Site icon Vistara News

Anant Radhika Wedding: ಅಂಬಾನಿ ಮದುವೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಸ್ಟಾರ್ ಯಾರು?

Anant Radhika Wedding

ವಿಶ್ವದಲ್ಲೇ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿ ಗುರುತಿಸಿಕೊಂಡ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ (mukesh ambani) ಮತ್ತು ನೀತಾ ಅಂಬಾನಿ (nita ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant Radhika Wedding) ಸಮಾರಂಭಗಳನ್ನು ಜಗತ್ತೇ ಕಣ್ತುಂಬಿಕೊಂಡಿದೆ. ಸಾಕಷ್ಟು ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲ ಭಾರಿ ಆದಾಯವನ್ನು ಗಳಿಸಿದ್ದಾರೆ. ಇವರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರುವವರು ಯಾರಾಗಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ.

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರು ಪುತ್ರನ ಮದುವೆಯನ್ನು ಹತ್ತು ದಿನಗಳ ಅದ್ದೂರಿ ಆಚರಣೆಗಳ ಮೂಲಕ ಸೋಮವಾರ ಮುಂಬಯಿನಲ್ಲಿ ಮುಕ್ತಾಯಗೊಳಿಸಿದರು. ಆದರೆ ಮದುವೆಯ ಪೂರ್ವದ ಹಬ್ಬಗಳು ನಾಲ್ಕು ತಿಂಗಳುಗಳ ಕಾಲ ನಡೆದಿತ್ತು. ಇದರಲ್ಲಿ ಹಲವಾರು ಅಂತಾರಾಷ್ಟ್ರೀಯ ಸೂಪರ್‌ಸ್ಟಾರ್‌ಗಳು ಪ್ರದರ್ಶನ ನೀಡಿದ್ದರು. ಹಲವು ತಾರೆಗಳಿಗೆ ಕೋಟ್ಯಾಂತರ ರೂಪಾಯಿ ಪಾವತಿಸಿ ಕರೆದುಕೊಂಡು ಬರಲಾಗಿತ್ತು. ಅದರಲ್ಲಿ ಒಬ್ಬರು 83 ಕೋಟಿ ರೂ. ಸಂಭಾವನೆ ಪಡೆದಿದ್ದರೆ ಎನ್ನಲಾಗಿದೆ.


ಅತಿ ಹೆಚ್ಚು ಸಂಭಾವನೆ ಪಡೆದ ಸೆಲೆಬ್ರಿಟಿ

ಜುಲೈ 10ರಂದು ಮುಂಬಯಿನಲ್ಲಿ ನಡೆದ ಅನಂತ್ ಮತ್ತು ರಾಧಿಕಾ ಅವರ ಸಂಗೀತ ಸಮಾರಂಭದಲ್ಲಿ ಭಾಗವಹಿಸಲು ಪಾಪ್ ಸೆನ್ಸೇಷನ್ ಜಸ್ಟಿನ್ ಬೈಬರ್ ಆಗಮಿಸಿದ್ದರು. ಕೆನಡಾದ ತಾರೆ ಸಂಗೀತ ಸಮಾರಂಭದಲ್ಲಿ ಪ್ರದರ್ಶನ ನೀಡಲು 10 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 83 ಕೋಟಿ ರೂ. ಶುಲ್ಕ ವಿಧಿಸಿದ್ದಾರೆ ಎನ್ನಲಾಗಿದೆ.

ಜಸ್ಟಿನ್ ಬೈಬರ್ ಅವರ ಹಲವಾರು ಚಾರ್ಟ್‌ಬಸ್ಟರ್‌ಗಳು ಅಂಬಾನಿ ಕುಟುಂಬ, ಸ್ನೇಹಿತರು ಮತ್ತು ಬಾಲಿವುಡ್ ಸ್ಟಾರ್ ಗಳನ್ನು ಆಕರ್ಷಿಸಿತು. ಬೈಬರ್ ಅವರು ಖಾಸಗಿ ಜೆಟ್‌ನಲ್ಲಿ ಭಾರತಕ್ಕೆ ಬಂದು ತೆರಳಿದರು. ಮುಕೇಶ್ ಅಂಬಾನಿ ಅವರ ಪ್ರಯಾಣಕ್ಕಾಗಿ ವಿಶೇಷ ಕಾರು ಮತ್ತು ಮೋಟಾರು ವಾಹನವನ್ನು ನೀಡಿದರು. ಬಿಲಿಯನೇರ್ ಬೈಬರ್‌ಗೆ ಅವರ ಖಾಸಗಿ ಭದ್ರತೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಸಹ ಒದಗಿಸಲಾಗಿತ್ತು. ಹಾಗಾಗಿ ಬೈಬರ್‌ ಪಡೆದ ಸಂಭಾವನೆಗಿಂತ ಅವರ ಕಾರುಬಾರಿಗೆ ಮಾಡಿರುವ ಖರ್ಚು ಇನ್ನೂ ಹೆಚ್ಚು ಎನ್ನಲಾಗುತ್ತಿದೆ.


ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು

ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮ ಮಾರ್ಚ್ ನಲ್ಲಿ ಜಾಮ್‌ನಗರದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಪಾಪ್ ಸಿಂಗರ್ ರಿಹಾನ್ನಾ ಪ್ರದರ್ಶನ ನೀಡಿದ್ದರು. ಇದಕ್ಕಾಗಿ ಅವರು 6 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 50 ಕೋಟಿ ರೂ. ಶುಲ್ಕ ವಿಧಿಸಿದ್ದಾರೆ ಎನ್ನಲಾಗಿದೆ.


ಯುರೋಪ್‌ನ ದಕ್ಷಿಣ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆದ ಮತ್ತೊಂದು ವಿವಾಹಪೂರ್ವ ಆಚರಣೆಯಲ್ಲಿ ಷಕೀರಾ ಸ್ಟಾರ್ ಆಕರ್ಷಣೆಯಾಗಿದ್ದರು. ಕೊಲಂಬಿಯಾದ ತಾರೆ ಹಲವಾರು ಮಿಲಿಯನ್ ಡಾಲರ್‌ ಶುಲ್ಕವನ್ನು ವಿಧಿಸಿದ್ದರು.


ಮದುವೆಯ ಸಂಭ್ರಮದಲ್ಲಿ ಇತರ ಅಂತಾರಾಷ್ಟ್ರೀಯ ಗಾಯಕರಾದ ರೆಮಾ ಮತ್ತು ಲೂಯಿಸ್ ಫೊಂಜಿ ಅವರಿಬ್ಬರೂ 3 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 25 ಕೋಟಿ ರೂ. ಶುಲ್ಕವನ್ನು ಪಡೆದರು.

ಇದನ್ನೂ ಓದಿ: Anant Ambani Marriage: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!

ಇವರಿಷ್ಟೇ ಅಲ್ಲದೇ ಸಮಾಜವಾದಿ ಸಹೋದರಿಯರಾದ ಕಿಮ್ ಮತ್ತು ಖ್ಲೋ ಕಾರ್ಡಶಿಯಾನ್ ಮತ್ತು ಕುಸ್ತಿಪಟು-ಹಾಲಿವುಡ್ ತಾರೆ ಜಾನ್ ಸೆನಾ ಕೂಡ ಪಾಲ್ಗೊಂಡಿದ್ದರು.

Exit mobile version