Site icon Vistara News

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Viral Video

ಮುಂಬೈ: ಯಾರಾದರೂ ಸಂಕಷ್ಟದಲ್ಲಿದ್ದಾಗ ಕೆಲವರು ಕಂಡೂ ಕಾಣದಂತೆ ಹೋಗುತ್ತಿರುತ್ತಾರೆ. ಅಂತಹ ಘಟನೆಗಳನ್ನು ನಾವು ಹಲವಾರು ಕಡೆಗಳಲ್ಲಿ ಕಂಡಿರುತ್ತೇವೆ. ಅಲ್ಲಿ ಸಹಾಯಕ್ಕೆ ಬರುವವರು ಒಬ್ಬರು-ಇಬ್ಬರು ಮಾತ್ರ. ಉಳಿದವರು ನಮಗೇಕೆ ಪರರ ಚಿಂತೆ ಎಂದು ತಮ್ಮ ಪಾಡಿಗೆ ತಾವು ಹೋಗುತ್ತಿರುತ್ತಾರೆ. ಸಾಮಾನ್ಯ ಜನರೇ ಈ ರೀತಿ ವರ್ತಿಸುವಾಗ ಇನ್ನೂ ದೊಡ್ಡ ಮನುಷ್ಯರೆನಿಸಿಕೊಂಡರು ಅಲ್ಲಿ ಏನಾಗಿದೆ ಎಂದು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ರಸ್ತೆಯಲ್ಲಿ ಸಂಕಷ್ಟಕ್ಕೀಡಾದ ಇಬ್ಬರು ವ್ಯಕ್ತಿಗಳ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video) ಆಗಿದೆ.

ಹೌದು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನಕ್ಕಾಗಿ ಥಾಣೆಯಿಂದ ವಿಧಾನಸಭಾ ಭವನಕ್ಕೆ ಹೋಗುತ್ತಿದ್ದಾಗ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಇಬ್ಬರು ಜೈನ ಸಾಧ್ವಿಗಳು (ಜೈನ ಮಹಿಳಾ ಸನ್ಯಾಸಿನಿಗಳು) ಸಂಕಷ್ಟದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತಮ್ಮ ವಾಹನಗಳನ್ನು ನಿಲ್ಲಿಸಲು ಹೇಳಿ ವಾಹನದಿಂದ ಇಳಿದು ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಸಹಾಯ ಮಾಡಲು ಬಂದಿದ್ದಾರೆ.

ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಅಪಘಾತವಾಗಿದ್ದು, ಅವರನ್ನು ಕಂಡು ಅವರ ಪರಿಸ್ಥಿತಿ ತಿಳಿದ ಸಿಎಂ ತಕ್ಷಣ ಗಾಯಗೊಂಡ ಮಹಿಳಾ ಸನ್ಯಾಸಿಗಳನ್ನು ಆಸ್ಪತ್ರೆಗೆ ಸಾಗಿಸಲು ತಮ್ಮ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ವಿಡಿಯೊವನ್ನು ಸಿಎಂ ಏಕನಾಥ್ ಶಿಂಧೆ ಅವರ ಅಧಿಕೃತ ಹ್ಯಾಂಡಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ವೈರಲ್ ಆಗಿದೆ. ಸಿಎಂ ಮಹಾನ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಮುಂದಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ಮತ್ತು ಥಾಣೆಯಲ್ಲಿ ಲೋಕಸಭಾ ಚುನಾವಣೆಯ ಮಧ್ಯೆ, ಆಟೋ ರಿಕ್ಷಾ ಅಪಘಾತಕ್ಕೀಡಾದ ಮಹಿಳೆಗೆ ಸಿಎಂ ಶಿಂಧೆ ಸಹಾಯ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.

ಮಹಾರಾಷ್ಟ್ರ ಸಿಎಂ ತಮ್ಮ ಕಾರಿನಿಂದ ಇಳಿದು, ಮಹಿಳೆಗೆ ಮತ್ತೊಂದು ವಾಹನದಲ್ಲಿ ಆಸ್ಪತ್ರೆಗೆ ಹೋಗಲು ಸಹಾಯ ಮಾಡಿದ್ದರು ಮತ್ತು ಅವಳ ಗಾಯಗಳಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

Exit mobile version