Site icon Vistara News

Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

Bakrid

ಬೆಂಗಳೂರು : ಬಕ್ರೀದ್‌ ಮುಸ್ಲಿಂ ಭಾಂದವರು ಆಚರಿಸುವ ಹಬ್ಬ. ಬಕ್ರೀದ್‌ (Bakrid) ಹಬ್ಬದಂದು ಮೇಕೆಗಳನ್ನು ಬಲಿಕೊಡುವುದು ಅವರ ಸಂಪ್ರದಾಯ. ಇನ್ನು ವಿಶೇಷವೆಂದರೆ ಈ ಬಕ್ರೀದ್‌ ಹಬ್ಬದಂದು ಬಲಿದಾನದ ಫಲ ಸಿಗಬೇಕೆಂದರೆ ಮೇಕೆಯನ್ನು ಅವರ ಸ್ವಂತ ಹಣದಿಂದ ಖರೀದಿಸಬೇಕಂತೆ. ಈ ರೀತಿ ಮಾಡುವುದರಿಂದ ಅವರಿಗೆ ಬಲಿದಾನದ ಸಂಪೂರ್ಣ ಫಲ ಸಿಗುತ್ತದೆ ಎನ್ನುವುದು ಅವರ ನಂಬಿಕೆ. ಹಾಗಾಗಿ ಮುಸ್ಲಿಂರು ಮೇಕೆಗಳನ್ನು ಕಷ್ಟಪಟ್ಟು ದುಡಿದ ಹಣದಿಂದ ಖರೀದಿಸುತ್ತಾರಂತೆ. ಆದರೆ ಬಕ್ರೀದ್ ದಿನ ಮೇಕೆಗಳ ಬೆಲೆ ಮಾತ್ರ ಗಗನಕ್ಕೇರಿರುತ್ತದೆ.

ಇನ್ನು ಈ ಸಂದರ್ಭದಲ್ಲಿ ಲಕ್ಷಾಂತರ ಬೆಲೆಗೆ ಮೇಕೆಗಳು ಮಾರಾಟವಾಗುತ್ತವೆ. ಒಂದೊಂದು ಮೇಕೆಗೂ ಒಂದೊಂದು ಬೆಲೆ ಇರುತ್ತದೆ. ಆದರೆ ಈ ಮೇಕೆಗಳಲ್ಲಿ ಒಂದು ಬಹಳ ದುಬಾರಿ ಮೇಕೆ ಇದೆ. ಅದರ ಬಗ್ಗೆ ತಿಳಿದುಕೊಳ್ಳಿ.
ಬ್ರಾಡ್ ಎಂಬ ಹೆಸರಿನ ಮೇಕೆ ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಹಾಗಾಗಿ ಅದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.. ವರ್ಲ್ಡ್ ರೆಕಾರ್ಡ್ಸ್ ನ ಪ್ರಕಾರ, ಈ ಮೇಕೆಯ ಬೆಲೆ 82,600 ಯುಎಸ್ ಡಿ ಆಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಇದರ ಬೆಲೆ ಅಂದಾಜು 69 ಲಕ್ಷ ರೂ.ಗಳಾಗಿವೆ. ಇಂತಹ ಅತ್ಯಂತ ದುಬಾರಿ ಬೆಲೆಯ ಮೇಲೆ ಬ್ರಿಟನ್ ನಲ್ಲಿ ಹೆಚ್ಚು ಮಾರಾಟವಾಗುತ್ತದೆಯಂತೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಈ ಬೆಲೆ ನಿಗದಿಯಾಗಿಲ್ಲ ಬಹಳ ಹಿಂದೆ ಅಂದರೆ 1985ರಲ್ಲಿಯೇ ಈ ಮೇಕೆಗೆ ದುಬಾರಿ ಬೆಲೆ ನೀಡಲಾಗುತ್ತಿತ್ತಂತೆ.

ಅಂಗೋರಾ ಮೇಕೆಯ ವಿಶೇಷತೆಗಳು:

ಬಿಳಿ ಬಣ್ಣದ ಕೂದಲನ್ನು ಹೊಂದಿರುವ ಈ ಅಂಗೋರಾ ಮೇಕೆಗಳು ವಿಶ್ವದ ಅತ್ಯುತ್ತಮ ಮೇಕೆ ತಳಿಗಳಲ್ಲಿ ಒಂದಾಗಿದೆ. ಈ ಮೇಕೆಗಳನ್ನು ಉಣ್ಣೆಗಳಿಗಾಗಿ ಹೆಚ್ಚಿನ ಜನರು ಸಾಕುತ್ತಾರೆ. ಇದರಿಂದ ದೊರೆಯುವ ಉಣ್ಣೆಗಳಿಗೆ ಮೊಹೇರ್ ಎಂದು ಕರೆಯುತ್ತಾರೆ. ಇದರ ಉಣ್ಣೆ ಉತ್ತಮ ಗುಣಮಟ್ಟದಾಗಿರುತ್ತದೆ. ಹಾಗಾಗಿ ಈ ಮೇಕೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಬಕ್ರೀದ್ ಸಮಯದಲ್ಲಿ ಅನೇಕ ಜನರು ಹಣಕ್ಕಾಗಿ ಅವುಗಳನ್ನು ಮಾರಾಟ ಮಾಡುತ್ತಾರೆ.
ಮೇಕೆಗಳು ಅವುಗಳ ತಳಿಗಳ ಆಧಾರದ ಮೇಲೆ ವಿಶೇಷತೆಯನ್ನು ಹೊಂದಿರುತ್ತವೆ. ಮೇಕೆಗಳಲ್ಲಿ ಕೆಲವು ಕಪ್ಪು, ಬಿಳಿ ಬಣ್ಣದಲ್ಲಿದ್ದರೆ ಕೆಲವು ತಳಿಗಳ ಮೇಕೆಗಳ ಮೈಮೇಲೆ ವಿಶಿಷ್ಟವಾದ ಗುರುತುಗಳಿರುತ್ತದೆ. ಹಾಗಾಗಿ ಅವುಗಳನ್ನು ವಿಶೇಷವಾದವು ಎನ್ನಲಾಗುತ್ತದೆ.

ಇದನ್ನೂ ಓದಿ:ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

ಇದೇ ರೀತಿ 2023ರಲ್ಲಿ ಮೈಮೇಲೆ ವಿಶಿಷ್ಟ ಗುರುತುಗಳನ್ನು ಹೊಂದಿರುವ ಮೇಕೆಯೊಂದು ಬಹಳ ಪ್ರಸಿದ್ಧವಾಗಿತ್ತು. ಅದು ಮೈಮೇಲೆ ವಿಶಿಷ್ಟ ಗುರುತುಗಳನ್ನು ಹೊಂದಿರುವ ಕಾರಣ ಅದರ ಮಾಲೀಕ 1 ಕೋಟಿ 12 ಲಕ್ಷದ 786 ರೂ. ಎಂಬುದಾಗಿ ತಿಳಿಸಿದ್ದ. ಈ ಮೇಕೆಯ ಹೆಸರು ಶೇರು. ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಮೇಕೆ ಮಾಲೀಕನೊಬ್ಬನ ಬಳಿ ಇದು ಇತ್ತು. ಇದರ ದೇಹದ ಮೇಲೆ ಇದ್ದ ಗುರುತುಗಳನ್ನು ಹತ್ತಿರದಿಂದ ನೋಡಿದರೆ ಅದು “ ಅಲ್ಲಾ” ಮತ್ತು “ಮೊಹಮ್ಮದ್” ಎಂದು ಉರ್ದುವಿನಲ್ಲಿ ಬರೆದಿರುವುದನ್ನು ಕಾಣಬಹುದು. ಆದರೆ ಈ ಮೇಕೆ ಮಾರಾಟವಾಗುವ ಮುನ್ನವೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Exit mobile version