ಮ ಮಕ್ಕಳೊಂದಿಗೆ ಮೋಜು ಮಸ್ತಿ ಮಾಡಲು ಹಾಂಗ್‌ಕಾಂಗ್‌ಗೆ ಹೋಗಿದ್ದರು.

ಇದನ್ನೂ ಓದಿ: Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

ಪ್ರಸ್ತುತ ನಯನತಾರಾ ಅವರು ನಿವಿನ್ ಪೌಲಿ ಅವರೊಂದಿಗೆ ‘ಡಿಯರ್ ಸ್ಟೂಡೆಂಟ್ಸ್’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹಾಗೇ ಟೆಸ್ಟ್’ ಮತ್ತು ‘ಮನ್ನಂಗಟ್ಟಿ 1960’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಅವರು ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ ಮತ್ತು ಎಸ್.ಜೆ ಸೂರ್ಯ ಅಭಿನಯದ ‘ಲವ್ ಇನ್ಶೂರೆನ್ಸ್ ಕಾರ್ಪೊರೇಷನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Exit mobile version