Site icon Vistara News

Cholera precautions: ಬೆಂಗಳೂರಿನಲ್ಲಿ ಕಾಲರಾ ಭೀತಿ; ತಕ್ಷಣ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ

Cholera precautions

ಬೆಂಗಳೂರು: ಏರುತ್ತಿರುವ ಬಿಸಿಲಿನ ನಡುವೆ ಬೆಂಗಳೂರಿನಲ್ಲಿ (bengaluru) ಇತ್ತೀಚಿಗೆ ಕಾಲರಾ ಕಾಣಿಸಿಕೊಂಡಿದ್ದು. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಕೇವಲ ವಾಂತಿ, ಭೇದಿ ಕಾಣಿಸಿಕೊಂಡರೆ ಅದು ಕಾಲರಾ ಆಗಿರುವುದಿಲ್ಲ. ಕಾಲರಾ ಸಾಂಕ್ರಾಮಿಕವೂ ಕಲುಷಿತ ನೀರು (water) ಮತ್ತು ಆಹಾರದಿಂದಲೇ (food) ಬರುತ್ತದೆ. ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಕಾಲರಾವನ್ನು (Cholera precautions) ಬಾರದಂತೆ ತಡೆಯಲು ಸ್ವಚ್ಛತೆಯನ್ನು ಪಾಲಿಸುವುದು ಸುಲಭ ಉಪಾಯ.

ಕಲುಷಿತ ನೀರಿನಿಂದ ಹರಡುವ ಈ ಕಾಯಿಲೆ ವಿಬ್ರಿಯೊ ಕಾಲರಾ ಎಂಬ ಬ್ಯಾಕ್ಟೀರಿಯಾದ ಉಂಟಾಗುತ್ತದೆ. ತೀವ್ರ ಅತಿಸಾರ, ನಿರ್ಜಲೀಕರಣವನ್ನು ಉಂಟು ಮಾಡುವ ಕಾಲರಾ ಸೋಂಕಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಅತ್ಯಗತ್ಯ. ಇಲ್ಲವಾದರೆ ಇದು ಮಾರಣಾಂತಿಕವಾಗಬಹುದು. ಸೋಂಕಿಗೆ ಒಳಗಾದವರ ಮಲದಿಂದ ಕಾಲರಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ವಾಕರಿಕೆ ಮತ್ತು ವಾಂತಿ ಇದರ ಆರಂಭಿಕ ಲಕ್ಷಣಗಳು.

ಕಾಲರಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೆಲವೊಂದು ಕ್ರಮಗಳನ್ನು ಅನುಸರಿಸಲೇಬೇಕು. ಹೀಗೆ ಮಾಡುವುದರಿಂದ ಕಾಲರಾ ಹರಡುವ ಪ್ರದೇಶಗಳಲ್ಲಿ ನಾವಿದ್ದರೂ ಕಾಲರಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ: Benefits Of Ginger: ಶುಂಠಿ ಅಡುಗೆಗೆ ಮಾತ್ರವಲ್ಲ, ಆರೋಗ್ಯಕರ ಜೀವನಕ್ಕೂ ಸಿದ್ಧೌಷಧ!

1. ಶುದ್ಧವಾದ ನೀರು ಬಳಸಿ

ಕಾಲರಾ ಸಾಂಕ್ರಾಮಿಕದಿಂದ ದೂರವಿರಲು ಕುಡಿಯಲು, ಅಡುಗೆಗೆ, ಕೈಗಳನ್ನು ತೊಳೆಯಲು… ಹೀಗೆ ಪ್ರತಿಯೊಂದು ಕೆಲಸಕ್ಕೂ ಶುದ್ಧವಾದ ನೀರನ್ನೇ ಬಳಸಿ. ಸಾಧ್ಯವಾದರೆ ಪರಿಶುದ್ಧ ನೀರಿನ ಗುರುತು ಇರುವ ಬಾಟಲಿ ನೀರನ್ನು ಬಳಸಿ. ಇಲ್ಲವಾದರೆ ಸರಿಯಾಗಿ ಕುದಿಸಿ ಆರಿಸಿದ ನೀರನ್ನು ಬಳಸಿ. ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಫಿಲ್ಟರ್ ಅಥವಾ ಕ್ಲೋರಿನೇಟೆಡ್ ಅಥವಾ ಫಿಲ್ಟರ್ ಮಾಡಿದ ನೀರನ್ನು ಉಪಯೋಗಿಸಿ.

2. ಕೈಗಳನ್ನು ಸ್ವಚ್ಛವಾಗಿರಿಸಿ

ಸಾಬೂನು ಅಥವಾ ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ. ಮುಖ್ಯವಾಗಿ ಆಹಾರ ತಯಾರಿಸುವಾಗ, ಆಹಾರ ಸೇವಿಸುವಾಗ, ಮಕ್ಕಳಿಗೆ, ವೃದ್ಧರಿಗೆ ಆಹಾರ ನೀಡುವಾಗ, ಶೌಚಾಲಯ ಬಳಸಿದ ನಂತರ, ಅತಿಸಾರದಿಂದ ಬಳಲುತ್ತಿರುವ ಆರೈಕೆ ಮಾಡುತ್ತಿರುವಾಗ ಕೈಗಳನ್ನು ಆಗಾಗ ಸ್ವಚ್ಛಗೊಳಿಸುವುದು ಉತ್ತಮ.

3. ಶೌಚಾಲಯವನ್ನೇ ಬಳಸಿ

ಮಲ, ಮೂತ್ರ ವಿಸರ್ಜನೆಗೆ ಬಯಲಿಗೆ ಹೋಗದೆ ಶೌಚಾಲಯವನ್ನೇ ಬಳಸಿ. ಮನೆಯಲ್ಲಿರುವ ಪ್ರತಿಯೊಬ್ಬರೂ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸೋಪ್ ದ್ರಾವಣದಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

4. ಬೀದಿ ಬದಿಯ ಆಹಾರ ಬೇಡ

ಮನೆಯಲ್ಲೇ ತಯಾರಿಸಿದ ಶುದ್ಧವಾಗಿರುವ ಆಹಾರವನ್ನೇ ಸೇವಿಸಿ. ಆಹಾರವನ್ನು ಚೆನ್ನಾಗಿ ಬೇಯಿಸಿ, ಮುಚ್ಚಿಡಿ, ಬಿಸಿಯಾಗಿರುವಾಗಲೇ ತಿನ್ನಿರಿ. ಸಿಪ್ಪೆ ಇರುವ ಹಣ್ಣು ಮತ್ತು ತರಕಾರಿಗಳನ್ನೇ ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿನ್ನಿ. ಸಮುದ್ರಾಹಾರವನ್ನು ಸರಿಯಾದ ಪ್ರಮಾಣದಲ್ಲಿ ಬೇಯಿಸಿ ಸೇವಿಸಿ. ಬೀದಿ ಬದಿಯ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು.

5. ಅಡುಗೆ ಸ್ಥಳ ಸ್ವಚ್ಛವಾಗಿರಲಿ

ಆಹಾರ ತಯಾರಿಸುವ ಪ್ರದೇಶ, ಅಡುಗೆ ಸಾಮಗ್ರಿಗಳನ್ನು ಸಂಸ್ಕರಿಸಿದ ನೀರಿನಿಂದ ಸ್ವಚ್ಛಗೊಳಿಸಿ. ಮರುಬಳಕೆ ಮಾಡುವ ಮೊದಲು ಸಂಪೂರ್ಣವಾಗಿ ಒಣಗಿಸಿ. ಪಾತ್ರೆಗಳ ಮೇಲೆ ಜಿರಲೆ, ಇಲಿ, ಕ್ರಿಮಿ ಕೀಟಗಳು ಹರಿದಾಡದಂತೆ ಎಚ್ಚರ ವಹಿಸಿ.

6. ನೀರಿನ ಪ್ರದೇಶ ಸ್ವಚ್ಛವಾಗಿರಲಿ

ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಕೆರೆ, ಬಾವಿಗಳಿಂದ 100 ಅಡಿ ದೂರದಲ್ಲಿ ಸ್ನಾನ ಮಾಡಿ, ಬಟ್ಟೆ, ಪಾತ್ರೆಗಳನ್ನು ತೊಳೆಯಿರಿ. ಕುಡಿಯುವ ನೀರಿನ ಮೂಲಕ್ಕೆ ಕಲುಷಿತ ನೀರು ಸೇರದಂತೆ ಎಚ್ಚರ ವಹಿಸಿ.

Exit mobile version