ದೆಹಲಿ: ಗುಟ್ಕಾ ಇದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಸೇವಿಸುವುದರಿಂದ ಕ್ಯಾನ್ಸರ್, ಉಸಿರಾಟದಂತಹ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದೆಲ್ಲ ಗೊತ್ತಿದ್ದರೂ ಗುಟ್ಕಾ ತಿನ್ನುವವರು ಕಡಿಮೆಯಾಗಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ (JP Nadda) ಅವರು ಗುಟ್ಕಾ ತಿನ್ನುತ್ತಿದ್ದಾರೆ ಎನ್ನಲಾದ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಕೇಂದ್ರ ಆರೋಗ್ಯ ಸಚಿವರಾದ ಜೆ ಪಿ ನಡ್ಡಾ ಅವರು ಆರೋಗ್ಯಕ್ಕೆ ಹಾನಿಕಾರಕವಾದ ಗುಟ್ಕಾ ಸೇವಿಸಿದ್ದಾರೆ ಎಂಬ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು. ಅದಕ್ಕೆ ನೆಟಿಜನ್ ಸಚಿವರ ಮೇಲೆ ಕಿಡಿಕಾರಿದ್ದಾರೆ.
Health Minister khaini kha raha hai 🫤 pic.twitter.com/RvK2GxmTHH
— Azy (@Azycontroll_) June 12, 2024
ನಿಜಕ್ಕೂ ತಿಂದಿದ್ದೇನು?:
ವೈರಲ್ ಆದ ವಿಡಿಯೊದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಸಣ್ಣ ಪೆಟ್ಟಿಗೆಯಂತಹ ಪ್ಯಾಕೆಟ್‌ನಿಂದ ಏನೋ ತಿನ್ನುತ್ತಾರೆ. ಆಗ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅವರ ಕೈಯಿಂದ ತಾವೂ ಸ್ವಲ್ಪ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್ ನೋಡಿದ ನೆಟಿಜನ್ ಕೇಂದ್ರ ಸಚಿವರು ಗುಟ್ಕಾ ಸೇವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಕೆಲವು ಮಂದಿ ಇದು ಸುಳ್ಳು, ಅವರು ಸೇವಿಸುತ್ತಿರುವುದು ಗುಟ್ಕಾ ಅಲ್ಲ ‘ಯೋಗಿ ಕಂಠಿಕಾ ಮಾತ್ರೆ’ ಎಂದು ಸಮರ್ಥನೆ ನೀಡಿದ್ದಾರೆ. ಹಾಗೆಯೇ ಯೋಗಿ ಕಂಠಿಕಾದ ಪೋಟೊವನ್ನು ಶೇರ್ ಮಾಡಿದ ಬಳಕೆದಾರರು ಅದು ಗಂಟಲಿನಲ್ಲಿ ಕಿರಿಕಿರಿಯಾದಾಗ ಸೇವಿಸುವ ಆಯುರ್ವೇದದ ಮಾತ್ರೆ. ನಡ್ಡಾ ಮತ್ತು ಗಡ್ಕರಿ ಅದನ್ನು ಗಂಟಲು ಸರಿಮಾಡಿಕೊಳ್ಳುವುದಕ್ಕಾಗಿ ಸೇವಿಸಿದ್ದಾರೆ ಎಂದು ಸಚಿವರ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: Viral Video: ಪುಷ್ಪ 2 ಚಿತ್ರದ ‘ಅಂಗಾರನ್’ ಹಾಡಿಗೆ ಪತ್ನಿ ಜೊತೆ ಸ್ಟೆಪ್ ಹಾಕಿದ ವಿಶೇಷ ಚೇತನ
ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕ್ಯಾಬಿನೆಟ್‌ನಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವನ್ನು ಹಂಚಿಕೆ ಮಾಡಲಾಗಿದೆ. ನವೆಂಬರ್ 9, 2014ರಿಂದ ಮೇ 30, 2019ರವರೆಗೆ ಪ್ರಧಾನಿ ಮೋದಿಯವರ ಮೊದಲ ಕ್ಯಾಬಿನೆಟ್‌ನಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ನಡ್ಡಾ ಅವರು ಇದೀಗ ಮತ್ತೆ ಸಚಿವಾಲಯದ ಮುಖ್ಯಸ್ಥರಾಗಿದ್ದಾರೆ. 63 ವರ್ಷದ ಜೆಪಿ ನಡ್ಡಾ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮಂತ್ರಿಮಂಡಲಕ್ಕೆ ಮರಳಿದ್ದು, ಕ್ಯಾಬಿನೆಟ್‌ನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.