ನವದೆಹಲಿ: ದೇಶದಲ್ಲಿ ಯುವ ಜನರ (Job News) ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ. ಆ ಮೂಲಕ ಬೃಹತ್ ಉದ್ಯೋಗವಕಾಶವನ್ನು ಕಲ್ಪಿಸಲಿದೆ.
ದೇಶದ ಪ್ರಸ್ತುತ ಎಲೆಕ್ಟ್ರಾನಿಕ್ ರಫ್ತು 125-130 ಬಿಲಿಯನ್ ಡಾಲರ್ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನೆಯು 250 ಶತಕೋಟಿ ಡಾಲರ್ ತಲುಪುವ ಸಾಧ್ಯತೆ ಎಂದು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ. ಹಾಗೆಯೇ, ಪ್ರಸ್ತುತ ಎಲೆಕ್ಟ್ರಾನಿಕ್ ಉದ್ಯಮದಲ್ಲಿ 25 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಉದ್ಯೋಗಿಗಳನ್ನು 25 ಲಕ್ಷದಿಂದ ಸುಮಾರು 50 ಲಕ್ಷಕ್ಕೆ ದ್ವಿಗುಣಗೊಳಿಸುವ ಗುರಿ ಸರ್ಕಾರಕ್ಕಿದೆ ಎನ್ನಲಾಗಿದೆ.
“ಡಿಜಿಟಲ್ ತಂತ್ರಜ್ಞಾನಕ್ಕೆ ಸೇವೆಗಳನ್ನು ಒದಗಿಸುವಲ್ಲಿ ನಮ್ಮ ಗಮನವು ಒಂದೇ ಆಗಿರುತ್ತದೆ. ನಮ್ಮ ಗಮನ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಇದೆ. ಆ ಗಮನ ನಿಖರವಾಗಿರುತ್ತದೆ. ಮತ್ತು ಆ ಗುರಿಯನ್ನು ವೇಗವಾಗಿ ತಲುಪುತ್ತೇವೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Just In | Govt Sources: "Electronic Manufacturing is likely to be doubled in the next 5 years" pic.twitter.com/rAmZNjtA0i
— ET NOW (@ETNOWlive) June 15, 2024
ಭಾರತವು ಈಗಾಗಲೇ ಆಮದು ಪರ್ಯಾಯವನ್ನು ಬಿಟ್ಟು ಸ್ವಾವಲಂಬಿಯಾಗಿ ಇರಲು ಪ್ರಯತ್ನಿಸುತ್ತಿದೆ, ಮೊಬೈಲ್ ಪೋನ್ ಗಳಂತಹ ಕೆಲವು ವಿಭಾಗಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ. ಆದರೆ ಲ್ಯಾಪ್ ಟಾಪ್‌ಗಳಿಗೆ ಸಂಬಂಧಿಸಿದಂತೆ ಭಾರತವು ಅದನ್ನು ನಮ್ಮಲ್ಲೇ ಉತ್ಪಾದಿಸುವ ಹಂತದಲ್ಲಿದೆ. ಕೇಂದ್ರ ಸರ್ಕಾರವು ವಿವಿಧ ಪ್ರೋತ್ಸಾಹ ಯೋಜನೆಗಳ ಮೂಲಕ ದೇಶಿಯ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ 760 ಶತಕೋಟಿ ರೂಪಾಯಿಗಳ ಹಣಕಾಸಿನ ವೆಚ್ಚವನ್ನು ಎಲೆಕ್ಟ್ರಾನಿಕ್ ಉದ್ಯೋಗಿಗಳ ಬದ್ಧತೆಗೆ ವಿನಿಯೋಗಿಸುತ್ತಿದೆ. ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಚೀನಾ ಮತ್ತು ಹಾಂಗ್‌ಕಾಂಗ್ ದೇಶಗಳು ಭಾರತದಿಂದ ಕ್ರಮವಾಗಿ 44 ಪ್ರತಿಶತ ಮತ್ತು 16 ಪ್ರತಿಶತದಷ್ಟು ಒಟ್ಟು ಎಲೆಕ್ಟ್ರಾನಿಕ್ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಮತ್ತೊಂದೆಡೆ ಭಾರತದಿಂದ ತಯಾರಿಸಿದ ಮೊಬೈಲ್ ಪೋನ್‌ಗಳು ಮತ್ತು ಎಲೆಕ್ಟ್ರಾನಿಕ್ ನಿಯಂತ್ರಣ ಘಟಕಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಯುಎಇ ಹೆಚ್ಚು ರಪ್ತಾಗುತ್ತಿದೆ.
ಇದನ್ನೂ ಓದಿ: NEET UG 2024: ಮಗಳ ಜೊತೆ ಸೇರಿ ನೀಟ್ ಯುಜಿ ಪರೀಕ್ಷೆ ಬರೆದು ಪಾಸಾದ ಅಪ್ಪ!
ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಪರಿವರ್ತನೆಯಿಂದ ಭಾರತವು ಜಾಗತಿಕ ಎಲೆಕ್ಟ್ರಾನಿಕ್ ಉತ್ಪಾದನಾ ಕೇಂದ್ರವಾಗಿ ಸ್ಥಾನ ಪಡೆಯಲಿದೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ತಾಂತ್ರಿಕ ಆವಿಷ್ಕಾರ ಬಲಗೊಳ್ಳಲಿದೆ, ಅದಕ್ಕಾಗಿ ಭಾರತ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿದೆ. ಇದಲ್ಲದೇ ದೇಶದಲ್ಲಿ ಸುಸ್ಥಿರ ಅರೆವಾಹಕ ಮತ್ತು ಪ್ರದರ್ಶನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯೊಂದಿಗೆ 10 ಶತಕೋಟಿ ಡಾಲರ್ ಪ್ರೋತ್ಸಾಹಕ ವೆಚ್ಚದೊಂದಿಗೆ ಸರ್ಕಾರವು ಸೆಮಿಕಾನ್ ಇಂಡಿಯಾ ಕಾರ್ಯಕ್ರಮನ್ನು ಪರಿಚಯಿಸಿದೆ.