Site icon Vistara News

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Apple With sticker

ಬೆಂಗಳೂರು : ಮಾರುಕಟ್ಟೆಯಲ್ಲಿ ಸೇಬುಹಣ್ಣುಗಳು ಹಲವು ವಿಧಗಳಲ್ಲಿ ಕಂಡುಬರುತ್ತದೆ. ಕೆಲವು ಸೇಬುಗಳು ಹಸಿರು ಬಣ್ಣದಲ್ಲಿರುತ್ತದೆ. ಕೆಲವು ಸೇಬುಗಳು ಕೆಂಪು ಬಣ್ಣದಲ್ಲಿರುತ್ತದೆ. ಹಾಗೇ ಕೆಲವು ಸೇಬು ಹಣ್ಣಿನ (Apple With sticker) ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿರುತ್ತಾರೆ. ಅದಕ್ಕೆ ಬೆಲೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಕೆಲವರು ಅದು ಉತ್ತಮವಾಗಿರುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನೇ ಕಂಡುಕೊಳ್ಳುತ್ತಾರೆ. ಆದರೆ ಕೆಲವರು ಅದು ಹಾಳಾದ ಕಾರಣ ಆ ಭಾಗವನ್ನು ಸ್ಟಿಕರ್ ನಿಂದ ಮುಚ್ಚಿದ್ದಾರೆ ಎಂದು ಭಾವಿಸುತ್ತಾರೆ. ಸೇಬಿನ ಮೇಲೆ ಸ್ಟಿಕ್ಕರ್ ಯಾಕೆ ಅಂಟಿಸುತ್ತಾರೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

ಸ್ಟಿಕ್ಕರ್ ಇರುವ ಸೇಬು ಒಳ್ಳೆಯ ಗುಣಮಟ್ಟದಾಗಿರುತ್ತದೆ ಮತ್ತು ಅದಕ್ಕೆ ಬೆಲೆ ಕೂಡ ಹೆಚ್ಚು ಎಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಆದರೆ ವಾಸ್ತವಾಗಿ ಕೆಟ್ಟ ಭಾಗವನ್ನು ಮುಚ್ಚಲು ಅಥವಾ ಕೊಳೆತ ಭಾಗವನ್ನು ಮರೆಮಾಚಲು ಸ್ಟಿಕ್ಕರ್ ಅನ್ನು ಅಂಟಿಸಿರುವುದಿಲ್ಲ.

ತಜ್ಞರು ತಿಳಿಸಿದ ಪ್ರಕಾರ, ಸೇಬು ಮಾತ್ರವಲ್ಲ ಕಿತ್ತಳೆ ಹಣ್ಣುಗಳನ್ನು ಸಹ ಸ್ಟಿಕ್ಕರ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಸ್ಟಿಕ್ಕರ್ ನೋಡಿದವರು ಅದು ದುಬಾರಿ ಎಂದು ಭಾವಿಸುತ್ತಾರೆ. ಆದರೆ ಸ್ಟಿಕ್ಕರ್ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆಯಂತೆ. ಹಾಗಾಗಿ ನೀವು ಸೇಬು ಖರೀದಿಸುವಾಗ ಅದರ ಮೇಲಿರುವ ಸ್ಟಿಕ್ಕರ್ ಅನ್ನು ಓದಿ.

ಸೇಬಿನ ಮೇಲಿನ ಸ್ಟಿಕ್ಕರ್‌ನಲ್ಲಿ ಸೇಬಿನ ಗುಣಮಟ್ಟ ಹಾಗೂ ಅದನ್ನು ಹೇಗೆ ಬೆಳೆಸಲಾಗಿದೆ ಎಂಬುದರ ಕುರಿತು ಮಾಹಿತಿ ಇದೆಯಂತೆ. ಕೆಲವು ಸ್ಟಿಕ್ಕರ್ ಗಳ ಮೇಲೆ ನಾಲ್ಕು ಸಂಖ್ಯೆಯ ನಂಬರ್ ಇರುತ್ತದೆ. ಅಂದರೆ ಅವು 4026 ಅಥವಾ 4987 ನಂತಹ ಸಂಖ್ಯೆ ಇರುತ್ತದೆ. ಇದು ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆಯಂತೆ. ಈ ಹಣ್ಣುಗಳ ಮೇಲೆ ಕೀಟನಾಶಕವನ್ನು ಹೆಚ್ಚಾಗಿ ಬಳಸಿರುತ್ತಾರಂತೆ. ಈ ಹಣ್ಣು ಅಗ್ಗವಾಗಿರುತ್ತದೆ.

ಕೆಲವು ಹಣ್ಣುಗಳ ಮೇಲೆ ಐದು ಅಂಕಿಯ ಸಂಖ್ಯೆಯನ್ನು ಬರೆಯಲಾಗುತ್ತದೆ. ಅಂದರೆ 84131 ಅಥವಾ 86532 ಹೀಗೆ 8ರಿಂದ ಪ್ರಾರಂಭವಾಗುವ ನಂಬರ್ ಇರುತ್ತದೆ. ಈ ಹಣ್ಣುಗಳು ನೈಸರ್ಗಿಕವಲ್ಲ. ಇವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಿದ್ದು, ಇದು ತುಂಬಾ ದುಬಾರಿಯಾಗಿರುತ್ತದೆ.

ಕೆಲವು ಹಣ್ಣುಗಳಲ್ಲಿ 9ರಿಂದ ಪ್ರಾರಂಭವಾಗುವ ಐದು ಅಂಕಿಯ ನಂಬರ್ ಇರುತ್ತದೆ. ಅದು 93435 ಇರುತ್ತದೆ. ಈ ಹಣ್ಣು ಸಾವಯವವಾಗಿ ಬೆಳೆದಿರುತ್ತದೆ. ಇದಕ್ಕೆ ಕೀಟನಾಶಕ ಮತ್ತು ರಾಸಾಯನಿಕ ಬಳಸಿಲ್ಲ ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ಬೆಲೆ ಜಾಸ್ತಿಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

ಹೀಗೆ ಒಂದೊಂದು ಸ್ಟಿಕ್ಕರ್‌ಗೂ ಬೇರೆ ಬೇರೆ ಅರ್ಥವಿದ್ದರೂ ಕೂಡ ಕೆಲವೊಮ್ಮೆ ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಾರೆ. ಹಾಗಾಗಿ ಯಾವುದೇ ಹಣ್ಣುಗಳನ್ನು ಖರೀದಿಸುವಾಗ ತುಂಬಾ ಜಾಗರೂಕರಾಗಿರಿ.

Exit mobile version