ಪಟಿಯಾಲಾ: ಹುಟ್ಟು ಹಬ್ಬದಂದು (birthday) ಬೇಕರಿಯೊಂದರಿಂದ ಆನ್‌ಲೈನ್ (online) ಮೂಲಕ ತರಿಸಲಾಗಿದ್ದ ಕೇಕ್ (Cake Tragedy) ತಿಂದು ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ (death) ಪ್ರಕರಣಕ್ಕೆ ಸಂಬಂಧಿಸಿ ನಡೆದ ತನಿಖೆಯಲ್ಲಿ ಕೇಕ್ ನಲ್ಲಿ ಹೆಚ್ಚಿನ ಸಾಂದ್ರತೆಯ ಕೃತಕ ಸಿಹಿಕಾರಕ ಬೆರೆಸಲಾಗಿತ್ತು; ಸಾವಿಗೆ ಇದೇ ಕಾರಣ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪಂಜಾಬ್‌ನ (punjab) ಪಟಿಯಾಲಾದಲ್ಲಿ (patiyala) ಮಾರ್ಚ್ 24ರಂದು ಈ ಘಟನೆ ನಡೆದಿತ್ತು. ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಬಾಲಕಿ ಮಾನ್ವಿಯ ಸಾವಿನ ತನಿಖೆಗೆ ಆದೇಶಿಸಿದ್ದರು.
ಮಾನ್ವಿಯ ಹುಟ್ಟುಹಬ್ಬದಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಚಾಕೊಲೇಟ್ ಕೇಕ್ ಅನ್ನು ತರಿಸಲಾಗಿತ್ತು. ಇದನ್ನು ತಿಂದು ಇಡೀ ಕುಟುಂಬ ಅಸ್ವಸ್ಥಗೊಂಡಿತ್ತು.
ಇದನ್ನೂ ಓದಿ: Belagavi News: ಬಿಲ್ ಮಂಜೂರಾತಿ ವಿಚಾರ ಗ್ರಾಪಂ ಅಧ್ಯಕ್ಷ-ಸದಸ್ಯರ ಮಧ್ಯೆ ಮಾರಾಮಾರಿ; ಸಿಸಿ ಕ್ಯಾಮೆರಾದಲ್ಲಿ ಸೆರೆ
ಕೃತಕ ಸಿಹಿ
ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, ವರದಿಯಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಸಿಹಿ ರುಚಿಯ ಸಿಂಥೆಟಿಕ್ ಸಂಯುಕ್ತವನ್ನು ಬಳಸಲಾಗಿದೆ ಎಂದು ಕಂಡು ಹಿಡಿಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ. ವಿಜಯ್ ಜಿಂದಾಲ್ ತಿಳಿಸಿದ್ದಾರೆ.
ಸಣ್ಣ ಪ್ರಮಾಣದ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗಿದ್ದರೂ ಹೆಚ್ಚಿನ ಮಟ್ಟಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ಬೇಕರಿ ವಿರುದ್ಧ ಕ್ರಮ
ಶೀಘ್ರದಲ್ಲೇ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಾಗಿತ್ತು?
10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿತ್ತು. ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದರು. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಮಾನ್ವಿ ಸ್ವಲ್ಪ ಹೆಚ್ಚಾಗಿಯೇ ಕೇಕ್ ತಿಂದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬಾಲಕಿ ಮೃತಪಟ್ಟಿದ್ದಳು.
ಬಾಲಕಿಯ ಸಾವಿನ ಕುರಿತು ತನಿಖೆಗೆ ಮುಂದಾದ ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯದಿಂದ ಕೇಕ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಮಾನ್ವಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ವೀಡಿಯೊದಲ್ಲಿ ಮಾನ್ವಿ ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಳು.
ಅವಳು ಕೇಕ್ ಕತ್ತರಿಸಿ ಎಲ್ಲರೂ ತಿಂದ ಕೆಲವೇ ಗಂಟೆಗಳ ಅನಂತರ ಅವಳ ಕಿರಿಯ ಸಹೋದರಿ ಸೇರಿದಂತೆ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು. ಹುಡುಗಿಯರು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಮಾನ್ವಿ ಅವರ ಬಾಯಿಯಲ್ಲಿ ಶುಷ್ಕತೆ ಉಂಟಾಗಿತ್ತು ಎಂದು ಆಕೆಯ ಅಜ್ಜ ಹೇಳಿದರು.
ಆಕೆ ನಿತ್ರಾಣಗೊಂಡಾಗ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಮ್ಲಜನಕವನ್ನು ಹಾಕಲಾಯಿತು ಆದರೆ ಯಾವುದಕ್ಕೂ ಸ್ಪಂದಿಸದೆ ಅವಳು ಮೃತಪಟ್ಟಿದ್ದಳು. ‘ಕೇಕ್ ಕನ್ಹಾ’ನಿಂದ ಆರ್ಡರ್ ಮಾಡಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಮಾನ್ವಿಯ ಕುಟುಂಬಸ್ಥರು ಆರೋಪಿಸಿದ್ದಾರೆ.