Site icon Vistara News

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

IRCTC Ticket Booking

ಬೆಂಗಳೂರು : IRCTC ಒಂದು ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಇದು ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಗೆ ಟಿಕೆಟಿಂಗ್ (IRCTC Ticket Booking), ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುತ್ತದೆ. ಹೆಚ್ಚಿನ ಜನರು IRCTC ಐಡಿ ಬಳಸಿ ಟಿಕೆಟ್ ಗಳನ್ನು ಬುಕ್ ಮಾಡುತ್ತಾರೆ. ಆದರೆ ನಿಮ್ಮ ಐಡಿಯನ್ನು ಬಳಸಿಕೊಂಡು ಬೇರೆಯವರಿಗೆ ಟಿಕೆಟ್ ಬುಕ್ ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ IRCTCಯಿಂದ ಟಿಕೆಟ್ ಬುಕ್ ಮಾಡುವವರು ಈ ನಿಯಮ ತಿಳಿದಿರಿ.

IRCTC ವೆಬ್ ಸೈಟ್ ನಲ್ಲಿ ಒಂದು ಐಡಿಯಲ್ಲಿ ಒಬ್ಬ ವ್ಯಕ್ತಿ ಒಂದು ತಿಂಗಳಿನಲ್ಲಿ 24 ಟಿಕೆಟ್ ಗಳನ್ನು ಬುಕ್ ಮಾಡಬಹುದು. ಆದರೆ ಇವರ ಐಡಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರಬೇಕು. ಒಂದು ವೇಳೆ ನಿಮ್ಮ ಐಡಿಗೆ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ ಅಂತವರ ಐಡಿಯಿಂದ ತಿಂಗಳಿಗೆ 12 ಟಿಕೆಟ್ ಗಳನ್ನು ಮಾತ್ರ ಬುಕ್ ಮಾಡುವ ಅವಕಾಶವಿರುತ್ತದೆ. ಆದರೆ ಆ 12 ಟಿಕೆಟ್ ನೀವು ಹಾಗೂ ನಿಮ್ಮ ಕುಟುಂಬದವರಿಗೆ ಮಾತ್ರ ಮೀಸಲಾಗಿರಬೇಕು. ಇಲ್ಲವಾದರೆ ಅದು ಅಪರಾಧವಾಗುತ್ತದೆ.

ಇದನ್ನೂ ಓದಿ: Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

IRCTC ಐಡಿ ಬಳಸಿ ನೀವು ತತ್ಕಾಲ್ ಎಸಿ ಟಿಕೆಟ್ ಬುಕ್ ಮಾಡುವುದಾದರೆ ಬೆಳಿಗ್ಗೆ 10 ಗಂಟೆಯ ನಂತರ ಪ್ರಾರಂಭಿಸಬೇಕಾಗುತ್ತದೆ. ಹಾಗೇ ನಾನ್ ಎಸಿ ಟಿಕೆಟ್ ಬುಕ್ ಮಾಡುವವರು ಬೆಳಿಗ್ಗೆ 11 ಗಂಟೆಯ ನಂತರ ಬುಕ್ ಮಾಡಬಹುದಾಗಿದೆ.

Exit mobile version