Site icon Vistara News

Humanity: ಬಾಲಕಿಯ ಚಿನ್ನದ ಸರ ಮರಳಿಸಿ ಮಾನವೀಯತೆ ಮೆರೆದ ಬಸ್ ಚಾಲಕ

Gold Case

ಉಡುಪಿ: ಚಿನ್ನ- ಈ ಹೆಸರು ಕೇಳುತ್ತಲೇ ಎಲ್ಲರ (Humanity) ಕಿವಿ ನೆಟ್ಟಾಗುತ್ತದೆ. ಯಾಕೆಂದರೆ ಈಗ ಚಿನ್ನವನ್ನು ತೆಗೆದುಕೊಳ್ಳುವುದು ಬಿಡಿ ಮುಟ್ಟುವುದಕ್ಕೂ ಕೂಡ ತುಸು ಯೋಚಿಸಬೇಕಾಗಿದೆ! ದುಬಾರಿ ಬೆಲೆಯ ಈ ಚಿನ್ನ ಕಾಲಬುಡದಲ್ಲಿ ಬಿದ್ದರೆ ಯಾರು ತಾನೇ ಬೇಡವೆನ್ನುತ್ತಾರೆ? ಆದರೆ ಎಲ್ಲರೂ ದುರಾಸೆ ತುಂಬಿದವರೇ ಇರಲ್ಲ. ಮಾನವೀಯತೆ ಕೂಡ ಇದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಬಸ್ ನಲ್ಲಿ ಕಳೆದುಕೊಂಡಿದ್ದ ಚಿನ್ನದ(Gold Case) ಸರವನ್ನು ಬಸ್ ಚಾಲಕ (Bus Driver) ಮತ್ತು ಕಂಡೆಕ್ಟರ್ ಸರದ ಮಾಲೀಕರಿಗೆ ಹಿಂತಿರುಗಿಸಿದ ಅಪರೂಪದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಚಿನ್ನದ ಸರಗಳ ಕಳ್ಳತನದ ಪ್ರಕರಣವೂ ಎಲ್ಲಾ ಕಡೆ ಹೆಚ್ಚಾಗುತ್ತಿದೆ. ಅದರ ಮಧ್ಯೆ ಬೇರೆಯವರು ಕಳೆದುಕೊಂಡ ಚಿನ್ನದ ಸರ ಅನಾಯಾಸವಾಗಿ ಸಿಕ್ಕರೆ ಯಾರಿಗೆ ತಾನೇ ಕೊಡುವುದಕ್ಕೆ ಮನಸ್ಸು ಬರುತ್ತದೆ. ಕಷ್ಟಕಾಲದಲ್ಲಿ ನೆರವಾಗುತ್ತದೆ ಎಂದು ಹಾಗೇ ಜೇಬಿನೊಳಗೆ ಹಾಕಿಕೊಳ್ಳುವವರೇ ಹೆಚ್ಚು. ಆದರೂ ಇಂತಹ ಜನರ ಮಧ್ಯೆ ತಮಗೆ ಸಿಕ್ಕ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿದ ಬಸ್ ಚಾಲಕ ಮತ್ತು ಕಂಡೆಕ್ಟರ್ ಗುಣವನ್ನು ಎಲ್ಲರೂ ಮೆಚ್ಚಲೇಬೇಕು.

ಜೂನ್ 20ರಂದು ಬ್ರಹ್ಮಾವರದಿಂದ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳ ಚಿನ್ನದ ಸರ ಕಳೆದುಹೋಗಿದೆ. ಆ ಸರವನ್ನು ನೋಡಿದ ಪ್ರಯಾಣಿಕರೊಬ್ಬರು ಅದನ್ನು ಬಸ್ ಕಂಡೆಕ್ಟರ್ ಮತ್ತು ಚಾಲಕ ಬಳಿ ನೀಡಿದ್ದಾರೆ. ಬಳಿಕ ಬಸ್ ಚಾಲಕ ಅದನ್ನು ಆ ಬಾಲಕಿಗೆ ಹಿಂತಿರುಗಿಸಿದ್ದಾರೆ.

ಇದನ್ನೂ ಓದಿ: Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

ಸರ ಕಳೆದುಕೊಂಡ ಬಾಲಕಿ ಆತಂಕಗೊಂಡಿದ್ದಾಗ ಬಸ್ ಏಜೆಂಟ್ ಆಕೆಯ ಬಳಿ ಸಮಸ್ಯೆಯನ್ನು ಕೇಳಿದರು. ಬಾಲಕಿ ತನ್ನ ಚಿನ್ನದ ಸರ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾಳೆ. ಆಗ ಆಕೆಯ ಬಳಿ ಇದ್ದ ಟಿಕೆಟ್ ತೆಗೆದುಕೊಂಡ ಏಜೆಂಟರ್ ಎಪಿಎಂ ಬಸ್ ಚಾಲಕನನ್ನು ಸಂಪರ್ಕಿಸಿ ಬಾಲಕಿಗೆ ಚಿನ್ನದ ಸರ ಸಿಗುವಂತೆ ಮಾಡಿದ್ದಾರೆ.

Exit mobile version