ಚಿಕ್ಕ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಮಕ್ಕಳನ್ನು ನೋಡಿಕೊಳ್ಳುವಾಗ ಅಪ್ಪಿತಪ್ಪಿ ನಿಮ್ಮ ಗಮನ ಬೇರೆ ಕಡೆ ಹೋದರೆ ನಿಮ್ಮ ಮಕ್ಕಳು ಅಪಾಯಕ್ಕೆ ಒಳಗಾಗಬಹುದು. ಅಂತಹದೊಂದು ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. 10 ತಿಂಗಳ ಮಗು ತನ್ನ ತಾಯಿಯ ಕೂದಲಿಗೆ ಹಾಕುವ ಕ್ಲಿಪ್ ಅನ್ನು ನುಂಗಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಮಗು (Child Rescued) ಪ್ರಾಣಾಪಾಯದಿಂದ ಪಾರಾಗಿದೆ.
ವರದಿಗಳ ಪ್ರಕಾರ, ತಾಯಿ ನಿದ್ರೆಗೆ ಜಾರಿದ ತಕ್ಷಣ, ಹತ್ತಿರದಲ್ಲಿ ಆಟವಾಡುತ್ತಿದ್ದ 10 ತಿಂಗಳ ಮಗು ತಾಯಿಯು ಕೂದಲಿಗೆ ಹಾಕಿಕೊಂಡಿದ್ದ ಕ್ಲಿಪ್ ಅನ್ನು ನುಂಗಿದೆ. ಮಗು ಕ್ಲಿಪ್ ನುಂಗಿದ ತಕ್ಷಣ, ಮಗುವಿನ ಸ್ಥಿತಿ ಗಂಭೀರವಾಗಿದೆ. ಆಗ ಪೋಷಕರು ಮಗುವನ್ನು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ದರು. ಆದರೆ ಮಗುವಿಗೆ ಉಸಿರಾಟದ ತೊಂದರೆಯಾಗುತ್ತಿದ್ದ ಕಾರಣ ವೈದ್ಯರು ಚಿಕಿತ್ಸೆ ನೀಡದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ. ಕೊನೆಗೆ, ಪೋಷಕರು ಮಗುವನ್ನು ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯ ವೈದ್ಯರು ಘಟನೆಯ ಬಗ್ಗೆ ಮಾಹಿತಿ ಪಡೆದು ತಕ್ಷಣ ತಂಡವನ್ನು ರಚಿಸಿ ಮಗುವಿಗೆ ಚಿಕಿತ್ಸೆ ನೀಡಿ ಸುಮಾರು 3 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಹೊಟ್ಟೆಯಿಂದ ಕ್ಲಿಪ್ ಅನ್ನು ತೆಗೆದುಹಾಕಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ, ಪೂರ್ಣಿಯಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ಮಗುವಿನ ಪೋಷಕರಿಗೆ ಆಟವಾಡಲು ಸಣ್ಣ ಆಟಿಕೆಗಳನ್ನು ನೀಡಬಾರದು ಎಂದು ಮನವಿ ಮಾಡಿದೆ. ಹಲ್ಲುಗಳು ಬರಲು ಹೊರಟಾಗ, ಮಗುವು ಯಾವಾಗಲೂ ತನ್ನ ಬಾಯಿಯಲ್ಲಿ ಏನನ್ನಾದರೂ ಜಗಿಯಲು ಇಷ್ಟಪಡುತ್ತದೆ. ಮಗುವಿಗೆ ಸಣ್ಣ ಆಟಿಕೆಗಳನ್ನು ನೀಡಿದರೆ, ಅವುಗಳನ್ನು ನುಂಗಬಹುದು. ಪಿನ್‌ಗಳು, ಕ್ಲಿಪ್‌ಗಳು, ಚೂಪಾದ ವಸ್ತುಗಳು, ಕೀಟನಾಶಕಗಳು, ವಿಷಕಾರಿ ಮತ್ತು ಸುಡುವ ವಸ್ತುಗಳು, ಹೇರ್ ಕ್ಲಿಪ್‌ಗಳು, ಪೆನ್ ಮತ್ತು ಸಣ್ಣ ಆಟಿಕೆಗಳನ್ನು ಚಿಕ್ಕ ಮಕ್ಕಳಿಂದ ದೂರವಿಡಬೇಕು. ಇದರೊಂದಿಗೆ, ಪೋಷಕರು ಸಣ್ಣ ಮಕ್ಕಳ ಮೇಲೆ ಕಣ್ಣಿಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!
ಈ ಹಿಂದೆ ಇದೇ ರೀತಿಯ ಘಟನೆ ವೈರಲ್ ಆಗಿತ್ತು. ಮಕ್ಕಳ ಸುತ್ತಲೂ ಸಣ್ಣ ವಸ್ತುಗಳನ್ನು ಇಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಪೋಷಕರನ್ನು ಎಚ್ಚರಿಸುವ ಪ್ರಯತ್ನದಲ್ಲಿ ತಾಯಿಯೊಬ್ಬಳು ತನ್ನ ಭಯಾನಕ ಕಥೆಯನ್ನು ಹಂಚಿಕೊಂಡಿದ್ದಳು. ಅಮೆಲಿಯಾ ಟಿವಿ ನೋಡುತ್ತಿದ್ದಾಗ ಅವರ ಪತಿ ಇದ್ದಕ್ಕಿದ್ದಂತೆ ತಮ್ಮ ಎರಡು ವರ್ಷದ ಮಗು ಅಳಲು ಪ್ರಯತ್ನಿಸುತ್ತಿದ್ದು, ಆದರೆ ಅವಳ ಗಂಟಲನ್ನು ಹಿಡಿದು ಒದ್ದಾಡುತ್ತಿರುವುದನ್ನು ಗಮನಿಸಿದರು, ಆದರೆ ಮಗು ಕೂಗುವಾಗ ಯಾವುದೇ ಶಬ್ದ ಹೊರಬರುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ, ಮಗು ಕೂದಲಿನ ಕ್ಲಿಪ್ ಅನ್ನು ನುಂಗಿದೆ ಎಂದು ಅವರು ಅರಿತುಕೊಂಡರು. ಇಬ್ಬರೂ ಭಯಭೀತರಾದರು, ಆದರೆ ತಂದೆ ಮಗುವಿನ ಬೆನ್ನಿನ ಹಿಂಭಾಗಕ್ಕೆ ಹೊಡೆಯುವ ಮೂಲಕ ಆ ವಸ್ತುವನ್ನು ಹೊರಗೆ ತೆಗೆದಿದ್ದಾರೆ ಎನ್ನಲಾಗಿದೆ