Site icon Vistara News

Ananth Ambani: ಮಗನ ಮದುವೆ ಖುಷಿಯಲ್ಲಿ ನೀತಾ ಅಂಬಾನಿ ಹಾಗೂ ಮುಖೇಶ್‌ ಅಂಬಾನಿಯಿಂದ ಬಡವರಿಗಾಗಿ ಸಾಮೂಹಿಕ ವಿವಾಹ!

Ananth Ambani

ಮುಂಬೈ : ಜುಲೈ 12ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿ (Ananth Ambani) ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಆಮಂತ್ರಣ ಪತ್ರಿಕೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿತ್ತು. ಇದೀಗ ಅವರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಅಂಬಾನಿ ಕುಟುಂಬವು ಮತ್ತೊಂದು ಸುತ್ತಿನ ಭವ್ಯ ವಿವಾಹ ಪೂರ್ವ ಉತ್ಸವಗಳನ್ನು ಆಯೋಜಿಸಲು ಯೋಜಿಸುತ್ತಿದೆ ಎನ್ನಲಾಗಿದೆ.

ಹೌದು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಯ ಭಾಗವಾಗಿ, ಮುಖೇಶ್ ಮತ್ತು ನೀತಾ ಅಂಬಾನಿ ಜುಲೈ 2 ರಂದು ಪಾಲ್ಘರ್ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ದೀನದಲಿತರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಸೋಮವಾರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು ಮತ್ತು ಶಿವನ ಸನ್ನಿಧಿಯಲ್ಲಿ ಮೊದಲ ವಿವಾಹ ಆಮಂತ್ರಣವನ್ನು ನೀಡಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಹಿಂದೂ ವೈದಿಕ ಪದ್ಧತಿಗಳಿಗೆ ಬದ್ಧವಾಗಿ ವಿವಾಹ ಉತ್ಸವಗಳನ್ನು ನಿಖರವಾಗಿ ಯೋಜಿಸಲಾಗಿದೆ. ಸಮಾರಂಭಗಳು ಜುಲೈ 12 ರ ಶುಕ್ರವಾರ ಶುಭ ವಿವಾಹ ಸಮಾರಂಭದೊಂದಿಗೆ ಪ್ರಾರಂಭವಾಗಲಿದೆ. ಮೂಲಗಳ ಪ್ರಕಾರ, ಅತಿಥಿಗಳು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸುವ ಮೂಲಕ ಈ ಸಮಾರಂಭಕ್ಕೆ ಪ್ರೋತ್ಸಾಹ ನೀಡುವಂತೆ ಕೇಳಿಕೊಳ್ಳಲಾಗಿದೆ.

ಇದನ್ನೂ ಓದಿ:ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

ಜುಲೈ 13 ರ ಶನಿವಾರದಂದು ಶುಭ್ ಆಶಿರ್ವಾದ್ ಆಚರಣೆಗಳು ನಡೆಯಲಿದ್ದು, ಅಂತಿಮ ಕಾರ್ಯಕ್ರಮ, ಮಂಗಲ್ ಉತ್ಸವ್ ಅಥವಾ ವಿವಾಹ ಆರತಕ್ಷತೆಯನ್ನು ಜುಲೈ 14 ರ ಭಾನುವಾರ ನಿಗದಿಪಡಿಸಲಾಗಿದೆ. ಈ ಸಮಾರಂಭಕ್ಕಾಗಿ, ಅತಿಥಿಗಳಿಗೆ ‘ಇಂಡಿಯನ್ ಚಿಕ್’ ಧರಿಸಲು ಕೇಳಲಾಗಿದೆ. ಈ ಸಮಾರಂಭಕ್ಕೆ ಪ್ರಪಂಚದಾದ್ಯಂತದ ತಾರೆಯರು ಸೇರಿದಂತೆ ಅನೇಕ ಅತಿಥಿಗಳನ್ನು ಮದುವೆ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಉದ್ಯಮಿಗಳು, ರಾಷ್ಟ್ರಗಳ ಮುಖ್ಯಸ್ಥರು ಮತ್ತು ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಈ ಸಮಾರಂಭಕ್ಕೆ ಹಾಜರಾಗುವುದರಿಂದ ಇದು ನೆನಪಿನಲ್ಲಿ ಚಿರಕಾಲ ಉಳಿಯುವಂತಹ ಕಾರ್ಯಕ್ರಮವಾಗಲಿದೆ ಎನ್ನಲಾಗಿದೆ.

Exit mobile version