ಹೊಸದಾಗಿ ಮದುವೆಯಾದ ದಂಪತಿಗೆ ತಮ್ಮ ಹೊಸ ಜೀವನ ಶುರುಮಾಡಲು ಮೊದಲ ರಾತ್ರಿಯನ್ನು ಏರ್ಪಡಿಸುವುದು ಸಂಪ್ರದಾಯ. ಈ ದಿನ ಅವರು ಮಲಗುವ ಕೋಣೆಯನ್ನು ಸುಗಂಧ ದ್ರವ್ಯಗಳಿಂದ, ಹೂಗಳು, ಹಣ್ಣುಗಳಿಂದ ಅಲಂಕರಿಸುವುದು ಸಹಜ. ಸಾಮಾನ್ಯವಾಗಿ ದಂಪತಿ ತಮ್ಮ ಮೊದಲ ರಾತ್ರಿಯ ಅನುಭವವನ್ನು ಹಂಚಿಕೊಳ್ಳಲು ಮುಜುಗರಪಡುತ್ತಾರೆ. ಕೆಲವರು ಸೂಚ್ಯವಾಗಿ ತಮ್ಮ ಅನುಭವವನ್ನು ಆತ್ಮೀಯರಲ್ಲಿ ಹಂಚಿಕೊಂಡಿರಬಹುದು. ಆದರೆ ಯಾರೂ ಆ ರಾತ್ರಿ ಕಳೆದ ಕ್ಷಣವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. ಅಂತಹದರಲ್ಲಿ ಇಲ್ಲಿ ಒಂದು ದಂಪತಿ ತಮ್ಮ ಮೊದಲ ರಾತ್ರಿಯ (First Night Video) ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.
ಈ ವೈರಲ್ ಆಗಿರುವ ವೀಡಿಯೊದಲ್ಲಿ, ದಂಪತಿ ತಮ್ಮ ವಿವಾಹ ಸಮಾರಂಭದ ನಂತರದ ಕ್ಷಣಗಳ ಬಗ್ಗೆ ತಮ್ಮ ಅನುಭವವನ್ನು ಚರ್ಚಿಸುತ್ತಿರುವುದನ್ನು ತೋರಿಸುತ್ತದೆ. ದಂಪತಿ ಅವರ ಮಲಗುವ ಕೋಣೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇದರಲ್ಲಿ ವರನು ವಧುವನ್ನು ಆಕೆಯ ‘ಮೊದಲ ರಾತ್ರಿಯ’ ಅನುಭವದ ಬಗ್ಗೆ ಕೇಳುತ್ತಾನೆ. ಆಕೆ ಅದು ಇನ್ನೂ ನಡೆದಿಲ್ಲ ಎಂದು ಉತ್ತರಿಸಿದ್ದಾಳೆ. ನಂತರ ದಂಪತಿ ತಮ್ಮ ಮಲಗುವ ಕೋಣೆಯ ಅಲಂಕಾರಗಳನ್ನು ಪ್ರದರ್ಶನ ಮಾಡಿದ್ದಾರೆ.
Suhagraat Vlog 🥴
— Sunanda Roy 👑 (@SaffronSunanda) July 5, 2024
These vloggers have gone totally mad.
Wait for the blurred clip 😹 https://t.co/PMsiC5dS6U
ಈ ವಿಡಿಯೊವನ್ನು ಸುನಂದಾ ರಾಯ್ ಅವರು ಇದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೊ ನೆಟ್ಟಿಗರಿಂದ ಟೀಕೆಗೆ ಒಳಗಾಗಿದೆ. ಅನೇಕರು ಇವರ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಇವರು ತಮ್ಮ ಗಡಿಗಳನ್ನು ದಾಟಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸಿ, ಕೇವಲ ಹಣಕ್ಕಾಗಿ, ಜನರು ಈಗ ತಮ್ಮ ವೈಯಕ್ತಿಕ ಜೀವನವನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.ಇನ್ನೊಬ್ಬರು, ಅವರು ಮದುವೆಯ ರಾತ್ರಿ ಹಾಸಿಗೆಯನ್ನು ತೋರಿಸುತ್ತಿದ್ದಾರೆ, ಆಗ ನೋಡಲು ಇನ್ನೇನು ಉಳಿದಿದೆ? ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!
ಇಂತಹ ನಾಚಿಕೆಗೇಡಿನ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಘಟನೆಗಳನ್ನು ಒಂದಲ್ಲ ಒಂದು ಪೋಸ್ಟ್ ಆಗುತ್ತಿರುತ್ತದೆ. ಅದೇರೀತಿ ಈ ವರ್ಷದ ಜನವರಿಯಲ್ಲಿ ಅಮೆರಿಕದ ನ್ಯೂಯಾರ್ಕ್‍ನಲ್ಲಿ ದಂಪತಿ ಸಾರ್ವಜನಿಕ ಉದ್ಯಾನವನದಲ್ಲಿ ಲೈಂಗಿಕ ಕೃತ್ಯದಲ್ಲಿ ತೊಡಗಿರುವುದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ತೆರೆದ ಪ್ರದೇಶದಲ್ಲಿ ದಂಪತಿಯ ಕೃತ್ಯವನ್ನು ಹಲವಾರು ಜನರು ಟೀಕಿಸಿದ್ದರು.