Site icon Vistara News

Ananth Ambani: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

Ananth Ambani

ಮುಂಬೈ : ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ (Ananth Ambani) ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಈಗಾಗಲೇ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರನ ಮದುವೆಯ ಹಿನ್ನಲೆಯಲ್ಲಿ ಎರಡು ಅದ್ಧೂರಿ ವಿವಾಹಪೂರ್ವ ಉತ್ಸವಗಳನ್ನು ಆಚರಿಸಿದ್ದರು. ಈ ನಡುವೆ ಮದುವೆ ತಯಾರಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಅನಂತ್ ಮದುವೆಗೂ ಮುನ್ನ ಅಂಬಾನಿ ದಂಪತಿ ಇತ್ತೀಚೆಗೆ ದೀನದಲಿತರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದರು.

ಅನಂತ್ ಮತ್ತು ರಾಧಿಕಾ ಅವರ ವಿವಾಹ ಸಮಾರಂಭವು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜುಲೈ 2 ರಂದು ಅಂಬಾನಿ ಕುಟುಂಬವು ದೀನದಲಿತರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದೆ. ಈ ಸಮಾರಂಭವು ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‍ನಲ್ಲಿ ನಡೆಯಿತು.

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಸೇರಿದಂತೆ ಇಡೀ ಕುಟುಂಬ ಮಂಗಳವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂಬೈ ಬಳಿಯ ಪಾಲ್ಘರ್ ಪ್ರದೇಶದ 50 ಬಡ ದಂಪತಿಗಳೊಂದಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 800 ಜನರು ಭಾಗವಹಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಅಂಬಾನಿ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಶಾ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಆಗಮಿಸಿದ ವಿಡಿಯೋ ವೈರಲ್ ಆಗಿದೆ. ಲೈಟ್ ಮೇಕಪ್ ಮತ್ತು ಶರಾರಾ ಸೂಟ್‍ನಲ್ಲಿ ಶ್ಲೋಕಾ ಸುಂದರವಾಗಿ ಕಾಣುತ್ತಿದ್ದರು. ಮತ್ತೊಂದೆಡೆ, ಅವರ ಪತಿ ಆಕಾಶ್ ಗರಿಗರಿಯಾದ ಬಿಳಿ ಬಣ್ಣದ ಶರ್ಟ್‍ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಹಾಗೇ ಅನಾರ್ಕಲಿಯನ್ನು ಧರಿಸಿಕೊಂಡ ಇಶಾ ಅಂಬಾನಿ, ಅವರ ಪತಿ ಆನಂದ್ ಪಿರಮಾಲ್ ಅವರೊಂದಿಗೆ ಕಾಣಿಸಿಕೊಂಡರು. ನೀತಾ ಅಂಬಾನಿಯವರು ಕೆಂಪು-ಗುಲಾಬಿ ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದ್ದಾರೆ.

ಸಮಾಜ ಸೇವೆಯಲ್ಲಿ ನಂಬಿಕೆ ಹೊಂದಿರುವ ಅಂಬಾನಿ ಕುಟುಂಬವು ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಿತ್ತು. ಕುಟುಂಬವು ಇತರರಿಗೆ ಸೇವೆ ಸಲ್ಲಿಸುವ ಮೂಲಕ ದೊಡ್ಡ ಸಮಾರಂಭವನ್ನು ಪ್ರಾರಂಭಿಸುವ ಸಂಪ್ರದಾಯವನ್ನು ಹೊಂದಿದೆ. ಮುಕೇಶ್ ಅಂಬಾನಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿ ದಂಪತಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಸಾಮೂಹಿಕ ವಿವಾಹದಲ್ಲಿ ಅಂಬಾನಿ ಕುಟುಂಬವು ದಂಪತಿಗಳಿಗೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿತು. ವಧುವಿಗೆ ಮಂಗಳಸೂತ್ರ, ಮದುವೆಯ ಉಂಗುರಗಳು ಮತ್ತು ಮೂಗುತಿ ಸೇರಿದಂತೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

ಹಾಗೇ ಅವರು ಕಾಲುಂಗುರ ಮತ್ತು ಕಾಲ್ಗೆಜ್ಜೆಗಳು ಸೇರಿದಂತೆ ಬೆಳ್ಳಿಯ ಆಭರಣಗಳನ್ನು ದಂಪತಿಗಳಿಗೆ ನೀಡಿದರು. ವಧುವಿಗೆ 1.01 ಲಕ್ಷ ರೂ.ಗಳ ಚೆಕ್ ಅನ್ನು ನೀಡಲಾಯಿತು. ಪ್ರತಿ ದಂಪತಿಗೆ 36 ಅಗತ್ಯ ವಸ್ತುಗಳು ಮತ್ತು ಪಾತ್ರೆಗಳು, ಗ್ಯಾಸ್ ಸ್ಟೌವ್, ಮಿಕ್ಸರ್ ಮತ್ತು ಫ್ಯಾನ್‍ನಂತಹ ಉಪಕರಣಗಳು, ಹಾಸಿಗೆ ಮತ್ತು ದಿಂಬುಗಳು ಸೇರಿದಂತೆ ಒಂದು ವರ್ಷಕ್ಕೆ ಸಾಕಾಗುವಷ್ಟು ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು.

Exit mobile version