ಮುಂಬೈ : ಶ್ರೀಮಂತಿಕೆಯಲ್ಲಿ ಹೆಸರುವಾಸಿಯಾದ ಕುಟುಂಬವೆಂದರೆ ಅಂಬಾನಿ ಕುಟುಂಬ. ಇವರ ಕುಟುಂಬದ ಯಾವುದೇ ಸಮಾರಂಭವು ಬಹಳ ಅದ್ಧೂರಿಯಾಗಿ ಮಾಡಲಾಗುತ್ತದೆ. ಅದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಇದೀಗ ಅಂಬಾನಿ ಕುಟುಂಬ (Ambani Wedding)ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ದೂರಿ ಮದುವೆಯ ತಯಾರಿಯಲ್ಲಿದೆ. ಈ ಸಮಾರಂಭದ ವಿವಾಹಪೂರ್ವ ಉತ್ಸವಗಳು ಈಗಾಗಲೇ ಬಹಳ ಅದ್ದೂರಿಯಾಗಿ ನಡೆದಿದ್ದು, ಇದು ತುಂಬಾ ದುಬಾರಿ ವೆಚ್ಚದಲ್ಲಿ ಮಾಡಲಾಗುತ್ತಿದೆ.
ಮೊದಲ ವಿವಾಹ ಪೂರ್ವ ಕಾರ್ಯಕ್ರಮವು ಗುಜರಾತ್‍ನ ಜಾಮ್‌ನಗರದಲ್ಲಿ ನಡೆಯಿತು. ಈ ಆಚರಣೆಗಾಗಿಯೇ 1200 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ ಎಂದು ವರದಿಯಾಗಿದೆ. ಅಂಬಾನಿ ಕುಟುಂಬದ ಈ ಅದ್ದೂರಿ ಆಚರಣೆಗಳು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರ ಇತರ ಮಕ್ಕಳಾದ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಮತ್ತು ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹಗಳಲ್ಲಿ ಮಾಡಲಾದ ಖರ್ಚು ವೆಚ್ಚಗಳು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ವಿವಾಹ :
2018ರಲ್ಲಿ ಇಶಾ ಅಂಬಾನಿ ಅವರ ವಿವಾಹವು ಶ್ರೀಮಂತ ಭಾರತೀಯ ವಿವಾಹ ಎಂದೆನಿಸಿಕೊಂಡಿತ್ತು. ಈ ವಿವಾಹ ಸಮಾರಂಭಗಳಿಗಾಗಿ ಅಂಬಾನಿ ಕುಟುಂಬವು ಸುಮಾರು 830 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಅದರಲ್ಲೂ ಮದುವೆಯ ಆಮಂತ್ರಣ ಪತ್ರಿಕೆಗೆ ಮಾತ್ರ ಸುಮಾರು 3 ಲಕ್ಷ ರೂ. ಖರ್ಚು ಮಾಡಿದೆ ಎನ್ನಲಾಗಿದೆ. ಇಟಲಿಯ ಲೇಕ್ ಕೊಮೊದಲ್ಲಿ ನಿಶ್ಚಿತಾರ್ಥ ಸಮಾರಂಭ, ಉದಯಪುರದಲ್ಲಿ ವಿವಾಹ ಪೂರ್ವ ಸಮಾರಂಭಗಳು ಮತ್ತು ಮುಂಬೈನ ಆಂಟಿಲಿಯಾದಲ್ಲಿ ಭವ್ಯ ವಿವಾಹ ಸಮಾರಂಭ ನಡೆದಿತ್ತು.
ಈ ಮದುವೆಯಲ್ಲಿ 33-50 ಕೋಟಿ ರೂ.ಗಳ ವೆಚ್ಚದ ಬಿಯೋನ್ಸ್ ಫರ್ಮಾಮೆನ್ಸ್ ಪ್ರಮುಖ ಹೈಲೈಟ್ ಆಗಿತ್ತು. ಅತಿಥಿಗಳಾಗಿ ಪ್ರಿಯಾಂಕಾ ಚೋಪ್ರಾ, ಹಿಲರಿ ಕ್ಲಿಂಟನ್, ಅರಿಯಾನಾ ಹಫಿಂಗ್ಟನ್ ಮತ್ತು ಹಲವಾರು ಬಾಲಿವುಡ್ ತಾರೆಯರು ಸೇರಿದ್ದರು.
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ :
2019ರಲ್ಲಿ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹವು ಅಷ್ಟೇ ಅದ್ಧೂರಿಯಾಗಿ ನಡೆಯಿತು. ನಿಖರವಾದ ವೆಚ್ಚವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇದು ಸೇಂಟ್ ಮೋರಿಟ್ಜ್‌ನಲ್ಲಿ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ದಿ ಚೈನ್ಸ್ಮೋಕರ್ಸ್ ಮತ್ತು ಕೋಲ್ಡ್ಪ್ಲೇನ ಕ್ರಿಸ್ ಮಾರ್ಟಿನ್ ಅವರು ಉತ್ತಮ ಪ್ರದರ್ಶನ ನೀಡಿದ್ದರು.
ಮುಂಬೈನಲ್ಲಿ ನಡೆದ ಮೂರು ದಿನಗಳ ಮದುವೆಯಲ್ಲಿ ಟೋನಿ ಬ್ಲೇರ್, ಸುಂದರ್ ಪಿಚೈ ಮತ್ತು ಲಕ್ಷ್ಮಿ ಮಿತ್ತಲ್ ಕಾಣಿಸಿಕೊಂಡರು. ಮದುವೆಯ ಕಾರ್ಡ್‌ನ ಮೌಲ್ಯ ಸುಮಾರು 1.5 ಲಕ್ಷ ರೂ. ಆಗಿತ್ತು. ಮರೂನ್ 5 ಫರ್ಮಾಮೆನ್ಸ್ ಈ ಮದುವೆಯಲ್ಲಿ ಪ್ರದರ್ಶಿಸಲಾಗಿತ್ತು.
ಇದನ್ನೂ ಓದಿ: ರೋಗಿಗಳನ್ನು ನೋಡಿಕೊಳ್ಳುವ ಬದಲು ಕೋತಿಮರಿ ಜೊತೆ ಆಟವಾಡಿದ ನರ್ಸ್‌ಗಳು! ಕೊನೆಗೆ ಆಗಿದ್ದೇನು?
ಹಾಗೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಆಚರಣೆಯಲ್ಲಿ ಅಂಬಾನಿ ಕುಟುಂಬವು ಅದ್ಧೂರಿ ಅಭೂತಪೂರ್ವ ಆಚರಣೆಗಳನ್ನು ಮಾಡಲು ಯೋಜಿಸುತ್ತಿದೆ. ಶ್ರೀಮಂತ ಮನೆತನ ಎನಿಸಿಕೊಂಡ ಅಂಬಾನಿ ಕುಟುಂಬದ ಈ ಭವ್ಯ ವಿವಾಹವನ್ನು ಕಣ್ತುಂಬಿಕೊಳ್ಳಲು ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಮದುವೆಯ ಒಟ್ಟು ವೆಚ್ಚ 2672 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಮದುವೆ ಬಜೆಟ್ ಈ ಮೊತ್ತ ಮೀರಿ ಹೋಗುವ ಸಾಧ್ಯತೆಯೂ ಇದೆ.