Site icon Vistara News

Dating Trend: ʼ3 ತಿಂಗಳ ಡೇಟಿಂಗ್‌ʼ! ಯುವ ಜನತೆಯ ಹೊಸ ಟ್ರೆಂಡ್‌!

Dating Tips

ಇತ್ತೀಚಿನ ದಿನಗಳಲ್ಲಿ ತಮ್ಮ ಲವ್‌ ಲೈಫ್‌ನಲ್ಲಿ ಜನರು (Dating Trend) ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಈ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಇನ್ನೂ ಕೆಲವರು ತಮ್ಮ ಸಂಬಂಧ (Realationship)ವನ್ನೇ ಮುರಿದುಕೊಳ್ಳುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವನ ಹಾಳಾಗಿದೆ. ಹಾಗಾಗಿ ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರಲು ನಿಮಗೆ ಮಾರ್ಗದರ್ಶನದ ಅಗತ್ಯವಿರುತ್ತದೆ. ಹಾಗಾಗಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ‘3 ತಿಂಗಳ ಡೇಟಿಂಗ್’ (Dating Tips) ನಿಯಮವಂತೆ!

ಜೀವನ ಸಂಗಾತಿಯನ್ನು ಆರಿಸುವ ಮುನ್ನ ಅವರ ಬಗ್ಗೆ ತಿಳಿದುಕೊಳ್ಳಲು ಡೇಟಿಂಗ್ ನಡೆಸುವುದು ಹೈಫೈ ಯುವ ಜನತೆಯ ಹಳೆಯ ಟ್ರೆಂಡ್‌. ಆದರೆ ಮೂರು ತಿಂಗಳ ಡೇಟಿಂಗ್‌ ಹೊಸ ಟ್ರೆಂಡ್‌. ಸಂಗಾತಿಯ ನಿಜವಾದ ಗುಣವನ್ನು ತಿಳಿಯಲು ಇವರಿಗೆ ಮೂರು ತಿಂಗಳು ಬೇಕಾಗುತ್ತದೆಯಂತೆ. ಡೇಟಿಂಗ್ ವೇಳೆ ಸಂಗಾತಿಯ ಇಷ್ಟಕಷ್ಟಗಳ ಬಗ್ಗೆ ಅರ್ಥಮಾಡಿಕೊಳ್ಳಬಹುದು. ಹಾಗಾಗಿ 3 ತಿಂಗಳ ಡೇಟಿಂಗ್’ ನಿಯಮವಂತೆ.

ಮೂರು ತಿಂಗಳ ಡೇಟಿಂಗ್’ ನಿಯಮದ ಪ್ರಕಾರ ಮೊದಲು ಪರಸ್ಪರ ಸಂಬಂಧದ ಬಗ್ಗೆ ಹೆಚ್ಚು ಒಲವು ಮತ್ತು ಉತ್ಸಾಹ ಇರುತ್ತದೆ. ಆದರೆ ಈ ವೇಳೆ ಪ್ರೀತಿ, ಮದುವೆ ವಿಚಾರದ ಬಗ್ಗೆ ಮಾತನಾಡದೇ ಪರಸ್ಪರರನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ನಂತರ ಇಬ್ಬರಿಗೂ ಅವರ ಜೀವನಶೈಲಿ, ಗುರಿಗಳು, ಗುಣಗಳು ಹೊಂದಾಣಿಕೆ ಆಗುತ್ತದೆಯೇ ಎಂಬುದನ್ನ ತಿಳಿದುಕೊಳ್ಳಬೇಕು. ಇದಕ್ಕೆ ಮೂರು ತಿಂಗಳು ಸಾಕಾಗುತ್ತದೆಯೇ ಎಂಬ ಪ್ರಶ್ನೆಯೂ ಇದೆ.

Dating Tips

ಮೂರು ತಿಂಗಳ ಡೇಟಿಂಗ್ ನಿಯಮದ ಪ್ರಯೋಜನಗಳೇನು?

ಮೂರು ತಿಂಗಳು ಜೊತೆಯಾಗಿ ಮಾತುಕತೆ ನಡೆಸುವುದರಿಂದ ಸಂಗಾತಿಯ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗುತ್ತದೆ. ಹಾಗೆಯೇ ಸಂಬಂಧವನ್ನು ತಿಳಿದುಕೊಳ್ಳುವ ಹಂತದಲ್ಲಿರುವುದರಿಂದ ಒಂದು ವೇಳೆ ಸಂಗಾತಿ ದೂರವಾದರೆ ಆಘಾತವಾಗುವುದು ತಪ್ಪುತ್ತದೆ. ಅಲ್ಲದೇ ದೃಢವಾದ ತಿಳಿವಳಿಕೆ ಮತ್ತು ಪರಸ್ಪರ ಗೌರವದಿಂದ ಪ್ರಾರಂಭವಾಗುವ ಸಂಬಂಧಗಳು ಬಲವಾಗಿ ಇರುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ ಎನ್ನುವುದು ಒಂದು ವಾದ.

3 ತಿಂಗಳ ಡೇಟಿಂಗ್ ಅನಾನುಕೂಲಗಳೇನು?

ಕೆಲವೊಮ್ಮೆ ಈ ನಿಯಮದಿಂದ ಸಂಗಾತಿ ಉತ್ತಮನಾಗಿದ್ದು, ಇನ್ನೊಬ್ಬರ ಬಗ್ಗೆ ಆಸಕ್ತಿ ಕಳೆದುಕೊಂಡರೆ ಒಬ್ಬ ಉತ್ತಮ ಸಂಗಾತಿಯನ್ನು ಕಳೆದುಕೊಂಡ ದುಃಖ ಎದುರಿಸಬೇಕಾಗುತ್ತದೆ. ಅಲ್ಲದೇ ಮೂರು ತಿಂಗಳೊಳಗೆ ಸಂಗಾತಿಯ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದರಿಂದ ಇದು ವಿಪರೀತ ಮಾನಸಿಕ ಒತ್ತಡದ ಕೆಲಸವೂ ಹೌದು. ಸಂಗಾತಿಯಿಂದ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಇದರಿಂದ ಮುಂದೆ ಗಂಡು, ಹೆಣ್ಣು ಇಬ್ಬರ ಗೌರವಕ್ಕೂ ಧಕ್ಕೆ ಆಗಬಹುದು.

ಇದನ್ನೂ ಓದಿ: Unusual Story: 15 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ! ಜೈಲು ಶಿಕ್ಷೆ

ಪರಿಪೂರ್ಣ ಸಂಗಾತಿಯನ್ನು ಹುಡುಕಲು ಈ ನಿಯಮ ಸಹಕಾರಿಯೇ?

ಈ ನಿಯಮ ಒಬ್ಬ ಪರಿಪೂರ್ಣ ಸಂಗಾತಿಯನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಇದರಿಂದ ಉತ್ತಮವಾದ ಸಂಗಾತಿಯನ್ನು ಹುಡುಕಲು ಅವಕಾಶ ಮಾಡಿಕೊಡುತ್ತದೆ. ತಾಳ್ಮೆ ಮತ್ತು ಚಿಂತನಾಶೀಲವಾಗಿ ಪರಿಗಣನೆ ಮಾಡಿದರೆ ಮಾತ್ರ ಒಬ್ಬ ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಬಹುದು. ಹಾಗಾಗಿ ಈ ನಿಯಮ ಆಯಾ ವ್ಯಕ್ತಿಯ ತಾಳ್ಮೆ ಮತ್ತು ಯೋಚನಾಶಕ್ತಿಯ ಮೇಲೆ ಅವಲಂಬಿತವಾಗಿದೆ. ಅಂತೂ, ಈ ಹೊಸ ಟ್ರೆಂಡ್‌ ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ.

Exit mobile version