Site icon Vistara News

Deepika Padukone: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

Deepika Padukone

ಮುಂಬೈ : ಸಿನಿಮಾ ತಾರೆಯರು ಹಾಗೂ ಪ್ರಸಿದ್ಧ ಶ್ರೀಮಂತ ಕುಟುಂಬದವರು ಯಾವುದೇ ವಸ್ತುಗಳನ್ನು ಧರಿಸಿದರೂ ಅದು ಹೆಚ್ಚು ಸುದ್ದಿಯಾಗುತ್ತದೆ. ಅದರಲ್ಲೂ ಬಾಲಿವುಡ್ ನಟಿಯರು ತೊಡುವ ಸೀರೆ, ಫ್ಯಾಶನ್ ಡ್ರೆಸ್‌ಗಳು ಹೆಚ್ಚು ಜನರ ಗಮನವನ್ನು ಸೆಳೆಯುತ್ತದೆ. ಇದೀಗ ನಟಿ ದೀಪಿಕಾ ಪಡುಕೋಣೆ(Deepika Padukone )ಯವರ ಸೀರೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ತಾಯಿಯಾಗುವ ಸಂಭ್ರಮದಲ್ಲಿರುವ ನಟಿ ದೀಪಿಕಾ ಪಡುಕೋಣೆ ತನ್ನ ಬೇಬಿ ಬಂಪ್ ಅನ್ನು ತುಂಬಾ ವಿಶೇಷವಾದ ಲುಕ್‌ನಲ್ಲಿ ತೋರಿಸಲು ಪ್ರಾರಂಭಿಸಿದ್ದಾರೆ. ಹಾಗೇ ಗರ್ಭಿಣಿಯರು ತಮ್ಮ ಬೇಬಿ ಬಂಪ್‌ನಲ್ಲಿ ಯಾವ ರೀತಿ ಫ್ಯಾಷನ್ ಡ್ರೆಸ್ ಧರಿಸಬಹುದು ಎಂದು ತೋರಿಸಿಕೊಡುತ್ತಿದ್ದಾರೆ.

ಇತ್ತೀಚೆಗೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಗೀತ ಸಮಾರಂಭಕ್ಕಾಗಿ ಅವರು ಧರಿಸಿದ ಸೀರೆ ಅನೇಕರನ್ನು ಆಕರ್ಷಿಸಿದೆ. ದೀಪಿಕಾ ಪಡುಕೋಣೆ ಸೊಗಸಾದ ತೋರಣಿ ಸೀರೆಯಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆಯವರು ತೋರಣಿಯ ‘ಹುಕುಮ್‌ ಕಿ ರಾಣಿ’ ಸೀರೆಯನ್ನು ಧರಿಸಿದ್ದರು, ಇದರ ಬೆಲೆ 1.92 ಲಕ್ಷ ರೂ.ಗಳಾಗಿವೆ. ಈ ಸೀರೆ ಸಮಕಾಲೀನ ವಿನ್ಯಾಸದೊಂದಿಗೆ ಐಷಾರಾಮಿ ಮತ್ತು ಸಾಂಪ್ರದಾಯಿಕ ಸೌಂದರ್ಯವನ್ನು ಒಳಗೊಂಡಿದೆ ಎನ್ನಲಾಗಿದೆ. ನಟಿ ದೀಪಿಕಾ ಅವರು ನೇರಳೆ ಬಣ್ಣದಲ್ಲಿ ವಿನ್ಯಾಸಗೊಳಿಸಲಾದ ಸೀರೆಯನ್ನು ಧರಿಸಿದ್ದು, ಸೆರಗಿನ ಮೇಲಿನ ಫ್ರೇಮಿಂಗ್ ಅನ್ನು ಸುಚಾ ಜರ್ದೋಜ್‌ನಲ್ಲಿ ರಚಿಸಲಾಗಿದೆ. ಮತ್ತು ಕೈ ಕಸೂತಿ ಡೋರಿಯಾ ಕೂಡ ಎಲ್ಲರ ಕಣ್ಮನ ಸೆಳೆಯುವಂತಿದೆ.

ಬ್ರಾಂಡ್ ಪ್ರಕಾರ, ಇದರೊಂದಿಗೆ ಬರುವ ರವಿಕೆಯು ಸಾಂಪ್ರದಾಯಿಕ ರಜಪೂತಾನಾ ಚನಿಯಾ ಚೋಲಿಯಿಂದ ಸ್ಫೂರ್ತಿ ಪಡೆದಿದೆ. ಆದರೆ ಸುಚಾ ಜರ್ದೋಜ್ ಮತ್ತು ಶುದ್ಧ ಮೋಟಿಯಾ ಕೈಯಿಂದ ನೇಯ್ದ ಟ್ಯಾಸೆಲ್‌ಗಳಲ್ಲಿನ ಚಿಡಿ ವಿನ್ಯಾಸಗಳು ಸುಂದರವಾಗಿದೆ. ದೀಪಿಕಾ ಅವರು ಈ ಸೊಗಸಾದ ಸೀರೆಗೆ ಸರಿ ಹೊಂದುವಂತಹ ಆಭರಣಗಳನ್ನು ಧರಿಸಿದ್ದು, ಅವರ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ. ಕಿವಿಯೋಲೆಗಳು ಮತ್ತು ಚೋಕರ್ ಸೇರಿದಂತೆ ಅವರು ಧರಿಸಿದ ಆಭರಣ ಆ ಸೀರೆಯ ವಿನ್ಯಾಸಗಳಿಗೆ ಸಖತ್‌ ಮ್ಯಾಚಿಂಗ್‌ ಆಗಿದೆ.

ಭದ್ರ ಸಂಜಲಿ ಎಂಬ ಹೆಸರಿನ ಸೀರೆಯು ತೋರಣಿ ಕ್ಲಾಸಿಕ್ಸ್‌ನ ಒಂದು ಭಾಗವಾಗಿದೆ. ಭದ್ರ ಸಂಜಲಿ ಸೀರೆಯು ಸುಂದರವಾದ ಕಸೂತಿಯಿಂದ ಅಲಂಕರಿಸಲ್ಪಟ್ಟಿದೆ. ಸಂಗೀತ ಸಮಾರಂಭದಂತಹ ಭವ್ಯವಾದ ಆಚರಣೆಗಳಿಗೆ ಇದು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಸೀರೆಯ ಮೇಲಿನ ವಿನ್ಯಾಸಗಳು ಕರಣ್ ತೋರಣಿಯವರ ವಿನ್ಯಾಸಗಳ ವಿಶಿಷ್ಟ ಲಕ್ಷಣವನ್ನು ಮತ್ತು ಕುಶಲಕರ್ಮಿಗಳ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ. ಭಾರತದ ಸಂಪ್ರದಾಯದ ಸೌಂದರ್ಯವನ್ನು ಎತ್ತಿ ತೋರಿಸುವಲ್ಲಿ ಹೆಸರುವಾಸಿಯಾದ ಕರಣ್ ತೋರಣಿ ಅವರು ಭದ್ರ ಸಂಜಲಿ ಸೀರೆಯೊಂದಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

ಆದರೆ ಈ ಸೀರೆಯನ್ನು ತಯಾರು ಮಾಡಲು ಸುಮಾರು 3400 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು ಎನ್ನಲಾಗಿದೆ. 16ನೇ ಶತಮಾನದ ಹೈದರಾಬಾದ್‌ನ ಚೌ ಮೊಹಲ್ಲಾ ಅರಮನೆಯಿಂದ ಇದು ಸ್ಫೂರ್ತಿ ಪಡೆದಿದೆ.

Exit mobile version