ಭುವನೇಶ್ವರ ಇದು ಒಡಿಶಾ ರಾಜ್ಯದ ರಾಜಧಾನಿಯಾಗಿದೆ. ಮಹಾನದಿ ಮುಖಜಭೂಮಿಯ ಉದ್ದಕ್ಕೂ ನೆಲೆಸಿರುವ ಭುವನೇಶ್ವರ ಪುರಾತನ ದೇವಾಲಯಗಳ ನಗರವಾಗಿದೆ. ಇದು ಕಳಿಂಗ ರಾಜವಂಶದ ಕುಶಲತೆಯಿಂದ ಪ್ರೇರಿತವಾದ ಸಂಕೀರ್ಣವಾದ ಕಲಾತ್ಮಕ ಪಾಂಡಿತ್ಯವನ್ನು ಚಿತ್ರಿಸುವ ಭವ್ಯವಾದ ಕಲ್ಲಿನ ದೇವಾಲಯಗಳನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವವರು ಒಮ್ಮೆ ಈ ಸ್ಥಳದ ಬಗೆಗಿನ ವಿವರಗಳನ್ನು ತಿಳಿದುಕೊಳ್ಳಿ. ಇಲ್ಲಿನ ಹವಾಮಾನದ ವಿವರ, ದೇವಾಲಯಗಳು, ಪಾಕವಿಧಾನಗಳ ಬಗ್ಗೆ ತಿಳಿದುಕೊಂಡು ಈ ಸ್ಥಳಕ್ಕೆ ಭೇಟಿ ನೀಡಿದರೆ ಉತ್ತಮ. ಇದರಿಂದ ನಿಮ್ಮ ಪ್ರವಾಸ ಆರಾಮದಾಯಕವಾಗಿರುತ್ತದೆ.
ಭುವನೇಶ್ವರದ ಹವಾಮಾನದ ವಿವರ
ಈ ಸ್ಥಳ ಆರ್ದ್ರ ಉಪೋಷ್ಣವಲಯದ ಹವಾಮಾನ ವಲಯದ ಅಡಿಯಲ್ಲಿ ಬರುತ್ತದೆ. ಇದು ಬಿಸಿ ಆರ್ದ್ರ ಬೇಸಿಗೆ, ಮಧ್ಯಮ ಮಳೆ ಹಾಗೂ ಹದವಾದ ಚಳಿಯನ್ನು ಹೊಂದಿರುವ ಪ್ರದೇಶವಾಗಿದೆ. ಬೇಸಿಗೆ(ಏಪ್ರಿಲ್- ಜೂನ್ )ಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲ(ಜುಲೈ-ಸೆಪ್ಟೆಂಬರ್)ದಲ್ಲಿ ಧಾರಾಕಾರ ಮಳೆಯಾಗುತ್ತದೆ. ಬಿಸಿಲಿನ ಬೇಗೆಯಿಂದ ಸುಟ್ಟ ಮರಗಳು ಮಳೆಗಾಲದಲ್ಲಿ ಚಿಗುರಿ ಹಸಿರಾಗುತ್ತವೆ. ಚಳಿಗಾಲ(ನವೆಂಬರ್- ಫೆಬ್ರವರಿ)ದಲ್ಲಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ. ಡಿಸೆಂಬರ್,ಜನವರಿಯಲ್ಲಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಕ್ಕೆ ಇಳಿಯುತ್ತದೆ. ಹಾಗಾಗಿ ಭುವನೇಶ್ವರಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ಅತ್ಯುತ್ತಮ ಸಮಯವಾಗಿದೆ.
ಭುವನೇಶ್ವರದ ಪ್ರಮುಖ ದೇವಾಲಯಗಳು
ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ಭುವನೇಶ್ವರದಲ್ಲಿ ರಾಜವಂಶಸ್ಥರು ನಿರ್ಮಿಸಿದ ಹಲವು ದೇವಾಲಯಗಳನ್ನು ನೋಡಬಹುದು. ಲಿಂಗರಾಜ ದೇವಾಲಯ, ರಾಜರಾಣಿ ದೇವಾಲಯ, ಮುಕ್ತೇಶ್ವರ ದೇವಾಲಯ, ಅನಂತ ವಾಸುದೇವ ದೇವಾಲಯಗಳಲ್ಲಿ ಸಂಕೀರ್ಣವಾದ ಕೆತ್ತನೆಗಳನ್ನು ನೋಡಬಹುದು.
ಬಾಯಿಯಲ್ಲಿ ನೀರುಣಿಸುವ ಪಾಕವಿಧಾನ
ಇಲ್ಲಿನ ಆಹಾರವು ನದಿ ಅಥವಾ ಸರೋವರದ ಸಿಹಿ ನೀರಿನ ಪದಾರ್ಥಗಳೊಂದಿಗೆ ಗಿಡಮೂಲಿಕೆಗಳು ಅಥವಾ ಕಾಡುಗಳ ಮಧ್ಯೆ ಬೆಳೆದ ಖಾದ್ಯ ಹೂಗಳನ್ನು ಒಳಗೊಂಡಿದೆ. ಇಲ್ಲಿನ ಒಂದೊಂದು ಅಡುಗೆಗಳು ವಿಭಿನ್ನ ರುಚಿಯನ್ನು ಹೊಂದಿದೆ. ಇಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳು ಹೀಗಿವೆ:
- ಪಾಖಾಲಾ ಭಾತ್ – ಅನ್ನದ ಜೊತೆಗೆ ಪ್ಯಾನ್ ಫ್ರೈಡ್ ತರಕಾರಿಗಳು ಮತ್ತು ಮೊಸರನ್ನು ನೀಡಲಾಗುತ್ತದೆ.
- ದಹಿ ಬೈಗಾನಾ – ಮೊಸರು ಮತ್ತು ಮಸಾಲೆ ಗ್ರೇವಿಯಲ್ಲಿ ಬೇಯಿಸಿದ ಬದನೆಕಾಯಿಯ ಖಾದ್ಯ ಇದಾಗಿದೆ
- ಆಲೂ ಪೊಟಾಲ ರಸ – ಹುಣಸೆಹಣ್ಣು ಮತ್ತು ಬೆಲ್ಲದ ರುಚಿಯ ಗ್ರೇವಿಯಲ್ಲಿ ಆಲೂಗಡ್ಡೆಯನ್ನು ಮಸಾಲೆಯೊಂದಿಗೆ ಬೆರೆಸಿದ ಕರಿಯಾಗಿದೆ.
ಸಿಹಿ ಪದಾರ್ಥಗಳು:
- ಪಿತಾ – ಬೆಲ್ಲ, ರವೆ ಮತ್ತು ಒಣ ಹಣ್ಣುಗಳಿಂದ ತುಂಬಿದ ಮೃದುವಾದ ಅಕ್ಕಿಯ ಕೇಕ್ ಗಳಾಗಿವೆ.
- ಚೆನಾ ಪೋಡಾ – ನಯಾಗರ್ ಪ್ರದೇಶದ ಬೇಯಿಸಿದ ಚೀಸ್ ನ ಸಿಹಿತಿಂಡಿ ಇದಾಗಿದೆ.
- ರಸಬಲಿ – ಸುವಾಸನೆಯಿಂದ ಕೂಡಿದ ಸಿಹಿಯಾದ ಕೇಸರಿ ಸಿಹಿ ಸಿರಪ್ ಗೆ ಹಾಲು ಮತ್ತು ಚೀಸ್ ನ ಉಂಡೆಗಳನ್ನು ಸೇರಿಸಿ ಮಾಡುವ ಖಾದ್ಯ
ಇದನ್ನೂ ಓದಿ: Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!
ಈ ಎಲ್ಲಾ ಮಾಹಿತಿಗಳ ಮೂಲಕ ನೀವು ಭುವನೇಶ್ವರಕ್ಕೆ ಭೇಟಿ ನೀಡಿದರೆ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆರಾಮವಾಗಿ ನಿಮ್ಮ ಪ್ರವಾಸವನ್ನು ಮುಗಿಸಬಹುದು.