Site icon Vistara News

Head Shave: ಪೋಷಕರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ದಲಿತ ಹುಡುಗನ ತಲೆ ಬೋಳಿಸಿದರು!

Head Shave

ಉತ್ತರ ಪ್ರದೇಶ : ಚುನಾವಣೆ ಎಂದಾಕ್ಷಣ ಜನ ಕೂಡ ಮರುಳಾಗುತ್ತಾರೆ. ಆ ಪಕ್ಷ ನಮ್ಮದು, ಈ ಪಕ್ಷ ಇವರದ್ದು ಎಂದು ಕಿತ್ತಾಡುವುದಕ್ಕೆ ಶುರುಮಾಡುತ್ತಾರೆ. ಗೆದ್ದು ಗದ್ದುಗೆ ಏರಿದವರೂ ಸುಮ್ಮನಿದ್ದರೂ, ಅವರ ಅಭಿಮಾನಿಗಳು ಮಾತ್ರ ಕಿತ್ತಾಡುವುದು ಬಿಡುವುದಿಲ್ಲ. ಪಕ್ಷ ಪಕ್ಷದವರ ಕಿತ್ತಾಟ ಜೀವ ತೆಗೆಯುವವರೆಗೆ ಹೋದ ಘಟನೆಗಳು ನಡೆದಿವೆ. ಉತ್ತರ ಪ್ರದೇಶದ ಬುದೌನ್‌ನಲ್ಲಿ ಅಮಾನುಷವಾದ ಘಟನೆಯೊಂದು ನಡೆದಿದೆ. ಬಿಎಸ್‌ಪಿಗೆ ಬದಲು ಬಿಜೆಪಿಗೆ ಪೋಷಕರು ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಕ್ಷೌರಿಕನೊಬ್ಬ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕನ ತಲೆಯನ್ನು ಬೋಳಿಸಿದ (Head Shave) ಘಟನೆ ನಡೆದಿದೆ.

ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಬುದೌನ್‌ನ ಬಿಲ್ಸಿಯಲ್ಲಿ ಅಂಗಡಿಯನ್ನು ಹೊಂದಿರುವ ಆರೋಪಿ ಕ್ಷೌರಿಕನ ವಿರುದ್ಧ ಐಪಿಸಿ ಸೆಕ್ಷನ್ 323, 504 ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನಲ್ಲಿ, ಲೋಕಸಭಾ ಚುನಾವಣೆಯ ಸಮಯದಲ್ಲಿ ನಮ್ಮ ಕುಟುಂಬವು ಬಿಜೆಪಿಗೆ ಬೆಂಬಲ ನೀಡಿದೆ. ಇದರಿಂದ ಕ್ಷೌರಿಕ ಮತ್ತು ನಮ್ಮ ಪ್ರದೇಶದ ಇತರ ಕೆಲವರು ಅಸಮಾಧಾನಗೊಂಡಿದ್ದರು. ಆಗ ಅವರು ನಮ್ಮ ಮನೆಯ ಬಳಿ ಆಟವಾಡುತ್ತಿದ್ದ ನನ್ನ ಮಗನನ್ನು ಬಲವಂತವಾಗಿ ಕರೆದೊಯ್ದು ತಲೆ ಬೋಳಿಸಿದ್ದಾರೆ.

ಅವಮಾನದಿಂದ ನನ್ನ ಮಗ ತುಂಬಾ ಅಸಮಾಧಾನಗೊಂಡಿದ್ದಾನೆ. ಈ ಬಗ್ಗೆ ನನ್ನ ಪತಿ ಅವರನ್ನು ಪ್ರಶ್ನಿಸಿದ್ದಕ್ಕೆ ಅವರ ಜೊತೆ ಕೆಟ್ಟದಾಗಿ ವರ್ತಿಸಿದ್ದಾರೆ. ಹಾಗಾಗಿ ನಾವು ಪೊಲೀಸರ ಮೋರೆ ಹೋದೆವು ಎಂದು ತಿಳಿಸಿದ್ದಾರೆ. ಬಾಲಕನ ತಾಯಿಯ ಕೋರಿಕೆಯ ಮೇರೆಗೆ ಆರೋಪಿ ಕ್ಷೌರಿಕ ಆತನ ತಲೆ ಬೋಳಿಸಿದ್ದಾನೆ ಎಂದು ಹೇಳುವ ಮೂಲಕ ಆರೋಪಿಯ ಚಿಕ್ಕಪ್ಪ ಬಾಲಕನ ಪೋಷಕರ ಹೇಳಿಕೆಯನ್ನು ನಿರಾಕರಿಸಿದ್ದಾನೆ.

ಬುದೌನ್ ಕ್ಷೇತ್ರದಲ್ಲಿ ಎಸ್ ಪಿ ಯ ಆದಿತ್ಯ ಯಾದವ್ ಅವರು ಬಿಜೆಪಿಯ ದುರ್ವಿಜಯ್ ಸಿಂಗ್ ಶಾಕ್ಯ ಅವರನ್ನು 34,991 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಇದನ್ನೂ ಓದಿ: Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

ಏನೇ ಇದ್ದರೂ ಪಕ್ಷದ ಮೇಲಿನ ಅಭಿಮಾನಕ್ಕಾಗಿ ಇನ್ನೊಬ್ಬರ ಮನಸ್ಸಿನ ಭಾವನೆಯ ಜೊತೆ ಆಟವಾಡುವುದು, ಜೀವ ತೆಗೆಯುವುದು ಸರಿಯಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.

Exit mobile version