ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ 2024ಕ್ಕೆ 627 ನಿರ್ವಹಣೆ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಯನ್ನು (Job Recruitment )ಘೋಷಿಸಿದೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ bankofbaroda.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 2, 2024 ಕೊನೆಯ ದಿನವಾಗಿದೆ.
ಹುದ್ದೆಯ ವಿವರಗಳು:
- ಡೆಪ್ಯುಟಿ ಉಪಾಧ್ಯಕ್ಷ – ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಎಂಜಿನಿಯರ್ : 4 ಹುದ್ದೆಗಳು
- ಸಹಾಯಕ ಉಪಾಧ್ಯಕ್ಷ- ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಎಂಜಿನಿಯರ್ : 9 ಹುದ್ದೆಗಳು
- ಆರ್ಕಿಟೆಕ್ಟ್ : 8 ಹುದ್ದೆಗಳು
- ಝೋನಲ್ ಸೇಲ್ಸ್ ಮ್ಯಾನೇಜರ್ : 3 ಹುದ್ದೆಗಳು
- ಸಹಾಯಕ ಉಪಾಧ್ಯಕ್ಷ : 20 ಹುದ್ದೆಗಳು
- ಸೀನಿಯರ್ ಮ್ಯಾನೇಜರ್ : 22 ಹುದ್ದೆಗಳು
- ಮ್ಯಾನೇಜರ್ : 11 ಹುದ್ದೆಗಳು
- ರೇಡಿಯನ್ಸ್ ಪ್ರೈವೇಟ್ ಸೇಲ್ಸ್ ಹೆಡ್ : 1 ಹುದ್ದೆ
- ಗ್ರೂಪ್ ಹೆಡ್ : 4 ಹುದ್ದೆಗಳು
- ಟೆರಿಟರಿ ಮುಖ್ಯಸ್ಥ : 8 ಹುದ್ದೆಗಳು
- ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್ : 234 ಹುದ್ದೆಗಳು
- ಇ-ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್ : 26 ಹುದ್ದೆಗಳು
- ಪ್ರೈವೇಟ್ ಬ್ಯಾಂಕರ್- ರೇಡಿಯನ್ಸ್ ಪ್ರೈವೇಟ್: 12 ಹುದ್ದೆಗಳು
- ಗ್ರೂಪ್ ಸೇಲ್ಸ್ ಹೆಡ್(ವರ್ಚುವಲ್ ಆರ್ ಎಂ ಸೇಲ್ಸ್ ಹೆಡ್):1 ಹುದ್ದೆ
- ವೆಲ್ತ್ ಸ್ಟ್ರಾಟಜಿಸ್ಟ್(ಹೂಡಿಕೆ ಮತ್ತು ವಿಮೆ)/ಪ್ರೊಡಕ್ಟ್ ಹೆಡ್ : 10 ಹುದ್ದೆಗಳು
- ಪೋರ್ಟ್ಪೊಲಿಯೊ ರಿಸರ್ಚ್ ಆ್ಯನಲಿಸ್ಟ್ :1 ಹುದ್ದೆ
- ಎವಿಪಿ- ಸ್ವಾಧೀನ ಮತ್ತು ಸಂಬಂಧ ನಿರ್ವಾಹಕ: 19 ಹುದ್ದೆಗಳು
- ವಿದೇಶಿ ವಿನಿಮಯ ಮತ್ತು ಸಂಬಂಧ ವ್ಯವಸ್ಥಾಪಕ : 15 ಹುದ್ದೆಗಳು
- ಕ್ರೆಡಿಟ್ ಆ್ಯನಲಿಸ್ಟ್ : 80 ಹುದ್ದೆಗಳು
- ರಿಲೇಶನ್ ಶಿಪ್ ಮ್ಯಾನೇಜರ್ : 66 ಹುದ್ದೆಗಳು
- ಸೀನಿಯರ್ ಮ್ಯಾನೇಜರ್ –ಬಿಸಿನೆಸ್ ಫೈನಾನ್ಸ್ : 4 ಹುದ್ದೆಗಳು
- ಮುಖ್ಯ ವ್ಯವಸ್ಥಾಪಕ- ಇಂಟರ್ ನಲ್ ಕಂಟ್ರೋಲ್ಸ್ : 3 ಹುದ್ದೆಗಳು
ಅರ್ಹತೆ ಏನು?
ಬ್ಯಾಂಕ್ ಆಫ್ ಬರೋಡಾ ಆಸಕ್ತ ಅರ್ಜಿದಾರರಿಗೆ ಲಿಖಿತ ಪರೀಕ್ಷೆಗಳು ಮತ್ತು ಸಂದರ್ಸನಗಳನ್ನು ಒಳಗೊಂಡ ಆಯ್ಕೆ ಪ್ರಕ್ರಿಯೆ ಇರುತ್ತದೆ. ಅಧಿಸೂಚನೆಯಲ್ಲಿ ವಿವರಿಸಿರುವ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಅನುಸರಿಸುವ ಮೂಲಕ ಅಭ್ಯರ್ಥಿಗಳು ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬಹುದು. ಹೆಚ್ಚವರಿಯಾಗಿ ಬ್ಯಾಂಕ್ ಆಫ್ ಬರೋಡಾ ಪ್ರತಿ ಉದ್ಯೋಗಕ್ಕೆ ಸಂಬಂಧಿಸಿದ ಜವಾಬ್ದಾರಿಗಳು ಮತ್ತು ನಿರೀಕ್ಷೆಗಳ ಬಗ್ಗೆ ಮೌಲ್ಯಯುತವಾದ ವಿವರಗಳನ್ನು ನೀಡುತ್ತದೆ ಮತ್ತು ಅಭ್ಯರ್ಥಿಗಳು ಸಂಸ್ಥೆಯೊಳಗೆ ತಮ್ಮ ವೃತ್ತಿ ಜೀವನದ ಭವಿಷ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ನೇಮಕಾತಿ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳ ಪ್ರತಿಭೆಯನ್ನು ಗಮನಿಸಿ ಬ್ಯಾಂಕ್ ಆಫ್ ಬರೋಡಾ ಉನ್ನತ ಅರ್ಹ ವ್ಯಕ್ತಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಅಭ್ಯರ್ಥಿಗಳು ಅಪ್ಲಿಕೇಶನ್ ಪ್ರಕ್ರಿಯೆ ಸಮಯದಲ್ಲಿ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಸಮರ್ಥಿಸಬಹುದು.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಬಂದ ಅರ್ಹ ಅಭ್ಯರ್ಥಿಗಳ ರೆಸ್ಯೂಮ್ ಗಳು ಮತ್ತು ಅಪ್ಲಿಕೇಶನ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುವುದು. ಇಂಟರ್ ವೀವ್ ನಲ್ಲಿ ಅಭ್ಯರ್ಥಿಯ ಕೌಶಲ, ಅನುಭವ ಮತ್ತು ಸ್ಥಾನಕ್ಕೆ ಸರಿಹೊಂದುವಂತಹ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಕೌಶಲ್ಯ ಪರೀಕ್ಷೆ, ಗ್ರೂಪ್ ಇಂಟರ್ ವೀವ್ ನಂತಹ ಇತರ ವಿಧಾನಗಳಿಂದ ಅಭ್ಯರ್ಥಿಗಳ ಸಾಮರ್ಥ್ಯವನ್ನು ಗಮನಿಸಲಾಗುತ್ತದೆ. ಅದರಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ EWS ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ಜೊತೆಗೆ GST ಮತ್ತು ವಹಿವಾಟು ಶುಲ್ಕಗಳನ್ನು ನೀಡಬೇಕಾಗುತ್ತದೆ. SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳು 100 ರೂ. ಜೊತೆಗೆ GST ಮತ್ತು ವಹಿವಾಟು ಶುಲ್ಕಗಳನ್ನು ನೀಡಬೇಕಾಗುತ್ತದೆ. ಹಾಗೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿ ಶುಲ್ಕ ಪಾವತಿಸಬಹುದು.
ಇದನ್ನೂ ಓದಿ: Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್
ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.