Site icon Vistara News

International Yoga Day: ಈ ರಾಜಕಾರಣಿಗಳ ಯೋಗಾಸನ ನೋಡಿ ನಕ್ಕು ಬಿಡಿ; ನಗುವುದೂ ಒಂದು ಯೋಗ!

International Yoga Day 2024

International Yoga Day 2024

ಯೋಗ ಆರೋಗ್ಯಕ್ಕೆ ಬಹಳ ಉತ್ತಮ. ಯೋಗ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ದಿನದಲ್ಲಿ ಕನಿಷ್ಠ 20 ನಿಮಿಷಗಳ ಕಾಲ ಪ್ರತಿಯೊಬ್ಬರೂ ಯೋಗ ಮಾಡುವುದು ಉತ್ತಮ. ಇಂದು ( ಜೂನ್ 21) ನಡೆದ ಅಂತಾರಾಷ್ಟ್ರೀಯ ಯೋಗ ದಿನದ (International Yoga Day) ಅಂಗವಾಗಿ ದೇಶಾದ್ಯಂತ ಯೋಗಾಚರಣೆ ನಡೆಯಿತು. ಇದರ ಅಂಗವಾಗಿ ಗಣ್ಯ ವ್ಯಕ್ತಿಗಳು ಯೋಗ ಮಾಡುವ ಮೂಲಕ ಜನರಿಗೆ ಸಂದೇಶ ಸಾರಲು ಯತ್ನಿಸಿದರು. ಆದರೆ ಕೆಲವು ರಾಜಕಾರಣಿಗಳು ಮಾಡಿದ ಯೋಗ ಅಭ್ಯಾಸ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ದೇಶದ ಇಬ್ಬರು ಪ್ರಮುಖ ರಾಜಕೀಯ ನಾಯಕರು ಮಾಡಿರುವ ಯೋಗವಂತೂ ಸಾರ್ವಜನಿಕರನ್ನು ನಗುವಿನ ಕಡಲಿನಲ್ಲಿ ತೇಲಿಸಿದೆ.

ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರು ಯೋಗ ಮಾಡಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರು ವೃಕ್ಷಾಸನವನ್ನು ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ವೀಡಿಯಾದಲ್ಲಿ ಹರಿದಾಡುತ್ತಿದೆ. 60 ವರ್ಷದ ಏಕನಾಥ್ ಶಿಂಧೆ ಅವರು ವೃಕ್ಷಾಸನ ಮಾಡುವಾಗ ತಮ್ಮ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೆ ಹೆಣಗಾಡುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದು.
ವೃಕ್ಷಾಸನದಲ್ಲಿ ವ್ಯಕ್ತಿಗಳು ಒಂದು ಕಾಲಿನ ಮೇಲೆ ನಿಂತು ತಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳಬೇಕು. ಆದರೆ ಈ ಭಂಗಿಯನ್ನು ಮಾಡಲು ಸಿಎಂ ಏಕನಾಥ್ ಶಿಂಧೆ ಅವರು ಒದ್ದಾಡುತ್ತಿರುವುದನ್ನು ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಅದೇರೀತಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠವಳೆ ಅವರು ಯೋಗ ಮಾಡುವ ರೀತಿ ಕೂಡ ಇನ್ನಷ್ಟು ನಗುವನ್ನು ಮೂಡಿಸಿದೆ. ಸಚಿವರು ಮರೂನ್ ಬಣ್ಣದ ಸಡಿಲವಾದ ಟೀ-ಶರ್ಟ್ ಮತ್ತು ಪ್ಯಾಂಟ್‌ ಧರಿಸಿ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಲಹೆಗಾರರ ಸೂಚನೆಮೇರೆಗೆ ಯೋಗ ಪ್ರದರ್ಶನ ಮಾಡಿದ್ದಾರೆ. ತಮ್ಮ ಎರಡೂ ಕೈಗಳನ್ನು ನಿಧಾನಕ್ಕೆ ಒಂದು ಬದಿಯಿಂದ ಇನ್ನೊಂದು ಬದಿಗೆ ತಿರುಗಿಸುತ್ತಿರುವುದನ್ನು ನೋಡಿದರೆ ನಕ್ಕು ನಕ್ಕು ಸುಸ್ತಾಗುತ್ತದೆ.

ಇದನ್ನೂ ಓದಿ: Murder Case: ಹುಡುಗಿ ಜೊತೆ ಕುಳಿತವನ ಮೇಲೆ ಗುಂಡಿನ ಸುರಿಮಳೆ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು ಅವರು ಮಾಡುತ್ತಿರುವ ಯೋಗ ಜನರ ಮುಖದಲ್ಲಿ ನಗುವನ್ನು ಮೂಡಿಸಿದೆ. ‘ಅವರು ಎಲ್ಲಾ ಸಮಯದಲ್ಲೂ ತುಂಬಾ ತಮಾಷೆಯಿಂದಿರುತ್ತಾರೆ. ಹಾಗಾಗಿ ಅವರು ಹಾಸ್ಯ ಮಂತ್ರಿಯಾಗಿರಬೇಕು’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಇನ್ನೊಬ್ಬರು ಇವರು ಯೋಗ ಮಾಡುವ ಬದಲು ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡುವುದು ಉತ್ತಮ’ ಎಂದು ಬರೆದಿದ್ದಾರೆ. ಅಂದ ಹಾಗೆ, ಈ ಎರಡು ವಿಡಿಯೊ ನೋಡಿ ನೀವೂ ಮನಸಾರೆ ನಕ್ಕು ಬಿಡಿ. ಏಕೆಂದರೆ, ನಗುವುದೂ ಕೂಡ ಒಂದು ಯೋಗ!

Exit mobile version