Site icon Vistara News

Divorce Case: ಪ್ರತಿ ಬಾರಿ ʼಸರಸʼ ಆಡಿದಾಗಲೂ ಕಾಸು ಕೊಡಲೇಬೇಕು! ಹೆಂಡತಿಯ ಡಿಮ್ಯಾಂಡ್‌ ಕೇಳಿ ಡಿವೋರ್ಸ್‌ ಪಡೆದ ಗಂಡ!

Divorce Case


ದಂಪತಿ ನಡುವೆ ಪ್ರೀತಿ, ಪ್ರಣಯ ಇರುವುದು ಸಹಜ. ಆದರೆ ಲೈಂಗಿಕ ಸುಖ ನೀಡಲು ಹೆಂಡತಿ ಯಾವತ್ತಾದರೂ ಗಂಡನಲ್ಲಿ ಹಣ ಕೇಳುತ್ತಾಳೆಯೇ? ಹಾಗೇ ಮಾಡಿದರೆ ಪತ್ನಿಗೂ ಲೈಂಗಿಕ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬರುವ ತನ್ನ ಪತಿಯ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆಕೆ ಪ್ರತಿಬಾರಿ ಇದೇ ರೀತಿ ಮಾಡುತ್ತಿದ್ದರಿಂದ ನೊಂದ ಪತಿ ಆಕೆಗೆ ವಿಚ್ಛೇದನ (Divorce Case) ನೀಡಿದ ಘಟನೆ ತೈವಾನ್‍ನಲ್ಲಿ ನಡೆದಿದೆ.

2014ರಲ್ಲಿ ವಿವಾಹವಾದ ಈ ದಂಪತಿಯ ನಡುವೆ ಆರಂಭದಲ್ಲಿ ಸಾಮರಸ್ಯದ ಸಂಬಂಧವಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, 2017ರಲ್ಲಿ ಪತ್ನಿ ತಿಂಗಳಿಗೊಮ್ಮೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದಾಗ ಅವರ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯಿತು. ಅಲ್ಲದೇ ಪತ್ನಿ ತನ್ನ ಸಂಬಂಧಿಕರ ಬಳಿ ತನ್ನ ಪತಿ ತುಂಬಾ ದಪ್ಪ ಇದ್ದಾನೆ. ಹಾಗಾಗಿ ಆತ ಲೈಂಗಿಕ ತೃಪ್ತಿ ನೀಡಲು ಅಸಮರ್ಥನಾಗಿದ್ದಾನೆ ಎಂದು ಹೇಳುವ ಮೂಲಕ ಅವನನ್ನು ಅವಮಾನಿಸುತ್ತಿದ್ದಳು. ಈ ವಿಚಾರ ತಿಳಿದ ಪತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿ 2021ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಪತ್ನಿ ತನ್ನ ತಪ್ಪನ್ನು ಒಪ್ಪಿಕೊಂಡು ಸುಧಾರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾಳೆ. ಆಗ ಕೇಸ್ ವಾಪಸ್ ಪಡೆಯುವಂತೆ ಮನವೊಲಿಸಿದ್ದಾಳೆ.

ಅವಳ ಭರವಸೆಗಳನ್ನು ನಂಬಿ, ನಂತರ ಪತಿ ತಮ್ಮ ಆಸ್ತಿಯನ್ನು ಅವಳ ಹೆಸರಿಗೆ ನೋಂದಾಯಿಸಿದ್ದಾನೆ. ಇಷ್ಟಾದರೂ ಆಕೆ ಅವನನ್ನು ಭಾವನಾತ್ಮಕವಾಗಿ ನಿಂದನೆ ಮಾಡುವುದನ್ನು ಮುಂದುವರಿಸಿದ್ದಾಳೆ. ಅಲ್ಲದೇ ಪತಿ ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗ ಪತ್ನಿ ಹಣ (ಭಾರತೀಯ ಮೌಲ್ಯದಲ್ಲಿ 1,260 ರೂ.) ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಾಗಾಗಿ ಈ ವರ್ಷ ಆತ ಮತ್ತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸರಿಪಡಿಸಲು ಸಾಧ್ಯವಿಲ್ಲ ಎಂದು ಅರಿತ ನ್ಯಾಯಾಲಯ ಇವರಿಗೆ ವಿಚ್ಛೇದನ ನೀಡಿದೆ. ಆದರೆ ಹೈಕೋರ್ಟ್‌ಗೆ ಪತ್ನಿ ಮನವಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅದನ್ನು ತಿರಸ್ಕರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

ಇಂಥ ಪ್ರಕರಣವು ತೈವಾನ್‍ನಲ್ಲಿ ಇದೇ ಮೊದಲಲ್ಲ. ಈ ಹಿಂದೆ ಇದೇ ರೀತಿಯ ಘಟನೆ ದಾಖಲಾಗಿದೆ. 2014ರಲ್ಲಿ ಇನ್ನೊಬ್ಬ ತೈವಾನ್ ಮಹಿಳೆ ತನ್ನ ಪತಿಗೆ ಲೈಂಗಿಕತೆಗಾಗಿ ಮತ್ತು ಊಟಕ್ಕಾಗಿ 5,000 ರೂ. ಶುಲ್ಕ ವಿಧಿಸಿದ್ದಳು. ಈ ವಿವಾದವು ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗಿತ್ತು. ಅಲ್ಲಿ ಪತಿ ತನ್ನ ಕುಟುಂಬಕ್ಕೆ ತಿಂಗಳಿಗೆ 50,000 ರೂ. ನೀಡಲು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ತೈವಾನ್‍ನಲ್ಲಿ ವಿಚ್ಛೇದನ ಪ್ರಮಾಣವು ಕಳೆದ ವರ್ಷ ಶೇಕಡಾ 0.218 ರಷ್ಟಿತ್ತು ಎನ್ನಲಾಗಿದೆ.

Exit mobile version