Site icon Vistara News

Bribe Case: 1 ಸಾವಿರ ರೂ. ಲಂಚ ಪ್ರಕರಣ 25 ವರ್ಷಗಳ ಬಳಿಕ ಇತ್ಯರ್ಥ! ಹಿಂಗಾಂದ್ರೆ ಹೆಂಗೆ ಅಂತಿದ್ದಾರೆ ಜನ!

Bribe Case


ನ್ಯಾಯಾಲಗಳಲ್ಲಿ ಎಷ್ಟೋ ಕೇಸ್‌ಗಳು ವಿಚಾರಣೆಯಾಗದೆ ಹಾಗೇ ಉಳಿದಿವೆ. ಹಾಗಾಗಿ ಪ್ರಕರಣ ದಾಖಲಿಸಿದವರು, ಆರೋಪಿಗಳು ಆಗಾಗ ಕೋರ್ಟ್‍ಗೆ ಹೋಗಿ ಬರುತ್ತಿರುತ್ತಾರೆ. ಅಂತಹದೊಂದು ಹಳೆಯ ಕೇಸ್ ಈಗ ವಿಚಾರಣೆಯಾಗಿದೆ, 25 ವರ್ಷಗಳ ಹಳೆಯ ಕೇಸ್ ಅನ್ನು ಕೈಗೆತ್ತಿಕೊಂಡ ಛತ್ತೀಸ್‍ಗಢ ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿ ಆರೋಪಿಯನ್ನು ಕೇಸಿನಿಂದ ಖುಲಾಸೆಗೊಳಿಸಿದೆ. ಮನೇಂದ್ರಗಢದಲ್ಲಿ ನೀರಾವರಿ ಉದ್ದೇಶಗಳಿಗಾಗಿ ಜೀವನ್ ಧಾರಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಮೌಲ್ಯಮಾಪನಕ್ಕಾಗಿ 1,000 ರೂ.ಗಳನ್ನು ಲಂಚ (Bribe Case)ವಾಗಿ ಸ್ವೀಕರಿಸಿದ್ದಕ್ಕಾಗಿ ತಪ್ಪಾಗಿ ಶಿಕ್ಷೆಗೊಳಗಾದ ಸಬ್ ಎಂಜಿನಿಯರ್ ಒಬ್ಬರನ್ನು ಛತ್ತೀಸ್‍ಗಢ ಹೈಕೋರ್ಟ್ 25 ವರ್ಷಗಳ ಹಳೆಯ ಪ್ರಕರಣದಿಂದ ಖುಲಾಸೆಗೊಳಿಸಿದೆ ಎಂಬುದಾಗಿ ತಿಳಿದುಬಂದಿದೆ.

ಮನೇಂದ್ರಗಢದಲ್ಲಿ ನೀರಾವರಿ ಉದ್ದೇಶಗಳಿಗಾಗಿ ಜೀವನ್ ಧಾರಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಮೂರನೇ ಮತ್ತು ಅಂತಿಮ ಕಂತನ್ನು ಬಿಡುಗಡೆ ಮಾಡಲು ಅಧಿಕಾರಿ 1,000 ರೂ.ಗಳ ಲಂಚದ ಮೊತ್ತವನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಿ ಪ್ರೇಮ್ ಮಿಶ್ರಾ ಎಂಬವರು ಬಿಲಾಸ್ಪುರದ ಲೋಕಾಯುಕ್ತ ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ಇದರಿಂದ ಸಹಾಯಕ ಎಂಜಿನಿಯರ್ ಆಗಿರುವ ಆರ್.ಪಿ.ಕಶ್ಯಪ್ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದರು. ಜನಪದ್ ಪಂಚಾಯತ್ ಮನೇಂದ್ರಗಢ ಸಬ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದ ಕಶ್ಯಪ್ ಅವರ ನಿವಾಸದಲ್ಲಿ ಮಿಶ್ರಾ ಅವರು ಕರೆನ್ಸಿ ನೋಟುಗಳನ್ನು ನೀಡಿದ ನಂತರ, ಪೊಲೀಸರ ತಂಡ ಬಲೆ ಬೀಸಿ ಹಣವನ್ನು ವಶಪಡಿಸಿಕೊಂಡು ಕಶ್ಯಪ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ನಂತರ ಅಂಬಿಕಾಪುರದ ವಿಚಾರಣಾ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತು ಮತ್ತು ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 3,000 ರೂ. ದಂಡ ವಿಧಿಸಿತು. ಇದಾದ ನಂತರ ಜಾಮೀನಿನ ಮೇಲೆ ಹೊರಗಿರುವ ಕಶ್ಯಪ್ ಈ ಪ್ರಕರಣದ ಬಗ್ಗೆ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿದ್ದರು.

ಇದನ್ನೂ ಓದಿ:  115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

ಇಲ್ಲಿ ವಿಚಾರಣೆ ನಡೆಸಿ ಮನೇಂದ್ರಗಢದ ಅದೇ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್, ಸಿಮೆಂಟ್ ಅಂಗಡಿಯ ಮಾಲೀಕ ಅಲ್ಲಾವುದ್ದೀನ್, ಟ್ರ್ಯಾಕ್ಟರ್-ಟ್ರಾಲಿ ಮಾಲೀಕ ಧನಿರಾಮ್ ಅವರ ಹೇಳಿಕೆಗಳನ್ನು ವಿಚಾರಣೆಯ ಸಮಯದಲ್ಲಿ ಗಣನೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕೆ ಜೈಸ್ವಾಲ್ ಅವರು ಕಶ್ಯಪ್ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಿದರು, ಏಕೆಂದರೆ ಲಂಚದ ಬೇಡಿಕೆ ಎಂದು ಸ್ವೀಕರಿಸಲಾದ ಹಣವು ಯಾವುದೇ ರೀತಿಯಲ್ಲಿ ಸಾಬೀತಾಗದ ಕಾರಣ ದಾಖಲೆಯಲ್ಲಿರುವ ಪುರಾವೆಗಳು ಮೇಲ್ಮನವಿದಾರನನ್ನು ತಪ್ಪಿತಸ್ಥರೆಂದು ಪರಿಗಣಿಸದ ಕಾರಣ ನ್ಯಾಯಾಲಯ ಈ ಪ್ರಕರಣದಿಂದ ಕಶ್ಯಪ್ ಅವರನ್ನು ಖುಲಾಸೆಗೊಳಿಸಿದೆ. ಒಂದು ಪ್ರಕರಣ ಇತ್ಯರ್ಥವಾಗಲು 25 ವರ್ಷಗಳು ಬೇಕೆ ಎಂದು ಜನ ಚರ್ಚಿಸುವಂತಾಗಿದೆ! ನ್ಯಾಯದಾನ ಇಷ್ಟು ನಿಧಾನವಾದರೆ ಭ್ರಷ್ಟಾಚಾರ ಪ್ರಕರಣ ಕಡಿಮೆ ಆಗುವುದಾದರೂ ಹೇಗೆ ಎಂದು ಜನ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

Exit mobile version